ಬೆಂಗಳೂರು : ದ್ವಿಚಕ್ರ ವಾಹನಕ್ಕೆ ಸೈಡ್ ಬಿಡದಿದ್ದಕ್ಕೆ ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಾರ್ಪೊರೇಷನ್ ಬಳಿ ಈ ಒಂದು ಘಟನೆ ನಡೆದಿದೆ.ಟೂಲ್ಸ್ ನಿಂದ ಬಸ್ಸಿನ ಗಾಜು ಪುಡಿಪುಡಿ ಮಾಡಿ ಚಾಲಕನನ್ನು ಕೆಳಗಿಳಿಸಿ ಹಲ್ಲೆ ನಡೆಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಆರೋಪಿ ಮುಜಾಹಿದ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹೌದು ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಮುಜಾಹಿದ್ ಬೈಕ್ನಲ್ಲಿ ಹೋಗುತ್ತಿದ್ದ. ಈ ವೇಳೆ ಬಿಎಂಟಿಸಿ ಬಸ್ ಹಾಗೂ ಡಿವೈಡರ್ ಮಧ್ಯೆ ಯುವಕ ದ್ವಿಚಕ್ರ ವಾಹನವನ್ನು ನುಗ್ಗಿಸಿದ್ದಾನೆ.ಬಳಿಕ ಸೈಡ್ ಕೊಡುವಂತೆ ಬಿಎಂಟಿಸಿ ಬಸ್ ಚಾಲಕ ರಾಜೇಶ್ ಗೆ ಯುವಕ ಆವಾಜ್ ಹಾಕಿದ್ದಾನೆ. ಕಾರ್ಪೊರೇಷನ್ ಸಿಗ್ನಲ್ ನಲ್ಲಿ ಬಿಎಂಟಿಸಿ ಬಸ್ ನಿಲ್ಲಿಸುತ್ತಿದ್ದಂತೆ ಹಲ್ಲೆ ನಡೆಸಿದ್ದಾನೆ.
ಅವಾಚ್ಯ ಶಬ್ದಗಳಿಂದ ನಿಂದಿಸಿ ಬೈಕ್ ನಲ್ಲಿದ್ದ ಟೂಲ್ಸ್ ನಿಂದ ಚಾಲಕನ ಮೇಲೆ ಯುವಕ ಹಲ್ಲೆ ಮಾಡಿದ್ದಾನೆ.ಕೂಡಲೇ ಆರೋಪಿಯನ್ನು ಹಿಡಿದು ಸಾರ್ವಜನಿಕರು ಥಳಿಸಿದ್ದಾರೆ. ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಸ್ ಜೆ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ನಡೆದಿದೆ. ಚಾಲಕ ರಾಜೇಶ್ ಎಸ್ ಎ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ನೀಡಿದ್ದಾರೆ ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹಿಂದಿನಿಂದ ಬಂದ ಬಸ್ ಟಚ್ ಆಯ್ತಾ ಅಂತ ಪ್ರಶ್ನಿಸಿದ್ದಾನೆ. ಈ ವೇಳೆ ಬಸ್ ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪ ಮಾಡಿದ್ದಾನೆ.ಬಳಿಕ ಕೋಪಗೊಂಡ ಬೈಕ್ ಸವಾರ ಬಿಎಂಟಿಸಿ ಬಸ್ ಚೇಸ್ ಮಾಡಿದ್ದಾನೆ. ಚಾಲಕನ ಪಕ್ಕಕ್ಕೆ ಬಂದು ಬಸ್ಸಿನ ವಿಂಡೋ ಗಾಜು ಧ್ವಂಸಗೊಳಿಸಿ ಮುಜಾಹಿದ್ದ್ ಹಲ್ಲೆ ಮಾಡಿದ್ದಾನೆ.ಚಾಲಕನಿಗೆ ಹಲ್ಲೆ ಮಾಡುವಾಗ ಜನ ಸುತ್ತುವರೆದು ಅವನಿಗೆ ಥಳಿಸಿದ್ದಾರೆ.
ಈ ಕುರಿತು ಎಸ್ ಜೆ ಪಾರ್ಕ್ ಠಾಣೆಯಲ್ಲಿ ಬಸ್ ಚಾಲಕ ದೂರು ದಾಖಲಿಸಿದ್ದಾರೆ. ಮೆಕಾನಿಕ್ ಮುಜಾಹಿದ್ದನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಈ ವೇಳೆ ಬಸ್ ಚಾಲಕನೇ ಮೊದಲು ಡಿಕ್ಕಿ ಹೊಡೆದು ಬೈದಿದ್ದಾಗಿ ಸವಾರ ಆರೋಪ ಮಾಡಿದ್ದಾನೆ. ಆ ಬಳಿಕ ನಾನು ಗಾಜು ಧ್ವಂಸಗೊಳಿಸಿದ್ದೇನೆ ಎಂದು ಹೇಳಿದ್ದಾನೆ ಪೊಲೀಸರು ಬಿಎಂಟಿಸಿ ಬಸ್ ದ್ವಿಚಕ್ರ ವಾಹನವನ್ನು ಕೂಡ ಪಡೆದುಕೊಂಡಿದ್ದಾರೆ.