ನವದೆಹಲಿ: ದೆಹಲಿಯ ಆಮ್ ಆದ್ಮಿ ಪಕ್ಷಕ್ಕೆ ಬಿಗ್ ಶಾಕ್ ಎದುರಾಗಿದ್ದು, ಪಕ್ಷದ ಹಿರಿಯ ನಾಯಕ ಮತ್ತು ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಅವರು ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.
ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಉದ್ದೇಶಿಸಿ ಬರೆದ ರಾಜೀನಾಮೆ ಪತ್ರದಲ್ಲಿ ಗಹ್ಲೋಟ್ ಅವರು ಈಡೇರದ ಭರವಸೆಗಳು ಮತ್ತು ಇತ್ತೀಚಿನ ವಿವಾದಗಳನ್ನು ತಮ್ಮ ನಿರ್ಧಾರಕ್ಕೆ ಕಾರಣವೆಂದು ಎತ್ತಿ ತೋರಿಸಿದ್ದಾರೆ.
ಎಎಪಿ ಸರ್ಕಾರದ ಪ್ರಮುಖ ವ್ಯಕ್ತಿಯಾಗಿರುವ ಗೆಹ್ಲೋಟ್, ದೆಹಲಿಯ ಜನರಿಗೆ ಮಾಡಿದ ನಿರ್ಣಾಯಕ ಬದ್ಧತೆಗಳನ್ನು ನೀಡಲು ಪಕ್ಷದ ಅಸಮರ್ಥತೆಯನ್ನು ಟೀಕಿಸಿದ್ದಾರೆ. ಪ್ರಮುಖ ಚುನಾವಣಾ ಭರವಸೆಯಾದ ಯಮುನಾ ನದಿಯನ್ನು ಸ್ವಚ್ಛಗೊಳಿಸುವಲ್ಲಿ ಪಕ್ಷ ವಿಫಲವಾಗಿದೆ. ನಾವು ಯಮುನಾ ನದಿಯನ್ನು ಶುದ್ಧ ನದಿಯಾಗಿ ಪರಿವರ್ತಿಸುವುದಾಗಿ ಜನರಿಗೆ ಭರವಸೆ ನೀಡಿದ್ದೆವು. ಆದರೆ ಅದನ್ನು ಮಾಡಲೇ ಇಲ್ಲ. ಈಗ ಯಮುನಾ ನದಿಯು ಹಿಂದೆಂದಿಗಿಂತಲೂ ಹೆಚ್ಚು ಕಲುಷಿತಗೊಂಡಿದೆ ತಿಳಿಸಿದ್ದಾರೆ.