ಬೆಂಗಳೂರು : ಬೆಂಗಳೂರಿನಲ್ಲಿ ಫ್ರೋರೇಟ್ ಶುಲ್ಕ ಕಟ್ಟಿಸಿಕೊಳ್ಳದೆ ಅನಧಿಕೃತವಾಗಿ ನೀರಿನ ಕನೆಕ್ಷನ್ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಲಮಂಡಳಿಯಲ್ಲಿನ ಕಳ್ಳಾಟ ಬಟಾ ಬಯಲಾಗಿದ್ದು, ಅಧಿಕಾರಿಗಳ ಈ ಒಂದು ಕಳ್ಳಾಟಕ್ಕೆ ಜಲ ಮಂಡಳಿಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಹೌದು ಜಲಮಂಡಳಿಯಲ್ಲಿ ಮತ್ತೊಂದು ಕಳ್ಳಾಟ ಬಟಾ ಬಯಲಾಗಿದ್ದು, ಅಧಿಕಾರಿಗಳಿಂದಲೇ ನೀರಿನಲ್ಲೂ ಕೂಡ ಇದೀಗ ಗೋಲ್ಮಾಲ್ ನಡೆಯುತ್ತಿದೆ. ಅನಧಿಕೃತವಾಗಿ ನೀರಿನ ಕನೆಕ್ಷನ್ ನೀಡುತ್ತಿರುವ ಅಧಿಕಾರಿಗಳು, ಪ್ರೊರೇಟ್ ಶುಲ್ಕ ಕಟ್ಟಿಸಿಕೊಳ್ಳದೆ ಅನಧಿಕೃತ ನೀರಿನ ಕನೆಕ್ಷನ್ ನೀಡಿದ್ದಾರೆ. ಇಂಜಿನಿಯರ್ಸ್, ಮೀಟರ್ ರೀಡರ್ ಗಳ ಕಳ್ಳಾಟ ಇದೀಗ ಬಟಾ ಬಯಲಾಗಿದೆ. ಅಂಜನಾಪುರ ಸೇರಿದಂತೆ ಹಲವುಡೆ ಅಕ್ರಮವಾಗಿ ಕನೆಕ್ಷನ್ ನೀಡಲಾಗಿದೆ.ಕಳ್ಳಾಟದಿಂದ ಜಲಮಂಡಳಿಗೆ ಸದ್ಯ ಕೋಟ್ಯಾಂತರ ರೂಪಾಯಿ ನಷ್ಟ ಆಗಿದೆ.
ಈ ಬಗ್ಗೆ ಜಲಮಂಡಳಿ ಅಧ್ಯಕ್ಷರಿಗೆ ಹಲವು ಬಾರಿ ದೂಡು ಕೂಡ ನೀಡಲಾಗಿತ್ತು. ರಾಜಾರೋಷವಾಗಿ ಅಧಿಕಾರಿಗಳು ಈ ಒಂದು ಕಳ್ಳಾಟ ನಡೆಸುತ್ತಿದ್ದಾರೆ.ಬೆಂಗಳೂರು ದಕ್ಷಿಣ ವಿಭಾಗದ ಅಧಿಕಾರಿಗಳ ಮೇಲೆ ಈ ಒಂದು ಆರೋಪ ಕೇಳಿ ಬಂದಿದೆ. ನೀರಿನ ಸಂಪರ್ಕ ಪಡಿಯೋಕೆ ಸಾಮಾನ್ಯ ಜನರು ಇದೀಗ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಲಂಚ ಪಡೆದು ಅಧಿಕಾರಿಗಳು ಅಕ್ರಮ ಸಂಪರ್ಕ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಚೀಫ್ ಇಂಜಿನಿಯರ್ ವೆಂಕಟೇಶ್ ಅವರ ಮೇಲು ಈ ಆರೋಪ ಕೇಳಿ ಬಂದಿದ್ದು, ಜೊತೆಗೆ ಭರತ್, ವಿನಯ್ ಜಲಪರಿವೀಕ್ಷಕ ಸೇರಿದಂತೆ ಹಲವರ ವಿರುದ್ಧ ಆರೋಪ ಕೇಳಿ ಬಂದಿದೆ. ಈ ಕುರಿತಂತೆ ಚೀಫ್ ಇಂಜಿನಿಯರ್ ವೆಂಕಟೇಶ್ ಸ್ಪಷ್ಟನೆ ನೀಡಿದ್ದು, ಇದರಲ್ಲಿ ನಾವು ಭಾಗಿಯಾಗಿಲ್ಲ.ಆ ರೀತಿ ಏನಾದರೂ ಅಕ್ರಮವಾಗಿ ಕನೆಕ್ಷನ್ ನೀಡಿದ್ದರೆ ನಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.