ಬೆಂಗಳೂರು : ಮುಡಾದಲ್ಲಿ ಸಾವಿರಾರು ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು RTI ಕಾರ್ಯಕರ್ತ ಗಂಗರಾಜು ಅವರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಗಂಗರಾಜು ಅವರು ಬೆಂಗಳೂರಿನಲ್ಲಿರುವ ಜಾರಿ ನಿರ್ದೇಶನಾಲಯ ಕಛೇರಿಗೆ ದಾಖಲೆಗಳೊಂದಿಗೆ ಆಗಮಿಸಿ ವಿಚಾರಣೆಗೆ ಹಾಜರಾಗಿದ್ದಾರೆ.
ವಿಚಾರಣೆಗೆ ಹಾಜರಾಗುವ ಮುನ್ನ ನಿನ್ನೆ ಮಧ್ಯಾಹ್ನ ಇಡಿ ಅಧಿಕಾರಿಗಳು ಕರೆ ಮಾಡಿ ವಿಚಾರಣೆಗೆ ಬರಲು ಹೇಳಿದ್ದರು. ಈ ಹಿಂದೆ ಬಂದಾಗ ಕೆಲ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿದ್ದೆ. ಅಂದು ಹೇಳಿಕೆಯನ್ನು ದಾಖಲಿಸಿರಲಿಲ್ಲ. ಇವತ್ತು ನನ್ನ ಹೇಳಿಕೆಯನ್ನು ಅಧಿಕಾರಿಗಳು ದಾಖಲಿಸಬಹುದು. ಮುಡಾ ಅಕ್ರಮದ ದಾಖಲೆಗಳನ್ನು ತೆಗೆದುಕೊಂಡು ಬಂದಿದ್ದೇನೆ. ಕೇವಲ ಸಿಎಂ ಸಿದ್ದರಾಮಯ್ಯ ಪಡೆದಿದ್ದ ಸೈಟ್ ಗಳು ಮಾತ್ರ ಅಲ್ಲ ಮುಡಾದಲ್ಲಿ ನಡೆದ 5000 ಕೋಟಿ ಅಕ್ರಮದ ತನಿಖೆ ಕೂಡ ಆಗಬೇಕು.
ಆ ನಿಟ್ಟಿನಲ್ಲಿ ನನ್ನ ಬಳಿ ಇರುವ ಎಲ್ಲಾ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡುತ್ತೇನೆ ಎಂದರು.ಸಚಿವ ಭೈರತಿ ಸುರೇಶ್ ಹಿಂದಿನ ಆಯುಕ್ತರಿಗೆ ಸರ್ಚ್ ವಾರಂಟ್ ಕುರಿತು ಮಾಹಿತಿ ಸೋರಿಕೆಯಾಗಿದೆ.ಜಿ ಟಿ ದಿನೇಶ್ ಕುಮಾರ್ ನಟೇಶ್ ಗೆ ಮಾಹಿತಿ ನೀಡಿದ್ದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ನನ್ನ ಬಳಿ ದಾಖಲೆ ಇದೆ ಇಡಿ ಅಧಿಕಾರಿಗಳಿಗೆ ನೀಡುತ್ತೇನೆ. ಮೂಡಾದಲ್ಲಿ 5000 ಕೋಟಿ ಅಕ್ರಮ ನಡೆದಿದೆ. ಸಿದ್ದರಾಮಯ್ಯ ಅವರದು 20ರಿಂದ 25 ಕೋಟಿ ರೂಪಾಯಿ ಅಕ್ರಮ ನಡೆದಿದೆ ಈ ಪ್ರಕರಣವನ್ನು ಸಿಬಿಐಗೆ ವಹಿಸಲೇಬೇಕು ಎಂದು ಗಂಗರಾಜು ಆಗ್ರಹಿಸಿದರು.
ಮುಡಾದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರ್‌ಟಿಐ ಕಾರ್ಯಕರ್ತ ಗಂಗರಾಜು ಅವರು ಈ ಹಿಂದೆ ಇಡಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಒಂದು ದೂರಿನ ಹಿನ್ನೆಲೆಯಲ್ಲಿ, ನಿನ್ನೆ ಇಡೀ ಅಧಿಕಾರಿಗಳು ಆರೋಪದ ಕುರಿತಂತೆ ಮಾಹಿತಿ ನೀಡುವಂತೆ ನಾಳೆ ವಿಚಾರಣೆಗೆ ಬರಬೇಕು ಎಂದು ನೋಟಿಸ್ ಜಾರಿ ಮಾಡಿದ್ದರು.ಹಾಗಾಗಿ ಇಡಿ ಅಧಿಕಾರಿಗಳ ಬುಲಾವ್ ಹಿನ್ನೆಲೆಯಲ್ಲಿ ಇಂದು RTI ಕಾರ್ಯಕರ್ತ ಗಂಗರಾಜು ಅವರು, ಬೆಂಗಳೂರಿನ ಶಾಂತಿನಗರದಲ್ಲಿರುವ ಇಡಿ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ವಿಚಾರಣೆಗೆ ಹಾಜರಾಗಿದ್ದಾರೆ.