ಮಂಗಳೂರು: ರೆಸಾರ್ಟ್ ನಲ್ಲಿನ ಸ್ವಿಮ್ಮಿಂಗ್ ಪೂಲ್ ನಲ್ಲಿ ಆಳ ತಿಳಿಯದೇ ಈಜು ಬಾರದಂತ ಮೂವರು ಯುವತಿಯರು ಸಾವನ್ನಪ್ಪಿದ ಘಟನೆಯ ನಂತ್ರ, ಜಿಲ್ಲಾ ಆಡಳಿತವು ರೆಸಾರ್ಟ್ ನ ಪರವಾನಗಿಯನ್ನು ರದ್ದುಗೊಳಿಸಿದೆ.
ಈ ಕುರಿತಂತೆ ಮಂಗಳೂರು ಎಸಿ ಹರ್ಷವರ್ಧನ್ ಸುದ್ದಿಗಾರರೊಂದಿಗೆ ಮಾತನಾಡಿ, ಅವೈಜ್ಞಾನಿಕವಾಗಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸಿ, ಮೂವರು ಯುವತಿಯರ ಸಾವಿಗೆ ಕಾರಣವಾದಂತ ರೆಸಾರ್ಟ್ ಲೈಸೆನ್ಸ್ ತಾತ್ಕಾಲಿಕವಾಗಿ ರದ್ದುಗೊಳಿಸುತ್ತಿರುವುದಾಗಿ ತಿಳಿಸಿದರು.
ಮಂಗಳೂರಿನ ಉಳ್ಳಾಲ ಸಮೀಪದ ಸಾಯಿರಾಂ ವಾಝ್ಕೋ ರೆಸಾರ್ಟ್ ಗೆ ಮೈಸೂರಿನಿಂದ ಪ್ರವಾಸಕ್ಕೆಂದು ಶನಿವಾರದಂದು ಮೂವರು ಯುವತಿಯರಿ ತೆರಳಿದ್ದರು. ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಮೂವರು ಯುವತಿಯರು ಕೊಠಡಿಯಲ್ಲಿ ಉಳಿದುಕೊಂಡು, ಆ ಬಳಿಕ ಈಜು ಕೊಳದಲ್ಲಿ ಈಜಲು ತೆರಳಿದ್ದರು.
ಈವೇಳೆ ಅವೈಜ್ಞಾನಿಕತೆಯಿಂದ ಕೂಡಿದ್ದಂತ ರೆಸಾರ್ಟ್ ನ ಸ್ವಿಮ್ಮಿಂಗ್ ಪೂಲ್ ಆಳ ತಿಳಿಯದೇ ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿದ್ದರು. ಈ ಸಂಬಂಧ ಉಳ್ಳಾಲ ಠಾಣೆಯ ಪೊಲೀಸರು ಮಾಲೀಕ ಮನೋಹರ್ ಹಾಗೂ ಪುತ್ರನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
BIG NEWS : ಅನರ್ಹರ `BPL’ ಕಾರ್ಡ್ ಗಳು ಮಾತ್ರ ವಾಪಸ್ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