ಶಿವಮೊಗ್ಗ : ಕ್ಷುಲ್ಲಕ ಕಾರಣಕ್ಕಾಗಿ ತಂದೆ ಮತ್ತು ಮಗನ ನಡುವೆ ಗಲಾಟೆ ನಡೆದಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಮಗ ಕೋಪದಲ್ಲಿ ಸುತ್ತಿಗೆಯಿಂದ ತಂದೆಗೆ ಹೊಡೆದು ಗಾಯಗೊಳಿಸಿ, ಭೀಕರವಾಗಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಆಶ್ರಯ ಕಾಲೋನಿಯಲ್ಲಿ ಈ ಒಂದು ಬರ್ಬರ ಕೊಲೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಮುಸ್ತಫಾ ಬೇಗ್ (42) ಎಂದು ತಿಳಿದುಬಂದಿದ್ದು, ಇನ್ನು ಶಾಹಿದ್ ಬೇಗ್ ಎನ್ನುವ ಪಾಪಿ ಮಗ ಹತ್ಯೆ ಮಾಡಿದಾವನಾಗಿದ್ದಾನೆ.
ಈ ಒಂದು ಹತ್ಯೆಯ ಘಟನೆಗೆ ಸಂಬಂಧಿಸಿದಂತೆ ಶಿಕಾರಿಪುರ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಮಗ ಶಾಹಿದ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.








