ಬೆಂಗಳೂರು : ಮಹಾರಾಷ್ಟ್ರದ ಚುನಾವಣೆ ಹಿನ್ನೆಲೆಯಲ್ಲಿ ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನಿನ್ನೆ ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಭಾರತದ ರಾಜಕೀಯದಲ್ಲಿ ಅತ್ಯಂತ ಅಪಾಯಕಾರಿ ಏನಾದರೂ ಇದ್ದರೆ ಅದು ಬಿಜೆಪಿ ಮತ್ತು ಆರ್ಎಸ್ಎಸ್ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಈಗಾಗಲೇ ದೇಶದ ಜನತೆ ಕಾಂಗ್ರೆಸ್ ಘಟಸರ್ಪದ ಹಲ್ಲನ್ನು ಕಿತ್ತೇಸಿದಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಟ್ವೀಟ್ ನಲ್ಲಿ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮಾನ್ಯ @kharge ಅವರೇ,ನಿಮ್ಮ ಹಿರಿತನದ ಬಗ್ಗೆ ಗೌರವ ಇದ್ದೇ ಇದೆ, ಆದರೆ ನಿಮ್ಮ ಬಾಯಿಂದ ಹೊರಡುವ ನಂಜುಕಾರುವ ದ್ವೇಷದ ಮಾತುಗಳನ್ನು ಒಪ್ಪಲಾರೆವು. ಕೋಟಿ,ಕೋಟಿ ಜನರ ಹೋರಾಟ, ತ್ಯಾಗ- ಬಲಿದಾನದ ಫಲವಾಗಿ ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಿಕೊಂಡ ಸ್ವಾತಂತ್ರ್ಯವನ್ನು ನೆಹರೂ ಕುಟುಂಬ ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡು ಪ್ರಜಾಪ್ರಭುತ್ವದೊಂದಿಗೆ ಚೆಲ್ಲಾಟವಾಡಿ, ಪ್ರಜಾತಂತ್ರ ವ್ಯವಸ್ಥೆಯ ಕತ್ತು ಹಿಸುಕಲು ‘ತುರ್ತು ಪರಿಸ್ಥಿತಿ ಎಂಬ ವಿಷಕಾರಿ ಅಣ್ವಸ್ತ್ರ’ವನ್ನು ದೇಶದ ಮೇಲೆ ಬಳಸಿದ್ದು ನಿಮ್ಮ @INCIndia ಎಂಬುದನ್ನು ಇಷ್ಟು ಬೇಗ ನೀವು ಮರೆತಂತಿದೆ.
ನೆಹರು ಕುಟುಂಬದ ನೆರಳಿನಲ್ಲಿ ರಾಜಕಾರಣ ಮಾಡುತ್ತಿರುವ ನೀವು ಅವರನ್ನು ಓಲೈಸುವ ಭರದಲ್ಲಿ ‘ಕೊಲ್ಲುವ’ ಮಾತುಗಳನ್ನಾಡಿರುವುದುನಿಮ್ಮ ಘನತೆಯನ್ನು ಕುಗ್ಗಿಸಿದೆ. ಕಾಂಗ್ರೆಸ್ ನ ಗುಲಾಮಗಿರಿ ರಾಜಕಾರಣವನ್ನು ಮೂಲೋತ್ಪಾಟನೆ ಮಾಡಿ ದೇಶದಲ್ಲಿ ನೈಜ ಭಾರತೀಯತೆಯ ಪರಿಪೂರ್ಣ ಪ್ರಜಾಪ್ರಭುತ್ವವನ್ನು ಅಸ್ತಿತ್ವಕ್ಕೆ ತರಬೇಕೆಂಬ ನಿಟ್ಟಿನಲ್ಲಿ ಶತಮಾನದ ಹೋರಾಟ ನಡೆಸಿದ್ದು ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯಕ್ಕೆ ಪೂರಕವಾದ ರಾಷ್ಟ್ರವನ್ನು ಕಟ್ಟಬೇಕೆಂದು ಸಂಕಲ್ಪಿಸಿ ವಿಶ್ವದಲ್ಲಿ ಮುಂಚೂಣಿಯ ಸ್ಥಾನದಲ್ಲಿ ಭಾರತವನ್ನು ತಂದು ನಿಲ್ಲಿಸಿರುವುದು ಭಾರತೀಯ ಜನತಾ ಪಾರ್ಟಿ. ಯಾವ ಪಕ್ಷ ವಿಷದ ಹಾವು? ಎನ್ನುವುದನ್ನು ಈ ದೇಶದ ಜನತೆ ತೀರ್ಮಾನಿಸಿ ಈಗಾಗಲೇ ಕಾಂಗ್ರೆಸ್ ಎಂಬ ಘಟಸರ್ಪದ ಹಲ್ಲುಗಳನ್ನು ಕಿತ್ತೆಸೆದಿದ್ದಾರೆ. ಅದರ ನೆರಳಿನಲ್ಲಿ ನಿಂತು ಮಾತನಾಡುತ್ತಿರುವ ನಿಮ್ಮಿಂದ ಜನರು ದ್ವೇಷ ಹಾಗೂ ವಿಷದ ಮಾತುಗಳನ್ನಲ್ಲದೇ ಇನ್ನೇನು ನಿರೀಕ್ಷಿಸಲು ಸಾಧ್ಯ?
