ಆಗ್ರಾ : ಸ್ನೇಹಿತರೊಂದಿಗೆ ತಾಜ್ ಮಹಲ್ ನೋಡಲು ಬಂದಿದ್ದ ವ್ಯಕ್ತಿಯೊಬ್ಬರಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿದೆ. ಆತನ ಸ್ನೇಹಿತರು ಸಕಾಲದಲ್ಲಿ ಆತನಿಗೆ ಸಿಪಿಆರ್ ನೀಡಿ ಪ್ರಾಣ ಉಳಿಸಿದ್ದಾರೆ. ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಾಹಿತಿ ಪ್ರಕಾರ ಹರಿಯಾಣದ ಹರ್ಷ ಶರ್ಮಾ ಎಂಬ ಯುವಕ ತನ್ನ ಸ್ನೇಹಿತನ ಆಗ್ರಾ ತಾಜ್ ಮಹಲ್ ನೋಡಲು ಬಂದಿದ್ದು, ಟಿಕೆಟ್ ಕೊಳ್ಳುವಾಗ ಇದ್ದಕ್ಕಿದ್ದಂತೆ ಹೃದಯಾಘಾತವಾಗಿದೆ. ಇದರ ನಂತರ, ಆತನ ಸ್ನೇಹಿತರು ತಕ್ಷಣವೇ ಅವನಿಗೆ ಸಿಪಿಆರ್ ನೀಡಲು ಪ್ರಾರಂಭಿಸಿದ್ದು, ಕೆಲವು ಸ್ನೇಹಿತರು ಅವನ ಕೈ ಮತ್ತು ಕಾಲುಗಳನ್ನ ಉಜ್ಜುತ್ತಲೇ ಇದ್ದರು. ಸ್ವಲ್ಪ ಸಮಯದ ನಂತರ ಆಂಬ್ಯುಲೆನ್ಸ್ ಬಂದಿದ್ದು, ಯುವಕನನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ತಾಜ್ ಮಹಲ್ ಭೇಟಿಗೆ ಬಂದ ವ್ಯಕ್ತಿಗೆ ಹೃದಯಾಘಾತ.!
#sonipat से दोस्तों के साथ ताजमहल देखने आए हर्ष की तबीयत अचानक बिगड़ गई। इसके बाद हर्ष के दोस्त ने उन्हें सीपीआर दिया। सीपीआर देने से हर्ष की जान बच गई।
सीपीआर की ट्रेनिंग हर किसी को दी जानी चाहिए, कभी भी किसी की जान बच सकती है। #agra @TajMahal #CPR #heartattack #Arcane pic.twitter.com/ae5WDCNKDe— राघवेन्द्र सिंह गहलोत (@ThakurRaghvan) November 25, 2024
BREAKING : RBI ಗವರ್ನರ್ ಆಗಿ ‘ಶಕ್ತಿಕಾಂತ್ ದಾಸ್’ 3ನೇ ಅವಧಿಗೆ ಆಯ್ಕೆ ಸಾಧ್ಯತೆ : ವರದಿ