ಮೈಸೂರು : ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಹಾಗೂ ಶಾಸಕ ಜಿಟಿ ದೇವೇಗೌಡರ ನಡುವೆ ಆಗಾಗ ಮುನಿಸು ವೈಮನಸ್ಸು ಇದ್ದಿದ್ದೆ. ಇದೀಗ ಡಿ ಟಿ ದೇವೇಗೌಡರು ಎಚ್ ಡಿ ಕುಮಾರಸ್ವಾಮಿ ಅವರದೇ ಮತ್ತೆ ಅಸಮಾಧಾನ ಹೊರಹಾಕಿದ್ದು ಎಚ್ ಡಿ ದೇವೇಗೌಡರು ಕಟ್ಟಿಸಿದ್ದ ಜೆಡಿಎಸ್ ಪಕ್ಷವನ್ನು ಕುಮಾರಸ್ವಾಮಿಯವರು ಡೆಮಾಲಿಶ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವೇಗೌಡರು ಕಟ್ಟಿದ ಪಕ್ಷವನ್ನು ಎಚ್ ಡಿ ಕುಮಾರಸ್ವಾಮಿ ಡೆಮಾಲಿಶ್ ಮಾಡುತ್ತಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಈಗ ಬಿಜೆಪಿ ತಬ್ಬಿಕೊಂಡಿದ್ದಾರೆ. ದೇವರು ಮತ್ತು ದೇವೆಗೌಡರ ಶ್ರಮದಿಂದ ಜೆಡಿಎಸ್ ಪಕ್ಷ ಉಳಿಯುತ್ತಿದೆ. ಮುನಿಸು ಇದ್ದಾಗಲೂ ಕೂಡ ಎಚ್ ಡಿ ದೇವೇಗೌಡರು ಮಾತನಾಡುತ್ತಿದ್ದರು. ಸಾರಾ ಮಹೇಶ್ ತೋಟಕ್ಕೆ ಬಂದು ಹೋದರು ಆಗಲು ಮಾತಾಡಲಿಲ್ಲ.
ಸಾರಾ ಮಹೇಶ್ ಗೂ ನಾನು ಬೇಕಾಗಿಲ್ಲ ಅನಿಸುತ್ತದೆ. ಕುಮಾರಸ್ವಾಮಿ ಜೊತೆ ಇದ್ದವರೆ ಸಾರಾ ಮಹೇಶ್ ಗೆ ಬೇಕಾಗಿತ್ತು. ನಾನು ಈಗ ಹೇಗಿದ್ದೇನೆ ಅದೇ ರೀತಿ ಇರುತ್ತೇನೆ. ಇನ್ನೂ ಮೂರು ವರ್ಷ ಶಾಸಕನಾಗಿ ಇರುತ್ತೇನೆ. ನಮ್ಮ ಜನ ಎಷ್ಟು ಕಷ್ಟ ಆದರೂ ಇರು ಅಂದ್ರು ಅದಕ್ಕೆ ಇರುತ್ತೇನೆ. ಕ್ಷೇತ್ರದ ಜನರು ತೀರ್ಮಾನ ಮಾಡಬೇಕು. ಎಂದು ಮೈಸೂರಿನಲ್ಲಿ ಶಾಸಕ ಜಿ ಟಿ ದೇವೇಗೌಡ ತಿಳಿಸಿದರು.