ನವದೆಹಲಿ : ಭುವನೇಶ್ವರ್ ಕುಮಾರ್ ಬಿಡ್ಡಿಂಗ್ 10 ಕೋಟಿ ದಾಟಿದ್ದು, ಮುಂಬೈ ಮತ್ತು ಲಕ್ನೋ ಹಿನ್ನಡೆಯಾಯಿತು ಕೊನೆಗೆ ಬೆಂಗಳೂರು ಗೆದ್ದಿತು. ಭುವನೇಶ್ವರ್ ಕುಮಾರ್ ಅವರನ್ನ ಬೆಂಗಳೂರು ತಂಡ 10 ಕೋಟಿ 75 ಲಕ್ಷಕ್ಕೆ ಖರೀದಿಸಿದೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಎರಡೂ ತಮ್ಮ ತಂಡದಲ್ಲಿ ಕೃನಾಲ್ ಪಾಂಡ್ಯ ಅವರನ್ನ ಬಯಸಿದ್ದವು. ಆದ್ರೆ, ಅಂತಿಮವಾಗಿ ಆರ್ಸಿಬಿ 5.75 ಕೋಟಿ ರೂಪಾಯಿ ಬೆಲೆಗೆ ಆಲ್ರೌಂಡರ್’ರನ್ನ ಖರೀದಿಸಿತು. ಇನ್ನು ನಿತೀಶ್ ರಾಣಾ ಅವರನ್ನು ರಾಜಸ್ಥಾನ್ ರಾಯಲ್ಸ್ 4.20 ಕೋಟಿ ರೂ.ಗೆ ಖರೀದಿಸಿದೆ. ಇನ್ನು ಆರ್ಸಿಬಿಯ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ 2 ಕೋಟಿ ಬೆಲೆಗೆ ದೆಹಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ.
ಅಂದ್ಹಾಗೆ, ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ ಎರಡು ದಿನಗಳ ಮೆಗಾ ಹರಾಜು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿದೆ. ಇಂದು ಎರಡನೇ ಅಂದರೆ ಕೊನೆಯ ದಿನ (ನವೆಂಬರ್ 25) ಹರಾಜು ಕೂಡ ಆರಂಭವಾಗಿದೆ. ಎರಡನೇ ದಿನ 132 ಆಟಗಾರರು ಮಾರಾಟವಾಗಲಿದ್ದಾರೆ. ಇವುಗಳನ್ನು ಖರೀದಿಸಲು ಎಲ್ಲಾ 10 ತಂಡಗಳ ಪರ್ಸ್‌ನಲ್ಲಿ ಒಟ್ಟು 173.55 ಕೋಟಿ ರೂಪಾಯಿ ಇದೆ.
ಮೊದಲ ದಿನವೇ 3 ಆಟಗಾರರ ಮೇಲೆ ಹಣದ ಸುರಿಮಳೆಗೈದಿದ್ದು, ಐಪಿಎಲ್ ಇತಿಹಾಸದ ಎಲ್ಲಾ ದಾಖಲೆಗಳನ್ನ ಮುರಿದಿದೆ. ಈ ಮೂವರು ಆಟಗಾರರು ವಿಕೆಟ್‌ಕೀಪರ್ ರಿಷಬ್ ಪಂತ್, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಮತ್ತು ಆಲ್ ರೌಂಡರ್ ವೆಂಕಟೇಶ್ ಅಯ್ಯರ್. ಅದ್ರಂತೆ, ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) 27 ಕೋಟಿ ಬಿಡ್‌ನೊಂದಿಗೆ ಖರೀದಿಸಿತು. ಈ ಮೂಲಕ ಪಂತ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.
BREAKING : 2 ಕೋಟಿ ಬೆಲೆಗೆ ದೆಹಲಿ ಕ್ಯಾಪಿಟಲ್ಸ್ ಪಾಲಾದ RCB ಮಾಜಿ ನಾಯಕ ‘ಡು ಪ್ಲೆಸ್ಸಿಸ್’
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಬೆಂಬಲದಿಂದ ಬಿಜೆಪಿ ಗೆದ್ದಿದೆ ಅಂದ್ರೆ ಡಿಕೆಶಿ ಒಪ್ಪುವರೇ?: ಛಲವಾದಿ ನಾರಾಯಣಸ್ವಾಮಿ