Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘LPG ಸಿಲಿಂಡರ್’ ವಿತರಣೆ ಪಡೆಯುವ ಮುನ್ನ ಹುಷಾರ್! ಈ 4 ವಿಷಯಗಳನ್ನು ತಪ್ಪದೇ ಪರೀಕ್ಷಿಸಿ

19/04/2026 2:00 PM

ಪಿಪಿಎಫ್ ಹೂಡಿಕೆ ಮಂತ್ರ: ನಿವೃತ್ತಿಯ ನಂತರ ಮಾಸಿಕ ₹61,000 ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

19/04/2026 1:55 PM

ಕಡಿಮೆ ಬಜೆಟ್, ಹೆಚ್ಚಿನ ಲಾಭ: ಈ ಸಣ್ಣ ಉದ್ಯಮಗಳ ಮೂಲಕ ನೀವೂ ಆಗಬಹುದು ಬಾಸ್!

19/04/2026 1:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಕರಿಯಣ್ಣ’ ಹೇಳಿಕೆ ವಿರುದ್ಧ ಸಿಡಿದೆದ್ದ ‘ರಾಜ್ಯ ಒಕ್ಕಲಿಗರ ಸಂಘ’: ‘ಜಮೀರ್’ ಸಂಪುಟದಿಂದ ಕೈಬಿಡುವಂತೆ ‘ಸಿಎಂಗೆ ಪತ್ರ’
KARNATAKA

‘ಕರಿಯಣ್ಣ’ ಹೇಳಿಕೆ ವಿರುದ್ಧ ಸಿಡಿದೆದ್ದ ‘ರಾಜ್ಯ ಒಕ್ಕಲಿಗರ ಸಂಘ’: ‘ಜಮೀರ್’ ಸಂಪುಟದಿಂದ ಕೈಬಿಡುವಂತೆ ‘ಸಿಎಂಗೆ ಪತ್ರ’

By kannadanewsnow0912/11/2024 5:53 PM

ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರನ್ನು ಸಚಿವ ಜಮೀರ್ ಅಹ್ಮದ್ ಖಾನ್ ಕರಿಯಣ್ಣ ಅಂತ ಕರೆದಿದ್ದರು. ಈ ಹೇಳಿಕೆ ವಿವಾದಕ್ಕೂ ಕಾರಣವಾಗಿತ್ತು. ಜನಾಂಗೀಯ ನಿಂದನೆ ಮಾಡಿದಂತ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರದಲ್ಲಿ ರಾಜ್ಯ ಒಕ್ಕಲಿಗರ ಸಂಘ ಆಗ್ರಹಿಸಿದೆ.

ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿರುವಂತ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ನಿಂದನಾತ್ಮಕವಾದ ಭಾಷೆ ಬಳಸಿರುವುದನ್ನು ರಾಜ್ಯ ಒಕ್ಕಲಿಗರ ಸಂಘವು ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಜಮೀರ್ ಅವರು ಬಳಸಿರುವ ಭಾಷೆಯಿಂದ ಕುಮಾರಸ್ವಾಮಿ ಅವರಿಗೆ ಮಾತ್ರ ಅಪಮಾನ ಮಾಡಿಲ್ಲ. ಇಡೀ ಒಕ್ಕಲಿಗ ಜನಾಂಗಕ್ಕೆ ಮಾಡಿರುವ ಅವಹೇಳನವಾಗಿದೆ. ನಾಡಿನ ಜನರಿಗೂ ಅಪಮಾನ ಮಾಡಿದಂತೆ. ಎರಡು ಭಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರ ಬಗ್ಗೆ ಆಡಿರುವ ಮಾತುಗಳು ಸಚಿವರಾದವರಿಗೆ ಶೋಭೆ ತರುವುದಿಲ್ಲ.

ಸಭ್ಯತೆಯ ಎಲ್ಲೆ ಮೀರಿ ಮಾತನಾಡುವ ಈ ವ್ಯಕ್ತಿ ಸಚಿವ ಸ್ಥಾನದಲ್ಲಿ ಮುಂದುವರೆಯಬಾರದು. ನಮ್ಮ ಜನಾಂಗದ ಸರ್ವೋಚ್ಚ ನಾಯಕರಾದ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರ ಕುಟುಂಬದ ಬಗ್ಗೆಯೂ ಲಘುವಾಗಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ.

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ದಿನಾಂಕ: 10/11/2024 ರಂದು ಜಮೀರ್ ಅವರು, ಪ್ರಚಾರ ಭಾಷಣ ಮಾಡುವಾಗ ಉರ್ದು ಭಾಷೆಯಲ್ಲಿ ಶ್ರೀ ಕುಮಾರಸ್ವಾಮಿ ಅವರ ಬಣ್ಣದ ಬಗ್ಗೆ ಮಾತನಾಡಿ ಜನಾಂಗೀಯ ನಿಂದನೆ ಮಾಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಆ ಶಬ್ದಗಳನ್ನು ಇಲ್ಲಿ ಉಲ್ಲೇಖಿಸುವುದಿಲ್ಲ.

