ಮಹಾರಾಷ್ಟ್ರ : ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿ ಎ ನೇತೃತ್ವದ ಬಿಜೆಪಿಯು 230 ಕ್ಕೂ ಅಧಿಕ ಸ್ಥಾನಗಳನ್ನು ಪಡೆದು ದಾಖಲೆ ನಿರ್ಮಿಸಿದೆ. ಫಲಿತಾಂಶ ಬಂದ ಬಳಿಕ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿ ನೇಮಕವಾಗುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಇದೀಗ ಬಿಜೆಪಿ ಮತ್ತು ಶಿವಸೇನೆಯ ಶಿಂಧೆ ಬಣದ ನಡುವೆ ಸಿಎಂ ಕುರ್ಚಿಗಾಗಿ ಹಗ್ಗಜಗಾಟ ನಡೆಯುತ್ತಿದೆ.
ಹೌದು ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಆಯ್ಕೆ ಇನ್ನೂ ಬಗೆಹರಿದಿಲ್ಲ. ಸಿಎಂ ಕುರ್ಚಿಗೆ ಬಿಜೆಪಿ ಮತ್ತು ಶಿವಸೇನೆಯ ಶಿಂಧೆ ಬಣದ ನಡುವೆ ಹಗ್ಗ ಜಗ್ಗಾಟ ಮುಂದುವರೆದಿದೆ. ಫಲಿತಾಂಶ ಮತ್ತು 4 ದಿನಗಳಾದರೂ ಸಹ ಸಿಎಂ ಆಯ್ಕೆ ಕಗ್ಗಂಟು ಇನ್ನೂವರೆಗೂ ಬಗೆಹರಿದಿಲ್ಲ. ಸಿಎಂ ಸ್ಥಾನವನ್ನು ಶಿವಸೇನೆಗೆ ಬಿಟ್ಟುಕೊಡಲು ಬಿಜೆಪಿ ಇದುವರೆಗೂ ಮನಸ್ಸು ಮಾಡಿಲ್ಲ.
ಇನ್ನು ಮುಖ್ಯಮಂತ್ರಿ ಸ್ಥಾನ ತನಗೆ ಬೇಕು ಎಂದು ಶಿವಸೇನೆಯ ಶಿಂಧೆ ಬಣ ಪಟ್ಟು ಹಿಡಿದುಕೊಂಡಿದೆ. ಬಿಹಾರ ಮಾದರಿಯಲ್ಲಿ ಸಿಎಂ ಆಯ್ಕೆ ಇರಲಿ ಎಂದು ಶಿವಸೇನೆ ಬಣ ಹೇಳುತ್ತಿದೆ. ಬಿಹಾರ್ ಮಾದರಿಯ ಸಿಎಂ ಆಯ್ಕೆಗೆ ಬಿಜೆಪಿ ಹೈಕಮಾಂಡ್ ಒಪ್ಪುತ್ತಿಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿದ್ದು ಪಕ್ಷ ಬಲವಾಗಿದೆ. ಆದರೆ ಬಿಹಾರದಲ್ಲಿ ಚುನಾವಣೆಗು ಮೊದಲೇ ಸಿಎಂ ಸ್ಥಾನಕ್ಕಾಗಿ ಒಪ್ಪಂದವಾಗಿತ್ತು ಆದರೆ ಮಹಾರಾಷ್ಟ್ರದಲ್ಲಿ ಸಿಎಂ ಸ್ಥಾನವನ್ನು ಬಿಜೆಪಿ ಬಿಟ್ಟುಕೊಡಲ್ಲ ಎಂದು ಹೇಳುತ್ತಿದೆ.