ನವದೆಹಲಿ : ಗ್ಯಾರಂಟಿ ಯೋಜನೆ ಪರೀಕ್ಷೆ ಬಗ್ಗೆ ಪದೇಪದೇ ಪ್ರತಾಪ್ ಇಸಿರುವ ವಿಚಾರವಾಗಿ, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುಯಾವುದೇ ಕಾರಣಕ್ಕೂ ‘ಗ್ಯಾರಂಟಿ’ ಯೋಜನೆ ನಿಲ್ಲುವುದಿಲ್ಲ, ಪರಿಷ್ಕರಣೆಯು ಇಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆವುದಿಲ್ಲ. ಅಲ್ಲದೇ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆ ಕೂಡ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. ಇಂದು ದೆಹಲಿಯ ಅಶೋಕ ಹೋಟೆಲ್ ನಲ್ಲಿ ನಂದಿನಿ ಉತ್ಪನ್ನಗಳ ಬಿಡುಗಡೆ ಹಾಗೂ ಮಾರಾಟಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು.
ಗ್ಯಾರೆಂಟಿ ಯೋಜನೆಗೆ ಬಿಜೆಪಿ ಅವರ ಬಳಿ ದುಡ್ಡು ಕೇಳಿದ್ವಾ? ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಆಹಾರ ಭದ್ರತಾ ಕಾಯ್ದೆ ರಾಜ್ಯಸಭೆಯಲ್ಲಿ ಮಂಡಿಸಿದಾಗ ವಿರೋಧಿಸಿದ್ದರು. ಮುರಳಿ ಮನೋಹರ ಜೋಶಿ ವೋಟ್ ಸೆಕ್ಯೂರಿಟಿ ಆಕ್ಟ್ ಎಂದಿದ್ದರು. ನಾನು ಈ ಹಿಂದೆ ಸಿಎಂ ಆಗಿದ್ದಾಗ 7 ಕೆಜಿ ಅಕ್ಕಿಯನ್ನು ಕೊಡುತ್ತಿದ್ದೆ. ಬಿಎಸ್ ಯಡಿಯೂರಪ್ಪ ಸಿಎಂ ಆದ ಬಳಿಕ 7 ಕೆಜಿಯಿಂದ 5 ಕೆಜಿಗೆ ಇಳಿಸಿದರು.
ಅಂದಿನ ಬಿ ಎಸ್ ಯಡಿಯೂರಪ್ಪ ಸಂಪುಟದಲ್ಲಿ ಆರ್ ಅಶೋಕ್ ಸಚಿವರಾಗಿದ್ದರು. ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಅಶೋಕ್ ಆಗ ಏಕೆ ಕೇಳಲಿಲ್ಲ ಬಡವರ ಬಗ್ಗೆ ಮಾತನಾಡುವುದು ಬಹಳ ಸುಲಭ. ಬಿಜೆಪಿ ನಾಯಕರು ಆಹಾರ ಭದ್ರತಾ ಕಾಯ್ದೆಯನ್ನೇ ವಿರೋಧಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.