ಬೆಂಗಳೂರು : ನವೆಂಬರ್ ಅಂತ್ಯದಿಂದ ಡಿಸೆಂಬರ್ ತಿಂಗಳ ವರೆಗೆ ರಾಜ್ಯದಲ್ಲಿ ಅಧಿಕ ಚಳಿ ಇರುತ್ತದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿ ಎಸ್ ಪಾಟೀಲ್ ಮಾಹಿತಿ ನೀಡಿದರು.
ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಡಿಸೆಂಬರ್ ಹಾಗೂ ಜನವರಿಯಲ್ಲಿ 8 ರಿಂದ 10 ಡಿಗ್ರಿ ಉಷ್ಣಾಂಶ ಇರಬಹುದು. ಬೆಂಗಳೂರಿನಲ್ಲಿ ಡಿಸೆಂಬರ್ ಹಾಗೂ ಜನವರಿಯಲ್ಲಿ 12 ರಿಂದ 14 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ. ಚಳಿಗಾಲದಲ್ಲಿ ನಸುಕಿನ ಜಾವ 4 ಗಂಟೆಯಿಂದ ಬೆಳಗ್ಗೆ 8 ಗಂಟೆಯವರೆಗೂ ಶೀತದ ವಾತವರಣ ಇರಲಿದ್ದು, ಶೀತ -ಜ್ವರ ಹೆಚ್ಚಾಗಬಹುದು ಎಂದು ಅವರು ಮಾಹಿತಿ ನೀಡಿದರು.
ಫೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ಉಷ್ಣಾಂಶ ಕಡಿಮೆಯಾಗುವ ಹಿನ್ನೆಲೆಹೆಚ್ಚಿನ ಚಳಿ ಅನುಭವವಾಗಲಿದೆ.ಹಾಗಾಗಿ ಈ ವರ್ಷ ಚಳಿಗಾಲ ತೀವ್ರವಾಗುವ ಹೆಚ್ಚಿನ ಸಾಧ್ಯತೆ ಇದೆ. ನವೆಂಬರ್ ಅಂತ್ಯದಿಂದ ಡಿಸೆಂಬರ್‌ವರೆಗೂ ಅಧಿಕ ಚಳಿ ಇರಲಿದ್ದು, ಈ ಚಳಿಯ ಅನುಭವ ಮುಂದಿನ ಜನವರಿಯಿಂದ ಮಾರ್ಚ್ ವರೆಗೂ ಕೂಡ ಮುಂದುವರೆಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.