ನವದೆಹಲಿ : ಸಾಮಾನ್ಯವಾಗಿ ದ್ವಿಚಕ್ರ ವಾಹನಗಳು ಪ್ರತಿ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೆ ಅನಿವಾರ್ಯವಾಗಿದೆ. ಆದರೆ, ಉತ್ತಮ ಮೈಲೇಜ್ ಪಡೆಯಲು ಏನು ಮಾಡಬೇಕು.? ಒಂದು ಲೀಟರ್ ಪೆಟ್ರೋಲ್ ಹಾಕಿಸಿದರೇ ಕಿಲೋಮೀಟರ್ ದೂರವೂ ಓಡುವುದಿಲ್ಲ ಎಂದು ಹಲವು ದ್ವಿಚಕ್ರ ವಾಹನ ಸವಾರರು ದೂರುತ್ತಾರೆ. ಹಾಗಾದ್ರೆ, ಉತ್ತಮ ಮೈಲೇಜ್ ಪಡೆಯಲು ಏನು ಮಾಡಬೇಕು? ದ್ವಿಚಕ್ರ ವಾಹನವನ್ನು ಹೇಗೆ ಬಳಸುವುದು?
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನಶೈಲಿಯಲ್ಲಿ ದ್ವಿಚಕ್ರ ವಾಹನವನ್ನ ಪ್ರಮುಖ ವಸ್ತುವಾಗಿ ಬಳಸುತ್ತಾನೆ. ಕೂಲಿ ಕಾರ್ಮಿಕನಿಂದ ಹಿಡಿದು ಹಿರಿಯ ನೌಕರನವರೆಗೆ ದ್ವಿಚಕ್ರ ವಾಹನ ಬಳಕೆಯಾಗುತ್ತದೆ. ಸಮಯಕ್ಕೆ ಸರಿಯಾಗಿ ಕೆಲಸ ಮಾಡಲು ದ್ವಿಚಕ್ರ ವಾಹನ ಅತ್ಯಗತ್ಯ. ಖಾಸಗಿ ನೌಕರರು, ಶಿಕ್ಷಕರು, ಪೊಲೀಸರು, ಮಹಿಳೆಯರು ಮತ್ತು ಕಾರ್ಮಿಕರು ಹೆಚ್ಚಾಗಿ ದ್ವಿಚಕ್ರ ವಾಹನಗಳನ್ನ ಬಳಸುತ್ತಿದ್ದಾರೆ.
ಆದರೆ ದ್ವಿಚಕ್ರ ವಾಹನವನ್ನ ಹೇಗೆ ಬಳಸಬೇಕು? ಅದು ಅನೇಕರಿಗೆ ತಿಳಿದಿಲ್ಲ. ಪ್ರತಿ 2,000 ಕಿಲೋಮೀಟರ್‌ಗಳಿಗೆ ಎಂಜಿನ್ ತೈಲವನ್ನ ಬದಲಾಯಿಸಬೇಕು. ಕಪ್ಪು ಹೊಗೆಯನ್ನ ತಡೆಗಟ್ಟಲು ಮೊದಲು ಏರ್ ಫಿಲ್ಟರ್’ನ್ನ ಆಗಾಗ್ಗೆ ಪರಿಶೀಲಿಸಿ. ಕ್ಲಚ್, ಬ್ರೇಕ್, ಟೈರ್ ಪರೀಕ್ಷಿಸಬೇಕು. ಆಗಾಗ ಇಂಜಿನ್ ಆಯಿಲ್ ಚೆಕ್ ಮಾಡಿ ಬದಲಾಯಿಸಬೇಕು, ಟೈರ್’ನಲ್ಲಿನ ಗಾಳಿಯನ್ನ ಆಗಾಗ ತಪಾಸಣೆ ಮಾಡುತ್ತಿರಬೇಕು, ಟೈರ್’ನಲ್ಲಿ ಸಾಕಷ್ಟು ಗಾಳಿ ಇರುವಂತೆ ನೋಡಿಕೊಳ್ಳಬೇಕು. ಇನ್ನು ಹೆಚ್ಚಾಗಿ ಅರ್ಧ ಕ್ಲಚ್’ನಲ್ಲಿ ಗಾಡಿ ಓಡಿಸಿದರೆ ಮೈಲೇಜ್ ಕಡಿಮೆಯಾಗುತ್ತದೆ, ಅತಿವೇಗದಲ್ಲಿ ಹೋದರೆ ಮೈಲೇಜ್ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತೆ.
BREAKING: ಭಾರತ ಸೇರಿದಂತೆ ವಿಶ್ವದಾದ್ಯಂತ ‘ವಾಟ್ಸ್ ಆಪ್’ ಸೇವೆಯಲ್ಲಿ ವ್ಯತ್ಯಯ: ಬಳಕೆದಾರರು ಪರದಾಟ | WhatsApp Down