ಹೊಸಪೇಟೆ : ಇತ್ತೀಚಿಗೆ ಕಾಂಗ್ರೆಸ್ ಶಾಸಕ ಗವಿಯಪ್ಪ ಅವರು ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಸರಿಯಾಗಿ ಅನುದಾನ ಸಿಗುತ್ತಿಲ್ಲ ಎಂದು ಕಳೆದ ಕೆಲವು ದಿನಗಳ ಹಿಂದೆ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇದೀಗ ಗ್ಯಾರಂಟಿ ಯೋಜನೆಗಳಲ್ಲಿ ಒಂದೆರಡನ್ನು ತೆಗೆದು ಹಾಕಿದರೆ ಅನುದಾನಕ್ಕೆ ಅನುಕೂಲವಾಗಲಿದೆ ಎಂದು ಗ್ಯಾರಂಟಿ ತೆರವಿಗೆ ಅವರು ಆಗ್ರಹಿಸಿದ್ದಾರೆ.
ಹೊಸಪೇಟೆಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗ್ಯಾರಂಟಿ ರದ್ದಿಗೆ ಕಾಂಗ್ರೆಸ್ ಶಾಸಕ ಗವಿಯಪ್ಪ ಆಗ್ರಹಿಸಿದ್ದು, ಗ್ಯಾರಂಟಿ ಯೋಜನೆಯಲ್ಲಿ ಒಂದು ಎರಡು ಯೋಜನೆ ರದ್ದು ಮಾಡಿದರೆ ಅನುಕೂಲವಾಗುತ್ತದೆ. ಯೋಜನೆ ರದ್ದು ಮಾಡುವುದರಿಂದ ಅನುದಾನಕ್ಕೆ ಅನುಕೂಲವಾಗಲಿದೆ. ಜಿಲ್ಲೆಯ ಜನರಿಗೆ ಆಶ್ರಯ ಮನೆಗಳು ಬರುತ್ತಿಲ್ಲ. ಗ್ಯಾರಂಟಿ ತೆಗೆಯಿರಿ ಎಂದು ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳುತ್ತೇನೆ ಅವರೇನು ತೀರ್ಮಾನ ಮಾಡುತ್ತಾರೆ ನೋಡೋಣ ಎಂದರು.
ಗ್ಯಾರಂಟಿ ಗಳಿಂದ ಸ್ವಲ್ಪ ಆಶ್ರಯ ಮನೆಗಳನ್ನು ಕೊಳ್ಳುವುದು ಕಷ್ಟ ಆಗುತ್ತಿದೆ. ಇವಾಗ ಅದೇ ಹಿನ್ನೆಲೆ ನಾವು ಮುಖ್ಯಮಂತ್ರಿಗಳಿಗೆ ಕೇಳ್ತಾ ಇದ್ದೇವೆ. ಎರಡು-ಮೂರು ಈ ಗ್ಯಾರಂಟಿ ಯೋಜನೆಗಳನ್ನ ತೆಗೆದು ಬಿಟ್ಟು ಮನೆಗಳನ್ನು ಕೊಡಿರಿ ಎಂದು ಕೇಳಬೇಕು ಅಂತ ಇದೆ ನೋಡೋಣ ಮುಖ್ಯಮಂತ್ರಿಗಳಿಗೆ ತೀರ್ಮಾನ ಬಿಟ್ಟಿರುವುದು ಅವರೇನು ತೀರ್ಮಾನ ನೀಡುತ್ತಿರೋ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.