ಮೈಸೂರು: ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿರುವಂತ ನಟ ದರ್ಶನ್ ಜೈಲಿಗೆ ಹೋಗಬೇಕು. ಅವರಿಗೆ ಜಾಮೀನು ನೀಡದಂತೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಿದ್ದೇವೆ ಅಂತ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಟ ದರ್ಶನ್ ಗೆ ನ್ಯಾಯಾಲಯದಿಂದ ಮೂರು ತಿಂಗಳು ಜಾಮೀನು ನೀಡಲಾಗಿದೆ. ಅವರಿಗೆ ಜಾಮೀನು ಅವಧಿ ವಿಸ್ತರಿಸುವಂತ ವಿಷಯ ನನಗೆ ಗೊತ್ತಿಲ್ಲ ಎಂದರು.
ರಾಜ್ಯ ಸರ್ಕಾರದಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಮುಂದುವರೆಸಲಾಗುತ್ತದೆ. ಸಾಕ್ಷ್ಯ ಸಂಗ್ರಹದ ನಂತ್ರ ದೋಷಾರೋಪಪಟ್ಟಿಯನ್ನು ಸಲ್ಲಿಸಲಾಗುವುದು ಎಂದರು.
ಎಕ್ಸಿಟ್ ಪೋಲ್‌ಗಳು ಒಂದೇ ತರನಾಗಿ ಹೇಳಿಲ್ಲ. ಕೆಲವು ಸರ್ವೇಗಳು ಮಹಾ ವಿಕಾಸ್ ಅಘಾಡಿಗೆ 162 ಸೀಟುಗಳನ್ನು ಕೊಟ್ಟಿದ್ದು, ಬಿಜೆಪಿಯವರಿಗೆ 128 ಕೊಟ್ಟಿವೆ. ಇನ್ನು ಕೆಲ ಸರ್ವೇಗಳು ಬಿಜೆಪಿಯವರಿಗೆ 140 ನೀಡಿವೆ. ಯಾವುದನ್ನು ನಿಖರವಾಗಿ ಹೇಳಲು ಬರುವುದಿಲ್ಲ ಎಂದು ಹೇಳಿದರು.
ವಾಸ್ತವವಾಗಿ ಮಹಾರಾಷ್ಟ್ರ ಜನ, ಭ್ರಷ್ಟಚಾರ ಸರ್ಕಾರದ ವಿರುದ್ಧ ಬೇಸತ್ತಿದ್ದಾರೆ. ಬಹಳಷ್ಟು ಕಾರಣಗಳಿವೆ. ಆಂಬುಲೆನ್ಸ್ ಖರೀದಿಯಲ್ಲಿ 8000 ಕೋಟಿ ಅಕ್ರಮ ನಡೆದಿದೆ. ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಿಸಿ, ಅಂಬೇಡ್ಕರ್ ಕೇಂದ್ರ ಮಾಡುವುದಾಗಿ ಪ್ರಧಾನಿ ಮೋಡಿಯವರು 2025ರಲ್ಲಿ ಅಡಿಗಲ್ಲು ಹಾಕಿದ್ದರು.
ಮಹಾರಾಷ್ಟ್ರ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಮತಗಟ್ಟೆ ಸಮೀಕ್ಷೆಗಳು ಒಂದೇ ತರನಾಗಿ ಹೇಳಿಲ್ಲ. ಕೆಲವು ಸಮೀಕ್ಷೆಗಳು ಮಹಾ ವಿಕಾಸ್ ಅಘಾಡಿಗೆ 162 ಸೀಟುಗಳು ಬರುತ್ತವೆ ಎಂದು ಹೇಳಿದ್ದು, ಬಿಜೆಪಿಯವರಿಗೆ 128 ಸೀಟು ಬರುತ್ತವೆ ಎಂದು ತಿಳಿಸಿವೆ. ಇನ್ನು ಕೆಲ ಸಮೀಕ್ಷೆಗಳು ಬಿಜೆಪಿಯವರಿಗೆ 140 ಬರುತ್ತವೆ ಎಂದು ಹೇಳಿವೆ. ಈಗಲೇ ಯಾವುದನ್ನು ನಿಖರವಾಗಿ ಹೇಳಲು ಬರುವುದಿಲ್ಲ ಎಂದರು.
ವಾಸ್ತವವಾಗಿ ಮಹಾರಾಷ್ಟ್ರ ಜನ, ಭ್ರಷ್ಟಚಾರದಲ್ಲಿ ತೊಡಗಿರುವ ಸರ್ಕಾರದ ವಿರುದ್ಧ ಬೇಸತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರ ಆಂಬುಲೆನ್ಸ್ ಖರೀದಿಯಲ್ಲಿ 8000 ಕೋಟಿ ರೂ. ಅಕ್ರಮ ಎಸಗಿದೆ. ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಿಸಿ, ಅಂಬೇಡ್ಕರ್ ಕೇಂದ್ರ ಮಾಡುವುದಾಗಿ ಪ್ರಧಾನಿ ಮೋದಿಯವರು 2015ರಲ್ಲಿ ಅಡಿಗಲ್ಲು ಹಾಕಿದ್ದರು. ಈವರೆಗು ಪೂರ್ಣಗೊಂಡಿಲ್ಲ. ಅಂಬೇಡ್ಕರ್ ಅವರು ಮಹಾರಾಷ್ಟ್ರದಲ್ಲಿ ಜನಿಸಿದವರು. ಇಡೀ ದೇಶದ ಜನತೆ ಅವರನ್ನು ಇಷ್ಡಪಡುತ್ತಾರೆ. ಯೋಜನೆಯನ್ನು ಪೂರ್ಣಗೊಳಿಸದೆ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಜನ ಅಸಮಾದಾನ ವ್ಯಕ್ತಪಡಿಸಿದ್ದಾರೆ ಎಂದರು.
ರಾಜ್ಯದ ‘ನಿವೇಶನ ರಹಿತರ’ ಗಮನಕ್ಕೆ: ಇದೆ ‘ಸರ್ಕಾರಿ ಸೈಟ್’ ಪಡೆಯಲು ಅವಕಾಶ, ಇಲ್ಲಿದೆ ಮಾಹಿತಿ