ಬೆಂಗಳೂರು: ರಾಜ್ಯದಲ್ಲಿ ಭೂ ಪರಿವರ್ತನೆ ಮಾಡುವ ಸಂದರ್ಭದಲ್ಲಿ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಯಾವೆಲ್ಲ ಅಂಶ ಪರಿಗಣನೆ ಮಾಡಬೇಕು ಎನ್ನುವಂತ ಸಂಪೂರ್ಣ ಮಾಹಿತಿ ಮುಂದಿದೆ ಓದಿ.
ರಾಜ್ಯದಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರಕ್ಕೆ ಬಳಕೆ ಮಾಡುವ ಸಂದರ್ಭದಲ್ಲಿ ಭೂ ಪರಿವರ್ತನೆಗೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆಗ ತಹಶೀಲ್ದಾಳರು, ಕಂದಾಯ ನಿರೀಕ್ಷಕರು ಕೆಲ ಅಂಶಗಳನ್ನು ಪರಿಗಣಿಸಿ ಅದಕ್ಕೆ ಅನುಮತಿಯನ್ನು ನೀಡಲಾಗುತ್ತದೆ. ಅವು ಯಾವುವು ಅಂತ ಈ ಕೆಳಗಿವೆ.
ಭೂಪರಿವರ್ತನೆ ಕೋರಿ ಸಲ್ಲಿಸಿದ ಅರ್ಜಿಗಳ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವಾಗ ತಹಶೀಲದಾರರು/ಕಂದಾಯ ನಿರೀಕ್ಷಕರು ಈ ಕೆಳ ಕಾಣಿಸಿದ ಅಂಶಗಳನ್ನು ಪರಿಶೀಲಿಸುವುದು.
1. ಸರ್ಕಾರದ ಸುತ್ತೋಲೆ ದಿನಾಂಕ:7-6-1999ಕ್ಕೆ ಲಗತ್ತಿಸಿದ ಅನುಬಂಧ-1ರಲ್ಲಿ ಅರ್ಜಿಗಳನ್ನು ತಹಶೀಲದಾರರು ದ್ವಿಪ್ರತಿಗಳಲ್ಲಿ ಸ್ವೀಕರಿಸುವುದು.
2. ತಹಶೀಲದಾರರು ಮಂಜೂರಾತಿ ಪ್ರಾಧಿಕಾರಿಗೆ ಕೂಡಲೇ ಅರ್ಜಿಯ ಒಂದು ಪ್ರತಿಯನ್ನು ಕಳುಹಿಸುವುದು.
3. ಹೆಚ್ಚಿನ ಮಾಹಿತಿ ಅವಶ್ಯವಿದ್ದಲ್ಲಿ ಅದನ್ನು ಸಲ್ಲಿಸಲು ಅರ್ಜಿ ಸ್ವೀಕರಿಸಿದ ಒಂದು ವಾರದೊಳಗಾಗಿ ಅರ್ಜಿದಾರರಿಗೆ ತಿಳಿಸುವುದು.
4. ಜಮೀನಿನ ಒಡೆತನ ಹೊಂದಿದ ವ್ಯಕ್ತಿಯು ಮಾತ್ರ ಅರ್ಜಿ ಸಲ್ಲಿಸಿರುವ ಬಗ್ಗೆ ಪರಿಶೀಲಿಸುವುದು.
5. ಭೂಪರಿವರ್ತನೆ ಕೋರಿದ ಜಮೀನಿಗೆ ಸಂಬಂಧಪಟ್ಟ RTC/ಮುಟೇಷನ್‌ಗಳು
6. ಭೂಪರಿವರ್ತನೆಯಿಂದ ಈ ಕೆಳಕಾಣಿಸಿದ ಕಾಯ್ದೆ/ನಿಯಮಗಳು ಉಲ್ಲಂಘ ಆಗುತ್ತಿದೆಯೋ ಹೇಗೆ ಅನ್ನುವುದನ್ನು ಪರಿಶೀಲಿಸಿ ಆ ಬಗ್ಗೆ ವಿವರ ನೀಡುವುದು ಕರ್ನಾಟಕ ಭೂಸುಧಾರಣಾ ಕಾಯ್ದೆ 1961ರ ಕಲಂ 48-A, 77, 77-A, 79-A, 79-B
(ಬಿ) ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ- (ಸಿ) ಕರ್ನಾಟಕ ಪಿ.ಟಿ.ಸಿ.ಎಲ್.ಕಾಯ್ದೆ 1978ರ ಕಲಂ 4(1) ಹಾಗೂ 4(2) (ಡಿ) ಕರ್ನಾಟಕ ಭೂಕಂದಾಯ ನಿಯಮಗಳು 1966ರ ನಿಯಮ-102-B (ಹಸಿರು ವಲಯಕ್ಕೆ ಸಂಬಂಧಿಸಿದಂತೆ)
(ಇ) ಭೂಸ್ವಾಧೀನ ಕಾಯ್ದೆಯ ಕಲಂ-4 ಮತ್ತು 6ರ ಕೆಳಗೆ ಸ್ವಾಧೀನತೆ ಬಗ್ಗೆ ಅಧಿಸೂಚಿತವಾಗಿರುವ ಬಗ್ಗೆ
7. ಪ್ರಸ್ತಾಪಿತ ಜಮೀನಿನ ಹಕ್ಕಿಗೆ ಸಂಬಂಧಿಸಿದಂತೆ ವ್ಯಾಜ್ಯಗಳೇನಾದರೂ ಇದ್ದಲ್ಲಿ ಅವುಗಳ ಬಗ್ಗೆ ವಿವರಣೆ ನೀಡುವುದು.
8. ಪರಿವರ್ತನೆ ಕೋರಿದ ಕ್ಷೇತ್ರದ ನಕ್ಷೆ
9. ಸ್ಥಳೀಯ ಯೋಜನಾ ಪ್ರಾಧಿಕಾರಿಗಳಿಂದ ನಿರಪೇಕ್ಷಣಾ ಪ್ರಮಾಣಪತ್ರ
10. ಎಲ್ಲ ವಿವರಗಳು/ದಾಖಲೆಗಳೊಂದಿಗೆ ತಹಶೀಲದಾರರು ತಮ್ಮ ವರದಿಯನ್ನು ಅರ್ಜಿ ಸ್ವೀಕೃತವಾದ ದಿನದಿಂದ 15 ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದು. 11. ಭೂ ಪರಿವರ್ತನೆ ಮಂಜೂರಾತಿ/ ತಿರಸ್ಕರಿಸಿದ ಪ್ರಕ್ರಿಯೆಯು, 45 ದಿನಗಳೊಳಗಾಗಿ ಪೂರ್ತಿಗೊಳ್ಳಬೇಕು ಅಂತಾ ಮೇಲ್ಕಾಣಿಸಿದ ಸುತ್ತೋಲೆಯಲ್ಲಿ ಸರ್ಕಾರವು ನೀಡಿದ ನಿರ್ದೆಶನಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುವುದು.
BREAKING : ಭಾರತವನ್ನು ‘ಹಿಂದೂ ರಾಷ್ಟ್ರ’ ವನ್ನಾಗಿ ಮಾಡಲು ನಾವು ಬಿಡಲ್ಲ : ಯತೀಂದ್ರ ಸಿದ್ದರಾಮಯ್ಯ ವಿವಾದ!
BIG NEWS : ‘BPL’ ಕಾರ್ಡ್ ರದ್ದತಿಯ ಬಗ್ಗೆ ಯಾರು ಆತಂಕ ಪಡೋದು ಬೇಡ : ಡಿಸಿಎಂ ಡಿಕೆ ಶಿವಕುಮಾರ್