ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ಕೂದಲು ಪ್ರತಿದಿನ ಉದುರುತ್ತದೆ. ಆದರೆ ಅತಿಯಾದ ಕೂದಲು ಉದುರುವುದು ಒಂದು ಸಮಸ್ಯೆ. ಕೂದಲು ಉದುರುತ್ತಿದ್ದರೂ ಹೊಸ ಕೂದಲು ಬೆಳೆಯದೇ ಇದ್ದರೆ ಸಮಸ್ಯೆ. ಈ ಅವಧಿಯಲ್ಲಿ ಕೂದಲಿನ ಸಮಸ್ಯೆ ತುಂಬಾ ಕಾಡುತ್ತದೆ. ಕೂದಲು ಉದುರುತ್ತಿದ್ದರೆ, ಹೊಸ ಕೂದಲು ಬರದಿದ್ದರೆ ಈ ಆಹಾರಗಳನ್ನು ಸೇವಿಸಬೇಕು.
ಕೂದಲು ಬೆಳವಣಿಗೆಗೆ ಹಲವು ಸಲಹೆಗಳನ್ನು ನಾವು ಈಗಾಗಲೇ ತಿಳಿದಿದ್ದೇವೆ. ಚಿಯಾ ಬೀಜಗಳು ಕೂದಲಿನ ಬೆಳವಣಿಗೆಗೆ ಚೆನ್ನಾಗಿ ಕೆಲಸ ಮಾಡುತ್ತವೆ. ಚಿಯಾ ಬೀಜಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಅಧಿಕವಾಗಿವೆ. ಇವು ನೆತ್ತಿಯ ಮೇಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.
ಅದೂ ಅಲ್ಲದೆ ಕೂದಲು ಉದುರುವುದನ್ನ ತಡೆಯುವ ಮೂಲಕ ಹೊಸ ಕೂದಲು ಬೆಳೆಯಲು ನೆರವಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಚಿಯಾ ಬೀಜಗಳನ್ನ ಬೆಳಿಗ್ಗೆ ತೆಗೆದುಕೊಳ್ಳುವುದು ಉತ್ತಮ. ಇವುಗಳನ್ನ ಜ್ಯೂಸ್, ಸ್ಮೂಥಿಗಳು, ಮೊಸರು, ಓಟ್ ಮೀಲ್ ಅಥವಾ ಸರಳ ನೀರಿನಿಂದ ಕೂಡ ಸೇವಿಸಬಹುದು.
ಚಿಯಾ ಬೀಜಗಳು ಕೂದಲಿನ ಬೆಳವಣಿಗೆಗೆ ಹೇಗೆ ಸಹಾಯ ಮಾಡುತ್ತದೆ ಎಂದು ಪ್ರತಿಯೊಬ್ಬರೂ ಆಶ್ಚರ್ಯ ಪಡಬಹುದು. ಇವು ಕೊಬ್ಬಿನಾಮ್ಲಗಳು, ಪ್ರೋಟೀನ್ಗಳು, ಸತು ಮತ್ತು ಕಬ್ಬಿಣದಂತಹ ಪ್ರಮುಖ ಖನಿಜಗಳನ್ನು ಹೊಂದಿರುತ್ತವೆ. ಇವು ಕೂದಲು ಬೆಳವಣಿಗೆಗೆ ತುಂಬಾ ಸಹಕಾರಿ.
ನೀವು ಚಿಯಾ ಬೀಜಗಳನ್ನು ಹೇಗೆ ತೆಗೆದುಕೊಂಡರೂ, ಅವುಗಳು ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿರುತ್ತವೆ. ಇವುಗಳನ್ನು ತೆಗೆದುಕೊಳ್ಳುವುದು ತುಂಬಾ ಸುಲಭ. ಇದನ್ನು ಸಲಾಡ್’ಗಳಲ್ಲಿಯೂ ಬೆರೆಸಬಹುದು. ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ತೆಗೆದುಕೊಳ್ಳುವುದು ಉತ್ತಮ.
OMG : ಶೋರೂಂನಿಂದ ’12 ರೋಬೋಟ್’ಗಳನ್ನ ಅಪಹರಿಸಿದ ಮತ್ತೊಂದು ‘ರೋಬೋಟ್, ವೀಡಿಯೊ ವೈರಲ್
ಚಳಿಗಾಲದಲ್ಲಿ ‘ಗೀಸರ್’ ಬಳಸುತ್ತಿದ್ದೀರಾ.? ಈ ‘ತಪ್ಪು’ ಮಾಡಿದ್ರೆ ಜೀವಕ್ಕೆ ಆಪತ್ತು