ಬೆಂಗಳೂರು: ರಾಜ್ಯ ಸರ್ಕಾರದಿಂದ 2025ನೇ ಸಾಲಿನಲ್ಲಿ ಸರ್ಕಾರಿ ನೌಕರರಿಗೆ ಸಿಗುವಂತ ಸಾರ್ವತ್ರಿಕ, ಪರಿಮಿತ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಹಾಗಾದ್ರೇ ಸಾರ್ವತ್ರಿಕ, ಪರಿಮಿತ ರಜೆಗಳು ಎಷ್ಟು ಎನ್ನುವ ಪಟ್ಟಿ ಮುಂದಿದೆ ಓದಿ.
ಈ ಕುರಿತಂತೆ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಅದರಲ್ಲಿ ಭಾರತ ಸರ್ಕಾರದ ಒಳಾಡಳಿ ತ ವ್ಯವಹಾರಗಳ ಇಲಾಖೆಯ ದಿನಾಂಕ:15.06.1957ರ ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿರುವ ನೆಗೋಷಿಯಬಲ್ ಇನ್ನುಮೆಂಟ್ ಆಕ್ಟ್ 1881ರ (1881ರ ಅಧಿನಿಯಮ ಸಂಖ್ಯೆ:26) 25ನೇ ಸೆಕ್ಷನ್ ನಲ್ಲಿರುವ ವಿವರಣೆಯಂತೆ 2024ನೇ ವರ್ಷದಲ್ಲಿ ಈ ಕೆಳಗಿನ ದಿನಗಳನ್ನು ಕರ್ನಾಟಕ ರಾಜ್ಯದಾದ್ಯಂತ ಸಾರ್ವತ್ರಿಕ ರಜೆಗಳೆಂದು ಘೋಷಿಸಲಾಗಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಹಾಗೂ ಈ ಕೆಳಕಂಡ ದಿನಗಳು ಎಂದಿದೆ.
ಇಲ್ಲಿದೆ 2025ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ
ದಿನಾಂಕ 14-01-2025 ಮಂಗಳವಾರ – ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
ದಿನಾಂಕ 26-02-2025 ಬುಧವಾರ – ಮಹಾ ಶಿವರಾತ್ರಿ
ದಿನಾಂಕ 31-03-2025 ಸೋಮವಾರ – ಖುತುಬ್ ಎ ರಂಜಾನ್
ದಿನಾಂಕ 10-04-2025 ಗುರುವಾರ – ಮಹಾವೀರ ಜಯಂತಿ
ದಿನಾಂಕ 14-04-2025 ಸೋಮವಾರ – ಡಾ.ಬಿಆರ್ ಅಂಬೇಡ್ಕರ್ ಜಯಂತಿ
ದಿನಾಂಕ 18-04-2025 ಶುಕ್ರವಾರ – ಗುಡ್ ಫ್ರೈಡೆ
ದಿನಾಂಕ 30-04-2025 ಬುಧವಾರ – ಬಸವ ಜಯಂತಿ, ಅಕ್ಷಯ ತೃತೀಯ
ದಿನಾಂಕ 01-05-2025 ಗುರುವಾರ – ಕಾರ್ಮಿಕ ದಿನಾಚರಣೆ
ದಿನಾಂಕ 07-06-2025 ಶನಿವಾರ – ಬಕ್ರೀದ್
ದಿನಾಂಕ 15-08-2025 ಶುಕ್ರವಾರ – ಸ್ವಾತಂತ್ರ್ಯ ದಿನಾಚರಣೆ
ದಿನಾಂಕ 27-08-2025 ಬುಧವಾರ – ವರಸಿದ್ಧಿ ವಿನಾಯಕ ವ್ರತ
ದಿನಾಂಕ 05-09-2025 ಶುಕ್ರವಾರ – ಈದ್ ಮಿಲಾದ್
ದಿನಾಂಕ 01-10-2025 ಬುಧವಾರ – ಮಹಾನವಮಿ, ಆಯುಧಪೂಜೆ, ವಿಜಯದಶಮಿ
ದಿನಾಂಕ 02-10-2025 ಗುರುವಾರ – ಗಾಂಧಿ ಜಯಂತಿ
ದಿನಾಂಕ 07-10-2025 ಮಂಗಳವಾರ – ಮಹರ್ಷಿ ವಾಲ್ಮೀಕಿ ಜಯಂತಿ
ದಿನಾಂಕ 20-10-2025 ಸೋಮವಾರ – ನರಕ ಚತುರ್ದಶಿ
ದಿನಾಂಕ 22-10-2025 ಬುಧವಾರ – ಬಲಿಪಾಡ್ಯಮಿ, ದೀಪಾವಳಿ
ದಿನಾಂಕ 01-11-2025 ಶನಿವಾರ – ಕನ್ನಡ ರಾಜ್ಯೋತ್ಸವ
ದಿನಾಂಕ 25-12-2025 ಗುರುವಾರ – ಕ್ರಿಸ್ ಮಸ್