ಉಡುಪಿ : ನಿನ್ನೆ ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಪೊಲೀಸರು ಹಾಗೂ ನಕ್ಸಲರ ನಾಯಕ ವಿಕ್ರಂ ಗೌಡ ಮಧ್ಯ ಗುಂಡಿನ ಚಕಮಕಿ ನಡೆದಿದ್ದು ಈ ಒಂದು ಶೂಟ್ ಔಟ್ ನಲ್ಲಿ ವಿಕ್ರಂ ಗೌಡನ ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ. ಪೊಲೀಸರ ಗುಂಡಿಗೆ ಬಲಿಯಾದ ನಕ್ಸಲ್ ವಿಕ್ರಂ ಗೌಡನ ಅಂತ್ಯಕ್ರಿಯೆಯನ್ನು ಆತನ ಸ್ವಂತ ಮನೆಯಲ್ಲಿಯೇ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಹೌದು ವಿಕ್ರಂ ಮನೆ ಆವರಣದಲ್ಲಿ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ನಿರ್ಧಾರ ಮಾಡಲಾಗಿದ್ದು, ಸದ್ಯ ವಿಕ್ರಂ ಗೌಡ ಮೂಲ ಮನೆಯಲ್ಲಿ ಯಾರು ಇಲ್ಲ ಎನ್ನಲಾಗಿದೆ. ಆತನ ಹಳೆ ಮನೆಯನ್ನ ಕೆಡವಿ ಹೊಸ ಮನೆ ಕಟ್ಟಿಸುಲಾಗುತ್ತಿದೆ. ಹಾಗಾಗಿ ಮನೆ ಆವಣದಲ್ಲಿ ಅಂತ್ಯ ಸಂಸ್ಕಾರ ಮಾಡುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ಉಡುಪಿಯ ಕೂಡ್ಲು ಗ್ರಾಮದಲ್ಲಿ ವಿಕ್ರಂ ಅತ್ಯಸಂಸ್ಕಾರ ನೆರವೇರಲಿದೆ ಎಂದು ವಿಕ್ರಂ ಗೌಡನ ಸಂಬಂಧಿಕರು ತಿಳಿಸಿದ್ದಾರೆ.ಈಗಾಗಲೇ ವಿಕ್ರಂ ಗೌಡನ ಮರಣೋತ್ತರ ಪರೀಕ್ಷೆ ಅಂತ್ಯವಾಗಿದ್ದು, ಕೆಲವೇ ಕ್ಷಣಗಳಲ್ಲಿ ಆತನ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ.
ಇನ್ನು ನಿನ್ನೆ ನಡೆದ ಈ ಒಂದು ಗುಂಡಿನ ಚಕಮಕಿಯಲ್ಲಿ ವಿಕ್ರಂ ಗೌಡ ಸಾವನಪ್ಪಿದು, ಇನ್ನೂ ಆತನ ಜೊತೆಗೆ ಇದ್ದಂತಹ ಮೂವರು ಅಲ್ಲಿಂದ ಪರಾರಿಯಾಗಿದ್ದಾರೆ. ಹಾಗಾಗಿ ಚಿಕ್ಕಮಂಗಳೂರು ಜಿಲ್ಲೆಯ ಜಯಪುರ ಪೊಲೀಸ್ ಠಾಣೆಯಲ್ಲಿ ನಿನ್ನೆ ಮುಂಡಗಾರು ಲತಾ, ಜಯಣ್ಣ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇನ್ನು ಎನ್ ಎ ಎಫ್ ಅಧಿಕಾರಿಗಳು ಉಳಿದ ನಕ್ಸಲರ ಪತ್ತೆಗೆ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.








