ಬೆಂಗಳೂರು : ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷಾಚರಣೆ ಆಗಮಿಸಲಿದ್ದು, ಬೆಂಗಳೂರು ನಗರಕ್ಕೆ ಗಾಂಜಾ ಘಾಟು ಬಡಿದಿದೆ. ಈ ಸಂಬಂಧ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ವಿದೇಶಿ ಡ್ರಗ್ ಪೆಡ್ಲರ್ ಗಳನ್ನು ಇದೀಗ ಸೋಲದೇವನಹಳ್ಳಿಯ ಬಳಿ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿ ನೈಜೆರಿಯ ಮೂಲದ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ.
ಹೌದು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಮತ್ತೊಂದು ಕಾರ್ಯಾಚರಣೆ ನಡೆಸಿದ್ದು, ಇಬ್ಬರು ವಿದೇಶಿ ಡ್ರಗ್ ಪೆಡ್ಲರ್ಗಳ ಬಂಧನವಾಗಿದ್ದು, ಬಂಧಿತರ ಬಳಿ ಇದ್ದ 3 ಕೋಟಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಿಕೊಳ್ಳಲಾಗಿದೆ. ಸೋಲದೇವನಹಳ್ಳಿ ಬಳಿ ಆರೋಪಿಗಳು ಡ್ರಗ್ ಸಂಗ್ರಹಿಸಿದ್ದರು. ಬಂಧಿತರಿಂದ ಒಂದು ಕೆಜಿ 520g ಎಂಡಿಎಂಎ ಕ್ರಿಸ್ಟಲ್ 202 ಗ್ರಾಂ ಕೊಕೆನ್ ಗ್ರಾಂ ಎಂಡಿಎಂಎ ಎಕ್ಸಟ್ಸಿ ಜಪ್ತಿ ಮಾಡಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ನ್ಯೂ ಇಯರ್ ಗೆ ಡ್ರಗ್ಸ್ ಮಾಡಲು ಸಜ್ಜಾಗಿದ್ದರು ಎನ್ನಲಾಗಿದೆ. ಮುಂಬೈನಿಂದ ಬೆಂಗಳೂರಿಗೆ ಡ್ರಗ್ಸ್ ಪೂರೈಸುತ್ತಿದ್ದರು ಎಂದು ತಿಳಿದುಬಂದಿದೆ. ವೈದ್ಯಕೀಯ ವೀಸಾದ ಅಡಿ ಭಾರತಕ್ಕೆ ಡ್ರಗ್ ಪೆಡಲ್ ಗಳು ಬಂದಿದ್ದರು.ಈ ಹಿಂದೆ ಮುಂಬೈ ಹೈದರಾಬಾದ್ ನಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು ಎಂದು ತಿಳಿದುಬಂದಿದೆ.