ನವದೆಹಲಿ : ಈಶಾನ್ಯ ರಾಜ್ಯದಲ್ಲಿ “ಸವಾಲಿನ” ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯನ್ನ ಗಮನದಲ್ಲಿಟ್ಟುಕೊಂಡು 5,000ಕ್ಕೂ ಹೆಚ್ಚು ಸಿಬ್ಬಂದಿಯನ್ನ ಒಳಗೊಂಡ ಹೆಚ್ಚುವರಿ 50 ಸಿಎಪಿಎಫ್ ತುಕಡಿಗಳನ್ನ ಮಣಿಪುರಕ್ಕೆ ಕಳುಹಿಸಲು ಕೇಂದ್ರ ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
ಜಿರಿಬಾಮ್ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದು ಇತರ ಸ್ಥಳಗಳಿಗೆ ಹರಡಿದ ನಂತರ ನವೆಂಬರ್ 12 ರಂದು ಹೊರಡಿಸಿದ ಆದೇಶದ ನಂತರ ಗೃಹ ಸಚಿವಾಲಯ (MHA) 20 ಹೆಚ್ಚುವರಿ ಸಿಎಪಿಎಫ್ ತುಕಡಿಗಳನ್ನು ಸಿಆರ್ಪಿಎಫ್ನ 15 ಮತ್ತು ಬಿಎಸ್ಎಫ್ನ ಐದು ತುಕಡಿಗಳನ್ನ ರಾಜ್ಯಕ್ಕೆ ರವಾನಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಈ ವಾರದೊಳಗೆ ಹೆಚ್ಚುವರಿ 50 ತುಕಡಿಗಳನ್ನು ಮಣಿಪುರಕ್ಕೆ ರವಾನಿಸಲು ಆದೇಶಿಸಲಾಗಿದೆ. 35 ತುಕಡಿಗಳನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (MHA) ಮತ್ತು ಉಳಿದವುಗಳನ್ನ ಗಡಿ ಭದ್ರತಾ ಪಡೆ (BSF) ಯಿಂದ ಪಡೆಯಲಾಗುವುದು ಎಂದು ಮೂಲಗಳು ತಿಳಿಸಿವೆ.
BIG NEWS : ‘ಪಿಎಂ ಕೇರ್ಸ್ ಫಂಡ್’ ನಲ್ಲೂ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ : ಸಚಿವ ದಿನೇಶ್ ಗುಂಡೂರಾವ್ ಆರೋಪ
BREAKING : ಶ್ರೀಲಂಕಾ ಪ್ರಧಾನಿಯಾಗಿ ‘ಹರಿಣಿ ಅಮರಸೂರ್ಯ’ ಮರು ನೇಮಕ, ಅಧ್ಯಕ್ಷ ‘ದಿಸ್ಸಾನಾಯಕೆ’ ಘೋಷಣೆ
BIG NEWS : ‘BPL’ ಕಾರ್ಡ್ ಬದಲಾವಣೆಯಲ್ಲಿ ಬೀದಿ ಬದಿಯ ವ್ಯಾಪಾರಿಗಳಿಗೂ ಶಾಕ್ ನೀಡಿದ ರಾಜ್ಯ ಸರ್ಕಾರ