ಬೆಂಗಳೂರು : ಚಿತ್ರದುರ್ಗದ ರೇಣುಕಾಶ್ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಹೈಕೋರ್ಟ್ ನಲ್ಲಿ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈಗಾಗಲೇ ದರ್ಶನ್ ಅವರು ಬೆನ್ನುನೋವಿನ ಕಾರಣ ತಿಳಿಸಿ ಹೈಕೋರ್ಟ್ ನಿಂದ ಮಧ್ಯಂತರ ಜಾಮೀನು ಪಡೆದುಕೊಂಡು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇಂದು ವಿಚಾರಣೆ ನಡೆಸಿದ ನ್ಯಾ.ಎಸ್ ವಿಶ್ವಜಿತ್ ಅವರಿದ್ದ ಹೈಕೋರ್ಟ್ ಪೀಠವು ಜಾಮೀನು ಅರ್ಜಿ ವಿಚಾರಣೆ ಸಂಜೆ 4 ಗಂಟೆಗೆ ಮುಂದೂಡಿದರು.
ವಿಚಾರಣೆ ವೇಳೆ ಹೈ ಕೋರ್ಟ್ ನಲ್ಲಿ ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ವಾದ ಮಂಡಿಸಿದರು. ಈ ವೇಳೆ ರೇಣುಕಾ ಸ್ವಾಮಿಯನ್ನು ಅಪಹರಿಸಿದ ದಿನದಿಂದ, ಕೊಲೆಯಾದ ಬಳಿಕ ಆರೋಪಿಗಳು ಶವ ಸ್ಥಳಾಂತರಿಸಿದರ ಬಗ್ಗೆ ಹಾಗೂ ದರ್ಶನ್ ಪಾತ್ರ ಇದರಲ್ಲಿ ಇಲ್ಲ ಎನ್ನುವುದರ ಕುರಿತಂತೆ ಸಿವಿ ನಾಗೇಶ್ ಅವರು ನ್ಯಾಯಾಧೀಶರಿಗೆ ಎಲ್ಲ ವಿಚಾರವನ್ನು ಮನವರಿಕೆ ಮಾಡಿದರು. ವಾದವನ್ನು ಆಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿ ವಿಚಾರಣೆ ಸಂಜೆ 4 ಗಂಟೆಗೆ ಮುಂದೂಡಿದರು.
ದರ್ಶನ್ ಪಾತ್ರ ಸಾಬೀತುಪಡಿಸುವ ಮತ್ತಷ್ಟು ಸಾಕ್ಷಿಗಳನ್ನು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ವಿಚಾರಣಾ ನ್ಯಾಯಾಲಯಕ್ಕೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಆರೋಪಿಗಳೊಂದಿಗೆ ನಟ ದರ್ಶನ ತೆಗೆಸಿಕೊಂಡಿದ್ದ ಫೋಟೋ ಕೂಡ ಇದೀಗ ವಶಕ್ಕೆ ಪಡೆದುಕೊಳ್ಳಲಾಗಿದೆ. ಕೊಲೆಯ ಬಳಿಕ ನಟ ದರ್ಶನ್ ಆರೋಪಿಗಳೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ದರ್ಶನ್ ಧರಿಸಿರುವ ಅದೇ ಬಟ್ಟೆ ಮತ್ತು ಶೂಗಳನ್ನು ವಶಕ್ಕೆ ಪಡೆಯಲಾಗಿದೆ.