ಬೆಂಗಳೂರು : ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಕುರಿತಂತೆ ವಿವಾದ ಭುಗಿಲೆದ್ದಿದ್ದು, ಇದೀಗ ವಿಪಕ್ಷ ನಾಯಕ ಆರ್ ಅಶೋಕ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಡವರ ಮನೆಗೆ ಕನ್ನ ಹಾಕಿದಿರಲ್ಲ ನಿಮಗೆ ನಾಚಿಕೆ ಆಗಲ್ವಾ? ಸಿದ್ದರಾಮಯ್ಯನವರೇ ನಿಮಗೆ ಸಾಮಾನ್ಯ ಪ್ರಜ್ಞೆಯು ಇಲ್ವಲ್ಲ? ಬಡವರ ಅನ್ನ ಕಿತ್ತುಕೊಳ್ಳುತ್ತಿದ್ದೀರಿ ಅಲ್ವಾ, ದೇವರು ಒಳ್ಳೆಯದು ಮಾಡ್ತಾನ? ಇದು ಪಾಪಿಗಳ ಸರಕಾರ ಎಂದು ಕಿಡಿ ಕಾರಿದರು.
ರಾಜ್ಯದಲ್ಲಿ 22 ಲಕ್ಷ ಕಾರ್ಡ್ ಗಳು ಇವೆಯಂತೆ. ಕಾರ್ಡ್ ರದ್ದು ಮಾಡಬೇಕಾದರೆ ನೀವು ನೋಟಿಸ್ ಕೊಡಬೇಕಲ್ವಾ ಬಂದು ನೋಟಿಸ್ ಕೊಡಬೇಕು ಎಂಬ ಕಾಮನ್ಸೆನ್ಸ್ ಕೂಡ ಇಲ್ವಾ ನಿಮಗೆ? ನ್ಯಾಯಬೆಲೆ ಅಂಗಡಿಗೆ ಹೋದರೆ ಸಿದ್ದರಾಮಯ್ಯ ಅವರನ್ನೇ ಕೇಳಿ ಅಂತಾರಂತೆ ಸರ್ಕಾರ ಕ್ಷೇತ್ರಗಳ ಅಭಿವೃದ್ಧಿಗೆ ಯಾವುದೇ ಅನುದಾನ ಕೊಡುತ್ತಿಲ್ಲ.ಹೀಗಾಗಿ ಸಿಎಂ ಸಿದ್ದರಾಮಯ್ಯ ಮನೆಗೆ ಯಾವ ಶಾಸಕರು ಹೋಗುತ್ತಿಲ್ಲ.
ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ 10 ಸಾವಿರ ಕೋಟಿ ಉಳಿಸಬಹುದು. ಅದೇ ಹಣವನ್ನು ಶಾಸಕರಿಗೆ ನೀಡಿ ಸಮಾಧಾನಪಡಿಸಬಹುದು. ಅದಕ್ಕಾಗಿ ಬಿಪಿಎಲ್ ಕಾರ್ಡ್ ತೆಗೆಯುತ್ತಿದ್ದಾರೆ. ಬಿಪಿಎಲ್ ಕಾರ್ಡ್ ಇಲ್ಲದೆ ಸರ್ಕಾರದ ಯಾವುದೇ ಸಬ್ಸಿಡಿ ಸಿಗುವುದಿಲ್ಲ. ಅದಕ್ಕಾಗಿ ನಮ್ಮ ಎಲ್ಲಾ ಶಾಸಕರು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಬಾರದು ಎಂದರು.
ಕೂಡಲೇ ರದ್ದುಪಡಿಸಿರುವ ಕಾರ್ಡ್ ಗಳ ಆದೇಶವನ್ನು ವಾಪಸ್ ಪಡೆಯಬೇಕು ಕಾಂಗ್ರೆಸ್ಸಿನ ಎಷ್ಟು ನಾಯಕರು ಹೆಲಿಕಾಪ್ಟರ್ ಇಟ್ಟುಕೊಂಡಿದ್ದೀರಾ? ಅವತ್ತು ಕಾಕಾ ಪಾಟೀಲ್ ಗೆ ಮಹದೇವಪ್ಪಗು ಫ್ರೀ ಅಂದಿದ್ದೀರಲ್ಲ, ಇದು ಕರ್ನಾಟಕದ ಸಮಸ್ಯೆ ಇದರ ವಿರುದ್ಧ ಜನ ದಂಗೆ ಏಳಬೇಕು ಅನ್ನ ಕಿತ್ತುಕೊಂಡರೆ ನರಕ ಗ್ಯಾರಂಟಿ. ಆ ನರಕಕ್ಕೆ ನೀವು ಹೋಗುವುದು ಪಕ್ಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದರು.