ಮೈಸೂರು : ನನ್ನ ಕುಮಾರಸ್ವಾಮಿ ನಡುವೆ ಮುನಿಸು ಸಾಕಷ್ಟು ಬಾರಿ ಆಗಿದೆ. ನೊಂದಿದ್ದರು ಸಹ ನಾನು ಅವರೊಂದಿಗೆ ಮಾತನಾಡಿದ್ದೇನೆ. ನೀನು ಇದ್ದರೆ 5 ಸ್ಥಾನ ಗೆಲ್ಲುತ್ತಿದ್ವಿ ಅಂತ ಕರೆದುಕೊಂಡವರು ಕೂಡ ಅವರೇ. ಆದರೆ ಅಧಿಕಾರ ಕೊಡುವ ಸಮಯ ಬಂದಾಗ ದೂರ ಮಾಡುತ್ತಾರೆ ಎಂದು ಎಚ್ ಡಿ ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿಖಿಲ ಸೋಲಿನ ಬಗ್ಗೆ ಪ್ರತಿಕ್ರಿಯಿಸಲು ಇಷ್ಟಪಡಲ್ಲ. ನಿಖಿಲ್ ಕುಮಾರ್ ಗೆ ಸೋಲು ಆಗಿರುವ ವಿಚಾರವಾಗಿ ಸೋಲು ಯಾಕಾಗಿದೆ ಅಂತ ಗೊತ್ತಿಲ್ಲ ಎಲ್ಲಾ ಹೆಚ್‍ಡಿ ಕುಮಾರಸ್ವಾಮಿಗೆ ಗೊತ್ತಿದೆ. ಚನ್ನಪಟ್ಟಣ ಪ್ರಚಾರಕ್ಕೆ ನನ್ನನ್ನು ಕರೆಯಲಿಲ್ಲ. ಹಾಗಾಗಿ ನಾನು ಕೂಡ ಹೋಗಿಲ್ಲ. ಮಗ ಹರೀಶ್ ಗೌಡ ಬಂದಿದ್ದಾನೆ ನಾನು ಬೇಡ ಅಂತ ಇರಬಹುದು. ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷನಾಗಿ ರಾಜ್ಯ ಪ್ರವಾಸ ಮಾಡಿದ್ದೆ. ಚುನಾವಣಾ ಪ್ರಚಾರಕ್ಕೆ ಏಕೆ ಕರೆದಿಲ್ಲ ಅಂತ ಅವರನ್ನೇ ಕೇಳಬೇಕು.
ನನ್ನ ಕುಮಾರಸ್ವಾಮಿ ನಡುವೆ ಮುನಿಸು ಸಾಕಷ್ಟು ಬಾರಿ ಆಗಿದೆ. ನೊಂದಿದ್ದರು ಸಹ ನಾನು ಅವರೊಂದಿಗೆ ಮಾತನಾಡಿದ್ದೇನೆ. ನೀನು ಇದ್ದರೆ 5 ಸ್ಥಾನ ಗೆಲ್ಲುತ್ತಿದ್ವಿ ಅಂತ ಕರೆದುಕೊಂಡವರು ಕೂಡ ಅವರೇ. ಆದರೆ ಅಧಿಕಾರ ಕೊಡುವ ಸಮಯ ಬಂದಾಗ ದೂರ ಮಾಡುತ್ತಾರೆ. ಸೀನಿಯರ್ ಅಂತ ನನ್ನನ್ನು ಯಾವತ್ತೂ ಪರಿಗಣಿಸಿಲ್ಲ. ಆದರೆ ಅವರು ಜೂನಿಯರ್ ತಂಡ ಕಟ್ಟಿಕೊಂಡಿದ್ದಾರೆ. ಮನಸ್ಸಿನಲ್ಲಿ ಏನಿದೆ ಅಂತ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ನನ್ನನ್ನು ಪೂರ್ಣವಾಗಿ ಅರ್ಥ ಮಾಡಿಕೊಂಡವರು ಯಾರು ಇಲ್ಲ. ಯಡಿಯೂರಪ್ಪ ಗೆ ಅಧಿಕಾರ ಕೊಡದಿದ್ದಾಗ ನಾನೇ ಬಿಜೆಪಿಗೆ ಹೋದೆ. ಜೆಡಿಎಸ್ ನವರು ಮಾತಿಗೆ ತಪ್ಪಿದ್ವಿ ಅಂತ ನಾನು ಬಿಜೆಪಿಗೆ ಹೋಗಿದ್ದೆ. ರಾಜಕೀಯದಲ್ಲಿ ನನ್ನ ಮನಸ್ಸಿಗೆ ಒಪ್ಪುವುದನ್ನು ನಾನು ಮಾಡುತ್ತೇನೆ. ಕೆಲವರು ಸತ್ಯವನ್ನು ಮರೆಮಾಚಿ ಮಾತನಾಡುತ್ತಾರೆ. ಮೈಸೂರಿಗೆ ಬಂದು ನನಗೆ ಧರಂಸಿಂಗ್ ಜೊತೆ ಮಂತ್ರಿ ಮಾಡ್ತೀವಿ ಅಂತ ಅಂದ್ರು.ಜನ ಹೋಗಿ ಸಚಿವ ಸ್ಥಾನ ಕೊಡಿ ಅಂತ ಕೇಳಿದರೆ ಬೈದು ಕಳುಹಿಸುತ್ತಿದ್ದರು.
ನನ್ನವರಿಗೆ ಕಣ್ಣೀರಾಕಿಸಿದರು ಎಚ್ ಡಿ ಕುಮಾರಸ್ವಾಮಿ ಬದಲಾಗಲಿಲ್ಲ. ಉನ್ನತ ಶಿಕ್ಷಣ ಇಲಾಖೆ, ಕೊಟ್ಟು ಫೇಲ್ ಆಗಲಿ ಅಂತ ಮಾಡಿದರು. ನನ್ನಲ್ಲಿ ದೈವ ಇದ್ದಾನೆ ಅದಕ್ಕಾಗಿ ಇಲಾಖೆಯನ್ನು ಸರಿಯಾಗಿ ನಿಭಾಯಿಸಿದೆ. ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಮಾಡಿದ ತಕ್ಷಣ ಇಡೀ ರಾಜ್ಯವನ್ನು ಸುತ್ತಿದೆ. ನನ್ನನ್ನು ಡಿಪ್ಯೂಟಿ ಲೀಡರ್ ಮಾಡಲಿಲ್ಲ. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನನ್ನು ಅಣಕಿಸಿದರು. ಜೆ ಡಿ ಎಲ್ ಪಿ ನಾಯಕ ಮಾಡಬೇಕು ಅಂತ ಎಲ್ಲಾ ಶಾಸಕರ ಮನಸಲ್ಲಿತ್ತು. ಶಾಸಕರು ಕೇಳಿದರೆ ಅವರ ವಿಚಾರ ಗೊತ್ತಿಲ್ಲ ಅಂತಿದ್ರು. ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಎಲ್ಲರ ಎದುರು ಮಾತಾಡಿದ್ದೇನೆ. ಸಿದ್ದರಾಮಯ್ಯ ಎಚ್‍ಡಿ ಕುಮಾರಸ್ವಾಮಿ ಆರ್ ಅಶೋಕ್ ಎಲ್ಲರ ಬಗ್ಗೆ ಮಾತನಾಡಿದ್ದೇನೆ ಯಾಕೆ ರಾಜೀನಾಮೆ ಕೊಡಬೇಕು ಅಂತ ಕೂಡ ಕೇಳಿದ್ದೇನೆ. ಕೊಡುವುದಾದರೆ ಎಲ್ಲಾ ಕೊಡಬೇಕು ಅಂತ ಹೇಳಿದ್ದರಲ್ಲಿ ತಪ್ಪೇನಿದೆ? ಎಂದು ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ತಿಳಿಸಿದರು.