ಬೆಂಗಳೂರು : ನಾಳೆ ರಾಜ್ಯಾದ್ಯಂತ ಬಾರ್ ಗಳನ್ನು ಬಂದ್ ಮಾಡಲು ಬಾರ್ ಅಸೋಸಿಯೇಷನ್ ಈ ಹಿಂದೆ ನಿರ್ಧರಿಸಿತ್ತು. ಇದೀಗ ಇಂದು ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಬಾರ್ ಅಸೋಸಿಯೇಷನ್ ನಾಳೆ ರಾಜ್ಯಾದ್ಯಂತ ಬಾರ್ ಗಳನ್ನು ಬಂದ್ ಮಾಡುವ ನಿರ್ಧಾರವನ್ನು ವಾಪಸ್ ಪಡೆದಿದೆ.
ಹೌದು ನಾಳೆ ರಾಜ್ಯಾದ್ಯಂತ ಯಾವುದೇ ಕಾರಣಕ್ಕೂ ಬಾರ್ಗಳನ್ನು ಬಂದ್ ಮಾಡುವುದಿಲ್ಲ ಎಂದು ಬಂದ್ ನಿರ್ಧಾರವನ್ನು ಬಾರ್ ಅಸೋಸಿಯೇಷನ್ ಇದೀಗ ಹಿಂಪಡೆದಿದೆ. ಬಾರ್ ಮಾಲೀಕರ ಸಂಘದ ಪದಾಧಿಕಾರಿಗಳ ಸಂಧಾನ ಇದೀಗ ಯಶಸ್ವಿಯಾಗಿದೆ. ಹಾಗಾಗಿ ನಾಳೆ ಯಾವುದೇ ಕಾರಣಕ್ಕೂ ರಾಜ್ಯದ ಎಲ್ಲಾ ಬಾರ್ ಗಳನ್ನು ಬಂದ್ ಮಾಡುವುದಿಲ್ಲ.
ಕರುಣಾಕರ ಹೆಗಡೆ ನೇತೃತ್ವದ ತಂಡವು ಸಿಎಂ ಸಿದ್ದರಾಮಯ್ಯ ಅವರನ್ನು ಇಂದು ಭೇಟಿಯಾಯಿತು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸುಧೀರ್ಘವಾಗಿ ಚರ್ಚೆ ನಡೆಸಿ, ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳ ಸಂಧಾನ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಎಂದಿನಂತೆ ಬಾರ್ ಗಳಲ್ಲಿ ಮದ್ಯ ಮಾರಾಟ ನಡೆಯಲಿದೆ.
ರಾಜ್ಯ ಅಬಕಾರಿ ಇಲಾಖೆಯಲ್ಲಿ ದಿನೇ ದಿನೇ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಿ ಅಂತ ಸರ್ಕಾರದ ಗಮನಕ್ಕೆ ತಂದರೇ ಈವರೆಗೆ ಕ್ರಮವಹಿಸಿಲ್ಲ. ನಮ್ಮ ಜೊತೆಗೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಕೂಡ ಸಭೆ ಕರೆದು ಮಾತನಾಡಿಲ್ಲ ಎಂಬುದಾಗಿ ಕಿಡಿಕಾರಿದ್ದರು.
ರಾಜ್ಯದಲ್ಲಿನ ಅಬಕಾರಿ ನೀತಿ ವಿರುದ್ಧ ಮದ್ಯ ಮಾರಾಟಗಾರರು ನವೆಂಬರ್.20ರಂದು ಮದ್ಯ ಮಾರಾಟವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತದೆ. ಅದು ವೈನ್, ಬಾರ್ ಅಂಡ್ ರೆಸ್ಟೋರೆಂಟ್ ಸೇರಿದಂತೆ ಯಾವುದೇ ಮದ್ಯದಂಗಡಿಯಲ್ಲಿ ಮದ್ಯ ಮಾರಾಟ ಮಾಡುವುದಿಲ್ಲ. ಮದ್ಯ ಮಾರಾಟ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದರು. ಇದೀಗ ಬಾರ್ ಅಸೋಸಿಯೇಷನ್ ಬಂದ್ ಅನ್ನು ಹಿಂಪಡೆದಿದೆ.