ಬೆಂಗಳೂರು : ವಿಕ್ರಂ ಗೌಡ ಎನ್ಕೌಂಟರ್ ಬಗ್ಗೆ ಎಡಪಂಥೀಯರು ಅನುಮಾನ ವ್ಯಕ್ತಪಡಿಸಿದ ವಿಚಾರವಾಗಿ ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದು, ವಿಕ್ರಂ ಗೌಡ ಬಳಿ ಆಟೋಮೆಟಿಕ್ ಮಷೀನ್ ಗನ್ ಸೇರಿದಂತೆ ಅಪಾಯಕಾರಿ ಶಸ್ತ್ರಾಸ್ತ್ರಗಳು ಇದ್ದಂತಹ ಮಾಹಿತಿ ಇದೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಕ್ರಂ ಗೌಡನ ಆಟೋಮೆಟಿಕ್ ಮಷೀನ್ ಗನ್ ಇದ್ದ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಶೂಟ್ ಮಾಡದಿದ್ದರೆ ಪೊಲೀಸರಿಗೆ ಅಪಾಯ ಆಗುವಂತಹ ಸಾಧ್ಯತೆ ಇತ್ತು.ಅಕಸ್ಮಾತ್ ಶೂಟ್ ಮಾಡದೆ ಹೋಗಿದ್ದರೆ ಪೊಲೀಸರ ಮೇಲೆ ವಿಕ್ರಂ ದಾಳಿ ಮಾಡುವ ಸಾಧ್ಯತೆ ಇತ್ತು. ಆದ್ದರಿಂದ ಪೊಲೀಸರು ವಿಕ್ರಂ ಗೌಡನ ಮೇಲೆ ದಾಳಿ ಮಾಡಿದ್ದಾರೆ ಎಂದು ತಿಳಿಸಿದರು.
ಅಲ್ಲದೇ ವಿಕ್ರಂ ಗೌಡನ ಮೇಲೆ ಕೊಲೆ ಪ್ರಕರಣ ಸೇರಿದಂತೆ 61 ಪ್ರಕರಣಗಳಿವೆ. ಅವೆಲ್ಲ ಇದ್ದಾಗ ಕೂಡ ಆತನಿಗೆ ನಾವು ಶರಣಾಗಲು ಅನೇಕ ಅವಕಾಶಗಳನ್ನು ನೀಡಿದ್ದೆವು. ಆದರೆ ಪೊಲೀಸರ ಕಾರ್ಯಾಚರಣೆ ವೇಳೆ ಅವರ ಮೇಲೆಯೇ ವಿಕ್ರಂ ಗೌಡ ದಾಳಿ ಮಾಡಲು ಮುಂದಾಗಿದ್ದ ಹಾಗಾಗಿ, ವಿಕ್ರಂ ಗೌಡನ ಮೇಲೆ ಎನ್ಕೌಂಟರ್ ಮಾಡಬೇಕಾಯಿತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಮಾಹಿತಿ ತಿಳಿದುಕೊಂಡು ಮತ್ತಷ್ಟು ವಿವರಗಳನ್ನು ನೀಡುತ್ತೇನೆ ಎಂದರು.
ಕಾರ್ಕಳ, ಹೆಬ್ರಿ ಶಾಸಕ ಸುನಿಲ್ ಕುಮಾರ್ ಅವರ ಏರಿಯಾ ಆಗಿದ್ದು, ANF ಹೆಡ್ ಕ್ವಾಟರ್ಸ್ ಕೂಡ ಕಾರ್ಕಳದಲ್ಲೇ ಇದೆ. ನಾವು ಸತತವಾಗಿ ಯಾವಾಗಲೂ ಕೂಡ ಒಂದು ನಿಗಾ ಇಟ್ಟುಕೊಂಡು ಬಂದಿದ್ದೇವೆ. ಕಳೆದ ಕೆಲವು ದಿನಗಳ ಹಿಂದೆ ಲತಾ ಮತ್ತು ರಾಜು ಎನ್ನುವರು ನಕ್ಸಲರ ಲೀಡರ್ ಗಳಾಗಿದ್ದಾರೆ. ಕೋಂಬಿಂಗ್ ಮಾಡಬೇಕು ಅಂತ ಹೇಳಿದಾಗ ಆಪರೇಷನ್ ಪ್ರಾರಂಭಿಸಿದರು. ಇವೆಡೆ ವಿಕ್ರಂ ಗೌಡ ಕುರಿತು ಮಾಹಿತಿ ಬಂದಾಗ ಎನ್ಕೌಂಟರ್ ಮಾಡಬೇಕಾಯಿತು ಎಂದು ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದರು.