ಬೆಂಗಳೂರು : ಈಗಾಗಲೇ ಕಳೆದ ನವೆಂಬರ್ 13 ರಂದು ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಗೆ ಮತದಾನ ನಡೆದಿದ್ದು, 23 ರಂದು ಫಲಿತಾಂಶ ಹೊರಬೀಳಲಿದೆ. ಇದರ ಮಧ್ಯ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿಪಿ ಯೋಗೇಶ್ವರ್ ಅವರ ವಿರುದ್ಧ ಸಹಿ ನಕಲು ಮಾಡಿದ್ದರ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.
ಹೌದು ಸಿಪಿ ಯೋಗೇಶ್ವರ್ ಅವರ ಮೊದಲನೇ ಪತ್ನಿಯ ಪುತ್ರ ಶ್ರವಣ್ ಅವರ ಸಹಿ ನಕಲು ಮಾಡಿದ ಆರೋಪದಡಿ ಸಿಪಿ ಯೋಗೇಶ್ವರ್ ವಿರುದ್ಧ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ. ಪ್ರಕರಣದ ವಿಚಾರಣೆ ನಾಳೆ ನಡೆಯಲಿದೆ. ದೂರು ನೀಡಲು ಕಾರಣ ಏನೆಂದರೆ ಬೆಂಗಳೂರಿನಲ್ಲಿ ಸಿಪಿ ಯೋಗೇಶ್ವರ್ ಮೊದಲನೇ ಪತ್ನಿ ಹಾಗೂ ಪತ್ರ ಶ್ರವಣ್ ಬೆಂಗಳೂರಿನಲ್ಲಿ ಮನೆ ಖರೀದಿಸಿದ್ದರು. ಈ ಮನೆಯನ್ನು ಸಿಪಿ ಯೋಗೇಶ್ವರ್ ಅವರ ಮೊದಲನೇ ಪತ್ನಿ ಹಾಗೂ ಪುತ್ರ ಶ್ರವಣ್, ನಿಶಾಗೆ ಹುಡುಗರೆಯಾಗಿ ನೀಡಿದ್ದಾರೆ.
ಆದರೆ ಸಿಪಿ ಯೋಗೇಶ್ವರ್ ಅವರು ಪುತ್ರ ಶ್ರವಣ್ ಅವರ ಸಹಿ ನಕಲು ಮಾಡಿ ಇದರಲ್ಲಿ ನನಗೂ ಭಾಗ ಬೇಕು ಎಂದು ಅರ್ಜಿ ಹಾಕಿದ್ದಾರೆ.ಅಲ್ಲದೆ ನಾನು ನನ್ನ ಅಕ್ಕನಿಗೆ ಮನೆ ಗಿಫ್ಟ್ ನೀಡಿಲ್ಲ. ಮನೆಯಲ್ಲಿ ನನಗೂ ಭಾಗ ಬೇಕು ಅಂತ ಶ್ರವಣ್ ಅವರ ಹೆಸರಿನಲ್ಲಿ ಸಿಪಿ ಯೋಗೇಶ್ವರ ಕೋರ್ಟ್ನಲ್ಲಿ ಅರ್ಜಿ ಹಾಕಿದ್ದಾರೆ. ಈ ಅರ್ಜಿಯಲ್ಲಿ ಶ್ರವಣ್ ಅವರ ಸಹಿಯನ್ನು ಸಿಪಿ ಯೋಗೇಶ್ವರ್ ಮಾಡಿದ್ದಾರೆ. ಹೀಗೆ, ಸಿಪಿ ಯೋಗೇಶ್ವರ್ ಪತ್ರ ಶ್ರವಣ ಅವರ ಸಹಿ ನಕಲು ಮಾಡಿದ್ದಾರೆ.
ಈ ಕುರಿತಂತೆ ಪತ್ರ ಶ್ರವಣ ಹಾಗೂ ಸಿಪಿ ಯೋಗೇಶ್ವರ್ ಅವರ ನಡುವೆ ಮೊಬೈಲ್ ನಲ್ಲಿ ಸಭಾಷಣೆ ನಡೆದಿದ್ದು, ಕೋರ್ಟ್ ನಲ್ಲಿ ಅರ್ಜಿ ಹಾಕಿರುವ ಕುರಿತು ನನಗೆ ಗೊತ್ತಿಲ್ಲ. ಮನೆಯಲ್ಲಿ ನನಗೆ ಭಾಗ ಬೇಕು ಅಂತ ಕೇಳಿಲ್ಲ.ಯಾರೋ ವಕೀಲರು ಕರೆ ಮಾಡಿ, ಆಸ್ತಿ ಸಂಬಂಧಿಸಿದ ದಾಖಲೆ ಕೇಳುತ್ತಿದ್ದಾರೆ. ಸಹಿ ಹೊಂದಾಣಿಕೆಯಾಗುತ್ತಿಲ್ಲ ಎನ್ನುತ್ತಿದ್ದಾರೆ. ನಾನು ಯಾವುದೇ ಆಸ್ತಿ ವಕಾಲತ್ಗೆ ಸಹಿ ಮಾಡಿಲ್ಲ. ಆದ್ರೆ, ಈ ಸಹಿ ಮಾಡಿದ್ದು ಯಾರು? ಎಂದು ಶ್ರವಣ್ ಸಿಪಿವೈಗೆ ಪ್ರಶ್ನಿಸಿದ್ದಾರೆ.
ಈ ವೇಳೆ ಸಿಪಿ ಯೋಗೇಶ್ವರ ಅವರು, ಆಸ್ತಿ ಮಾರಾಟವಾಗಬಾರದು ಅಂತ ನಾನೇ ಮಾಡಿದೆ ಎಂದು ಒಪ್ಪಿಕೊಳ್ಳುತ್ತಾರೆ. ಇದೇ ವಿಚಾರಕ್ಕೆ ಶ್ರವಣ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಒಂದು ವೇಳೆ, ಬುಧವಾರ ನಡೆಯುವ ವಿಚಾರಣೆಯಲ್ಲಿ ಸಿಪಿ ಯೋಗೇಶ್ವರ ವಿರುದ್ಧದ ಆರೋಪ ಸಾಬೀತಾದರೆ ಬಂಧನವಾಗುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.