ಝಾನ್ಸಿ: ಉತ್ತರ ಪ್ರದೇಶದ ಝಾನ್ಸಿಯ ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನಲ್ಲಿ ಸಂಭವಿಸಿದ ಅಗ್ನಿಅವಘಢದಲ್ಲಿ ಸಾವನ್ನಪ್ಪಿದ ನವಜಾತ ಶಿಶುಗಳ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಕಾಲೇಜಿನ ಎನ್‌ಐಸಿಯು (ಶಿಶು ವಾರ್ಡ್) ಒಳಗಿನ ಘಟಕದಲ್ಲಿ ಕಳೆದ ಶುಕ್ರವಾರ ರಾತ್ರಿ 10.30 ರಿಂದ 10.45 ರ ನಡುವೆ ಅಗ್ನಿ ದುರಂತ ಸಂಭವಿಸಿದ್ದು, ಈ ದುರಂತದಲ್ಲಿ 10 ಮಕ್ಕಳು ಸಜೀವ ದಹನವಾಗಿದ್ದರು. ಹಲವು ಮಕ್ಕಳು ಗಾಯಗೊಂಡಿದ್ದರು. ಆದರೆ ಇದೀಗ ಗಾಯಗೊಂಡಿದ್ದ ಐವರು ಮಕ್ಕಳು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ.
ಝಾನ್ಸಿಯ ಮಹಾರಾಣಿ ಲಕ್ಷ್ಮಿಬಾಯಿ ವೈದ್ಯಕೀಯ ಕಾಲೇಜಿನಲ್ಲಿ ಕಳೆದ ವಾರ ಶುಕ್ರವಾರ ಸಂಜೆ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 11 ನವಜಾತ ಶಿಶುಗಳು ಸಜೀವ ದಹನವಾಗಿದ್ದವು. ಇದೀಗ ಮೃತಪಟ್ಟ ನವಜಾಶ ಶಿಶುಗಳ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
#WATCH | Uttar Pradesh: Visuals from Jhansi Medical College, where a massive fire broke out in the Neonatal Intensive Care Unit (NICU) last night.
The fire claimed the lives of 10 newborns pic.twitter.com/0H4FVbcbB3
— ANI (@ANI) November 16, 2024