ಹಾವೇರಿ : ಇಂದು ರಾಜ್ಯದ ಮೂರು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಗೆ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 7 ಗಂಟೆ ಇಂದಲೇ ಮತದಾನ ಆರಂಭವಾಗಿದೆ. ಚನ್ನಪಟ್ಟಣ ಸಂಡೂರು ಹಾಗೂ ಶಿಗ್ಗಾವಿ ಕ್ಷೇತ್ರಗಳಲ್ಲಿ ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದ್ದಾರೆ ಆದರೆ ಶಿಗ್ಗಾವಿ ಕ್ಷೇತ್ರದ ದಂಡಿನಪೇಟೆಯ ಜನರು ಮಾತ್ರ ಮತದಾನದಿಂದ ದೂರ ಉಳಿದಿದ್ದಾರೆ.
ಹೌದು ಶಿಗ್ಗಾವಿಯ ದಂಡಿನಪೇಟೆಯಲ್ಲಿ ಚುನಾವಣಾ ಬಹಿಷ್ಕಾರ ಮಾಡಲಾಗಿದೆ. ಕಾರಣ ಏನೆಂದರೆ ಇಲ್ಲಿನ ಸುಮಾರು 45 ಮನೆಗಳಿಗೆ ಹಕ್ಕುಪತ್ರ ನೀಡದಿದ್ದಕ್ಕೆ ಜನರು ರೊಚ್ಚಿಗೆ ಎದ್ದಿದ್ದಾರೆ. ಉಳುವವನೇ ಭೂ ಒಡೆಯ ಕಾಯ್ದೆಯ ಅಡಿ ಜಮೀನು ಹಂಚಿಕೆ ಮಾಡಬೇಕಾಗಿತ್ತು.ಬೇರೆಯವರ ಹೆಸರಿನಲ್ಲಿ ದಲಿತರ ಜಮೀನು ಆರ್ ಟಿ ಸಿ ಮಾಡಲಾಗಿತ್ತು.6 ವರ್ಷಗಳ ಹಿಂದೆ ಇದ್ದಂತಹ 4 ಎಕರೆ ಜಮೀನು ಇದೀಗ ವಕ್ಫ್ ಹೆಸರಿಗೆ ಬದಲಾಗಿದೆ
ಈ ಜಾಗದಲ್ಲಿ 60 ವರ್ಷಗಳಿಂದ ಜನರು ವಾಸ ಮಾಡುತ್ತಿದ್ದಾರೆ. ಇದೀಗ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕರಿಸಿದ್ದಾರೆ. ಮನೆಗಳ ಮುಂದೆ ಬಹಿಷ್ಕಾರದ ಪೋಸ್ಟರ್ ಹಾಕಿ ಜನಪ್ರತಿನಿಧಿಗಳ ವಿರುದ್ಧ ಗರಂ ಆಗಿದ್ದಾರೆ.ಇದೆ ವೇಳೆ ಗ್ರಾಮದ ಹಲವು ಜನರು ತಮ್ಮ ಮನೆಯ ಮುಂದೆ ಚುನಾವಣಾ ಬಹಿಷ್ಕಾರ ಪ್ರದೇಶ ಎಂದು ಬ್ಯಾನರ್ ಕೂಡ ಹಾಕಿಕೊಂಡಿದ್ದಾರೆ.