ಹಾಸನ : ಹಾಸನ ನಗರಸಭೆಗೆ ನಡೆದ ಚುನಾವಣಯಲ್ಲಿ ಕಾಂಗ್ರೆಸ್ ಗೆ ಭರ್ಜರಿ ಗೆಲುವು ಸಿಕ್ಕಿದ್ದು, ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷಗಳಿಗೆ ತೀವ್ರ ಮುಖಭಂಗವಾಗಿದೆ. ಹಾಸನದ ನಗರ ಸಭೆ ಉಪಚುನಾವಣೆಯಲ್ಲಿ ನಡೆದ 8 ಸ್ಥಾನಗಳ ಪೈಕಿ 7ರಲ್ಲಿ ಕಾಂಗ್ರೆಸ್ ಗೆದ್ದಿದ್ದು 1ರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಜೆಡಿಎಸ್ ನಿಂದ ಗೆದ್ದು ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದ ಆರೋಪದ ಹಿನ್ನೆಲೆಯಲ್ಲಿ ನಗರಸಭೆ 7 ಸದಸ್ಯರನ್ನು ಅನರ್ಹಗೊಳಿಸಲಾಗಿತ್ತು. ಒಬ್ಬ ಸದಸ್ಯ ರಾಜೀನಾಮೆಯಿಂದ ಒಂದು ಸ್ಥಾನ ತೆರವಾಗಿತ್ತು. ನವೆಂಬರ್ 23ರಂದು ತೆರವಾಗಿದ್ದ 8 ವಾರ್ಡ್ ಗಳಿಗೆ ಉಪಚುನಾವಣೆ ನಡೆದಿತ್ತು.
7 ವಾರ್ಡ್ ಗಳಲ್ಲಿ ಇದೀಗ ಕಾಂಗ್ರೆಸ್ ಹಾಗೂ 1 ವಾರ್ಡ್ನಲ್ಲಿ ಪಕ್ಷೇತರ ಗೆಲುವು ಸಾಧಿಸಿದೆ. ಗೆಲುವಿನ ಬಳಿಕ ಶಾಸಕ ಶಿವಲಿಂಗೇಗೌಡರಿಂದ ವಿಜಯೋತ್ಸವ ಆಚರಿಸಲಾಯಿತು. ಶಾಸಕ ಶಿವಲಿಂಗೇಗೌಡ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು.