ನವದೆಹಲಿ: ಸಂಜೆ 5 ಗಂಟೆಯವರೆಗೆ, ಜಾರ್ಖಂಡ್ (ಹಂತ -2) ಮತ್ತು ಮಹಾರಾಷ್ಟ್ರದಲ್ಲಿ ಕ್ರಮವಾಗಿ 67.59% ಮತ್ತು 58.22% ಮತದಾನವಾಗಿದೆ ಎಂದು ಭಾರತದ ಚುನಾವಣಾ ಆಯೋಗ ತಿಳಿಸಿದೆ.
ಮುಂಬೈ ನಗರದಲ್ಲಿ ಶೇ.49.07ರಷ್ಟು ಮತದಾನವಾಗಿದ್ದರೆ, ಮುಂಬೈ ಉಪನಗರದಲ್ಲಿ ಶೇ.51.76ರಷ್ಟು ಮತದಾನವಾಗಿದೆ.
ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಮಗಳು ಸುಹಾನಾ ಖಾನ್ ಮತ್ತು ಮಗ ಆರ್ಯನ್ ಖಾನ್ ಅವರೊಂದಿಗೆ ಮತ ಚಲಾಯಿಸಿದರು.
ನಟಿ ಶ್ರದ್ಧಾ ಕಪೂರ್ ತನ್ನ ತಾಯಿ ಶಿವಾಂಗಿ ಕೊಲ್ಹಾಪುರೆ, ಚಿಕ್ಕಮ್ಮ ಮತ್ತು ನಟಿ ಪದ್ಮಿನಿ ಕೊಲ್ಹಾಪುರೆ ಮತ್ತು ಸಹೋದರ ಸಿದ್ಧಾಂತ್ ಕಪೂರ್ ಅವರೊಂದಿಗೆ ಮುಂಬೈನಲ್ಲಿ ಮತ ಚಲಾಯಿಸಿದರು. ಗಾಯಕ ಉದಿತ್ ನಾರಾಯಣ್ ಕೂಡ ಮತ ಚಲಾಯಿಸಿದರು.