ಬಹರೇನ್: ಬಹರೇನ್ ಕನ್ನಡ ಸಂಘದ ಕಟ್ಟಡದ ರೂವಾರಿಗಳಲ್ಲಿ ಡಾ.ಕೆ ಪ್ರಕಾಶ್ ಶೆಟ್ಟಿ ಕೂಡ ಒಬ್ಬರಾಗಿದ್ದರು. ಅವರ ಸೇವೆಯನ್ನು ಪರಿಗಣಿಸಿ ಬಹರೇನ್ ಕನ್ನಡ ಸಂಘದಿಂದ ಅವರಿಗೆ ಶಾಲುಹೊದಿಸಿ, ಸನ್ಮಾನಿಸಿ ಸತ್ಕರಿಸಲಾಯಿತು.
ಬಹರೇನ್ ಕನ್ನಡ ಸಂಘದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಕನ್ನಡ ಸಂಘ ಕಟ್ಟಡಕ್ಕೆ ಮೂಲ ರೂವಾರಿಯಾಗಿ ಕಟ್ಟಡ ನಿರ್ಮಾಣಕ್ಕೆ ಕಾರಣಿಬೂತರಾದ ಡಾ.ಕೆ ಪ್ರಕಾಶ್ ಶೆಟ್ಟಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಬಹರೇನ್ ಕನ್ನಡ ಸಂಘದ ಮಾಜಿ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಕನ್ನಡ ಸಂಘದ ಪದಾಧಿಕಾರಿಗಳು, ಬಹರೇನ್ ಬಂಟರ ಸಂಘದ ಅಧ್ಯಕ್ಷರಾದ ನಿತೇಶ್ ಶೆಟ್ಟಿ, ಯೂನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಛೇರ್ಮನ್ ಉಪೇಂದ್ರ ಶೆಟ್ಟಿ, ಹುಬ್ಬಳ್ಳಿಯ ಉದ್ಯಮಿ ಸುಗ್ಗಿ ಸುಧಾಕರ್ ಶೆಟ್ಟಿ, ಸಾಗರ ಬಂಟರ ಸಂಘದ ಅಧ್ಯಕ್ಷರಾದ ಸುಧೀರ್ ಶೆಟ್ಟಿ, ನಿರೂಪಕ ನಿತೇಶ್ ಶೆಟ್ಟಿ, ಕರಾಟೆ ಪಟು ವಸಂತ ಶೆಟ್ಟಿ ಉಪಸ್ಥಿತರಿದ್ದರು.
ಬಿಜೆಪಿ ಸುಳ್ಳು ಆರೋಪಗಳಿಗೆ ಜನತಾ ನ್ಯಾಯಾಲಯದಿಂದ ತಕ್ಕ ತೀರ್ಪು ಸಿಕ್ಕಿದೆ: ಸಚಿವ ಶರಣ್ ಪ್ರಕಾಶ್ ಪಾಟೀಲ್
ಈ ಉಪಚುನಾವಣೆ ಫಲಿತಾಂಶ, 2028ರ ಚುನಾವಣೆ ಫಲಿತಾಂಶಕ್ಕೆ ರಾಜ್ಯದ ಜನರ ಮುನ್ನುಡಿ: DKS