ಖರ್ಗೆ ಹೇಳಿದ್ದೇನು?
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಕಾಂಗ್ರೆಸ್ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಖರ್ಗೆ, ಭಾರತದ ರಾಜಕೀಯದಲ್ಲಿ ಅತ್ಯಂತ ಅಪಾಯಕಾರಿ ಏನಾದರೂ ಇದ್ದರೆ ಅದು ಬಿಜೆಪಿ ಮತ್ತು ಆರ್ಎಸ್ಎಸ್. ಇವು ವಿಷಕಾರಿ ಹಾವಿನಂತಿದೆ. ಹಾವು ಕಚ್ಚಿದರೆ, ವ್ಯಕ್ತಿ ಸಾಯುತ್ತಾನೆ. ಆದರೆ ಇಂತಹ ವಿಷಕಾರಿ ಹಾವುಗಳನ್ನು ಕೊಲ್ಲಬೇಕು ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ, ಮೋದಿಯವರ ಅಧಿಕಾರದ ಹಸಿವು ಇನ್ನೂ ಮುಗಿಯುತ್ತಿಲ್ಲ. ಮೊನ್ನೆ ಮೊನ್ನೆಯವರೆಗೂ ಮೋದಿ ಮಹಾರಾಷ್ಟ್ರದಲ್ಲಿದ್ದರು, ಇಂದು ವಿದೇಶ ಪ್ರವಾಸದಲ್ಲಿದ್ದಾರೆ. ಆದರೆ ಮಣಿಪುರ ಅಲ್ಲಿ ಬೆಂಕಿಯಿಂದ ಹೊತ್ತಿ ಉರಿಯುತ್ತಿದೆ, ಎಷ್ಟೋ ಜನರು ಸಾಯುತ್ತಿದ್ದಾರೆ, ಬುಡಕಟ್ಟು ಮಹಿಳೆಯರನ್ನು ಅವಮಾನಿಸಲಾಗುತ್ತಿದೆ ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ, ಆದರೆ ಮೋದಿ ಮಣಿಪುರಕ್ಕೆ ಇನ್ನೂ ಭೇಟಿ ನೀಡಲಿಲ್ಲ. ಮೊದಲು ಅವರ ಮನೆಯನ್ನು ನೋಡಿಕೊಳ್ಳಿ, ನಂತರ ಎಲ್ಲಿ ಬೇಕಾದರೂ ಹೋಗಬಹುದು ಎಂದು ಹೇಳಿದ್ದಾರೆ.
ಮಾನ್ಯ @kharge ಅವರೇ,
ನಿಮ್ಮ ಹಿರಿತನದ ಬಗ್ಗೆ ಗೌರವ ಇದ್ದೇ ಇದೆ, ಆದರೆ ನಿಮ್ಮ ಬಾಯಿಂದ ಹೊರಡುವ ನಂಜುಕಾರುವ ದ್ವೇಷದ ಮಾತುಗಳನ್ನು ಒಪ್ಪಲಾರೆವು. ಕೋಟಿ,ಕೋಟಿ ಜನರ ಹೋರಾಟ, ತ್ಯಾಗ- ಬಲಿದಾನದ ಫಲವಾಗಿ ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಿಕೊಂಡ ಸ್ವಾತಂತ್ರ್ಯವನ್ನು ನೆಹರೂ ಕುಟುಂಬ ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡು… pic.twitter.com/aVDeBXTA3D— Vijayendra Yediyurappa (@BYVijayendra) November 19, 2024