ರಾಮನಗರ : ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ನಿನ್ನೆ ಭರ್ಜರಿ ಗೆಲುವು ದಾಖಲಿಸಿದೆ. ಈ ಒಂದು ಗೆಲುವಿನ ಕುರಿತಾಗಿ ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಅವರು ಸ್ಫೋಟಕ ವಾದಂತಹ ಹೇಳಿಕೆ ನೀಡಿದ್ದು, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪರೋಕ್ಷವಾಗಿ ನಮಗೆ ಸಹಾಯ ಮಾಡಿದ್ದರಿಂದ ಈ ಒಂದು ಗೆಲವು ಸಿಕ್ಕಿದೆ ಎಂದು ತಿಳಿಸಿದರು.
ರಾಮನಗರ ಜಿಲ್ಲೆಯ ಕನಕಪುರದಲ್ಲಿ ಮಾತನಾಡಿದ ಅವರು, ಜನರು ಸಾಲದ ಹೊರೆಯನ್ನು ಹೊರೆಸಿದ್ದಾರೆ. ಮನೆ ಸೈಟ್ ಕೊಡುವುದಾಗಿ ನಾವು ವಾಗ್ದಾನ ನೀಡಿದ್ದೆವು. ಅನೇಕ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಕೊಡಬೇಕಿದೆ. ಜೆಡಿಎಸ್ ಮುಕ್ತ ರಾಮನಗರ ಜಿಲ್ಲೆ ಎಂಬ ವಿಚಾರವಾಗಿ ಮಾತನಾಡಿದ ಅವರು, ನಮಗೆ ಅದು ಮುಖ್ಯ ಅಲ್ಲ. ಮೊದಲು 19 ಶಾಸಕರು ಇದ್ದರು ಈಗ 18 ಆಗಿದ್ದಾರಷ್ಟೇ ಎಂದರು.
ಇನ್ನು ಚನ್ನಪಟ್ಟಣ ಫಲಿತಾಂಶದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಸ್ಪೋಟಕ ಹೇಳಿಕೆ ನೀಡಿದ್ದು, ಬಿಜೆಪಿ ಜೆಡಿಎಸ್ ನಾಯಕರ ಪರೋಕ್ಷ ಮತ್ತು ಪ್ರತ್ಯಕ್ಷವಾಗಿ ಸಹಾಯದಿಂದ ನಮಗೆ ಗೆಲವು ಸಿಕ್ಕಿದೆ. ಬಿಜೆಪಿ ಜೆಡಿಎಸ್ ನಾಯಕರು ನಮಗೆ ಸಹಾಯ ಮಾಡಿದ್ದಾರೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಇದ್ದಿದ್ದೇ ಕೇವಲ 16,000 ವೋಟ್ ಆಗಿದೆ.
ಹಾಗಾಗಿ ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ನ ಕೆಲ ನಾಯಕರೆಲ್ಲ ನಮಗೆ ಬೆಂಬಲ ನೀಡಿದ್ದಾರೆ. ಬಿಜೆಪಿಯವರು ಬೆಂಬಲ ನೀಡದಿದ್ದರೆ, ಜೆಡಿಎಸ್ ನಾಯಕರು ಇವರೆಲ್ಲ ಬಂದು ಬೆಂಬಲವಾಗಿ ನಿಂತುಕೊಳ್ಳಲಿಲ್ಲ ಅಂದರೆ ಗೆಲುವು ಕಷ್ಟವಾಗುತ್ತಿತ್ತು. ಬಿಜೆಪಿಯವರು ಮತ್ತು ದಳದವರು ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಸಹಾಯ ಮಾಡಿರಲಿಲ್ಲ ಅಂದರೆ ಇಷ್ಟು ಓಟು ಬರುತ್ತಿರಲಿಲ್ಲ ಎಂದು ತಿಳಿಸಿದರು.
ಚನ್ನಪಟ್ಟಣ ಗೆಲುವಿನಿಂದ ನಾನು ಸಿಎಂ ಆಗಬೇಕಾಗಿಲ್ಲ ಅವರು ಸಿಎಂ ಇವರು ಸಿಎಂ ಅನ್ನೋದು ಇಲ್ಲಿ ಬೇಡ. ಅಲ್ಲಿನ ಜನರು ನಮ್ಮನ್ನು ನಂಬಿ ವೋಟ್ ಹಾಕಿದ್ದಾರೆ. ಹೀಗಾಗಿ ಜನರಿಗೆ ನಾವು ಗ್ಯಾರಂಟಿಯನ್ನು ಕೊಟ್ಟಿದ್ದೇವೆ ಎಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.