ಚನ್ನಪಟ್ಟಣ : ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವರಾದಂತಹ ಹೆಚ್ಡಿ ಕುಮಾರಸ್ವಾಮಿ ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷರಾಗಿರುವಂತಹ ಬಿವೈ ವಿಜಯೇಂದ್ರ ಅವರ ಪಿತೂರಿಯಿಂದ ನಾನು ಬಿಜೆಪಿಯಿಂದ ಹೊರ ಬಂದೆ ಹೊರತು, ನಾನಾಗೆ ಬಿಟ್ಟು ಬರಲಿಲ್ಲ ಎಂದು ಕಾಂಗ್ರೆಸ್ ಶಾಸಕ ಸಿಪಿ ಯೋಗೇಶ್ವರ್ ತಿಳಿಸಿದರು.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಬಿಟ್ಟು ಬರಲಿಲ್ಲ ಪಿತೂರಿಯಿಂದಾಗಿ ಹೊರ ಬಂದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಶಾಸಕ ಸಿಪಿ ಯೋಗೇಶ್ವರ್ ಹೇಳಿಕೆ ನೀಡಿದರು. ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ ಪಿತೂರಿ ಮಾಡಿದರು. ಇವರ ಪಿತೂರಿಯಿಂದಾಗಿ ನಾನು ಬಿಜೆಪಿಯಿಂದ ಹೊರ ಬಂದೆ.
ಅನಿವಾರ್ಯ ರಾಜಕೀಯ ಸ್ಥಿತಿ ನನ್ನನ್ನು ಆ ರೀತಿ ಮಾಡಿಸಿದೆ.ನಾನು ಪಕ್ಕ ಕಾಂಗ್ರೆಸ್ಸಿಗ ನಾನು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ. ಜೆಡಿಎಸ್ ನವರು ಸೋತು ಸೋಣವಾಗಿದ್ದಾರಲ್ಲ ಅದಕ್ಕೇನು ಹೇಳುತ್ತಾರೆ? ಮಗನ್ನೇ ಗೆಲ್ಲಿಸಿಕೊಳ್ಳದವರು ಕೇಂದ್ರ ಸಚಿವರಾಗಿ ಏನು ಪ್ರಯೋಜನ? ಕುಮಾರಸ್ವಾಮಿಗೆ ಇದ್ರೆ ಈ ಊರು ಬಿಟ್ಟರೆ ಇನ್ನೊಂದು ಊರು ಎಂದು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಶಾಸಕ ಸಿಪಿ ಯೋಗೇಶ್ವರ್ ತಿಳಿಸಿದರು.