ಜಮೀರ್ ಅವರು ರಾಜಕೀಯವಾಗಿ ಯಾರಿಗೂ ನೋವಾಗದಂತೆ ಟೀಕೆ ಟಿಪ್ಪಣಿ ಮಾಡಲು ಅಭ್ಯಂತರವಿಲ್ಲ. ಆದರೆ, ವ್ಯಕ್ತಿಗತ, ಸಮಾಜದ ಹಿತಕ್ಕೆ ಧಕ್ಕೆಯಾಗುವಂತೆ ಸಾರ್ವಜನಿಕ ಜೀವನದಲ್ಲಿ ಇದ್ದು, ಕೇಂದ್ರ ಸಚಿವರ ವರ್ಣದ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿರುವುದು ಸಚಿವರಾದವರ ಘನತೆಗೆ ಸರಿಯಾದುದಲ್ಲ.

ತಮ್ಮ ಹೇಳಿಕೆಯನ್ನು ಮಾಧ್ಯಮಗಳ ಮುಂದೆ ಮತ್ತೆ ಸಮರ್ಥನೆ ಮಾಡಿಕೊಂಡಿರುವುದನ್ನು ನೋಡಿದರೆ ಬಾಯಿ ತಪ್ಪಿನಿಂದ ಆಡಿರುವ ಮಾತಲ್ಲ. ಉದ್ದೇಶ ಪೂರ್ವಕವಾಗಿ ನೀಡಿರುವುದಾಗಿದೆ ಎಂದನಿಸುತ್ತದೆ.

ಹೀಗಾಗಿ ನಮ್ಮ ಜನಾಂಗದ ನಾಯಕರಾದ ಕುಮಾರಸ್ವಾಮಿ ಅವರ ಹಾಗೂ ದೇವೇಗೌಡರ ಕುಟುಂಬದ ಬಗ್ಗೆ ಅವಮಾನಕರ ಭಾಷೆ ಬಳಸಿರುವುದರ ಬಗ್ಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಅಲ್ಲದೆ, ಇನ್ನು ಮುಂದೆ ಮಾತನಾಡುವಾಗ ಸೌಜನ್ಯದ ಎಲ್ಲೆ ಮೀರದಂತೆ ಎಚ್ಚರ ವಹಿಸಬೇಕು ಹಾಗೂ ಜಮೀರ್ ಅವರು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕು ಎಂದು ಸಮಸ್ತ ಒಕ್ಕಲಿಗ ಜನಾಂಗದ ಪರವಾಗಿ ಎಂದು ಒತ್ತಾಯಿಸಿದ್ದಾರೆ.

‘ಅಯ್ಯಪ್ಪ ಸ್ವಾಮಿ ಭಕ್ತ’ರಿಗೆ ಗುಡ್ ನ್ಯೂಸ್: ಬೆಂಗಳೂರು- ನೀಲಕ್ಕಲ್ ನಡುವೆ ‘KSRTC ವೋಲ್ವೋ ಬಸ್’ ಸಂಚಾರ ಆರಂಭ

SHOCKING NEWS: ಭಾರತದಲ್ಲಿ ಮಾರಾಟವಾಗುವ ‘ಅರಿಶಿನ’ದಲ್ಲಿ ವಿಷಕಾರಿ ಮಟ್ಟದ ಸೀಸ ಪತ್ತೆ: ಅಧ್ಯಯನ | Turmeric

Share. Facebook Twitter LinkedIn WhatsApp Email

Related Posts

BREAKING : ಚಿಕ್ಕಮಗಳೂರಲ್ಲಿ ಘೋರ ದುರಂತ : ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ದುರ್ಮರಣ!

19/04/2026 1:45 PM1 Min Read

ರೈತರಿಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ.!

19/04/2026 1:40 PM2 Mins Read

ಕೇಂದ್ರದಿಂದ ತರಾತುರಿಯಲ್ಲಿ ಸಂವಿಧಾನ ತಿದ್ದುಪಡಿ; ಇಂಡಿಯಾ ಒಕ್ಕೂಟಕ್ಕೆ ಜಯ: ಡಿಸಿಎಂ ಡಿ.ಕೆ.ಶಿವಕುಮಾರ್

19/04/2026 1:38 PM2 Mins Read
Recent News

‘LPG ಸಿಲಿಂಡರ್’ ವಿತರಣೆ ಪಡೆಯುವ ಮುನ್ನ ಹುಷಾರ್! ಈ 4 ವಿಷಯಗಳನ್ನು ತಪ್ಪದೇ ಪರೀಕ್ಷಿಸಿ

19/04/2026 2:00 PM

ಪಿಪಿಎಫ್ ಹೂಡಿಕೆ ಮಂತ್ರ: ನಿವೃತ್ತಿಯ ನಂತರ ಮಾಸಿಕ ₹61,000 ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

19/04/2026 1:55 PM

ಕಡಿಮೆ ಬಜೆಟ್, ಹೆಚ್ಚಿನ ಲಾಭ: ಈ ಸಣ್ಣ ಉದ್ಯಮಗಳ ಮೂಲಕ ನೀವೂ ಆಗಬಹುದು ಬಾಸ್!

19/04/2026 1:49 PM

BREAKING : ಚಿಕ್ಕಮಗಳೂರಲ್ಲಿ ಘೋರ ದುರಂತ : ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ದುರ್ಮರಣ!

19/04/2026 1:45 PM
State News
KARNATAKA

BREAKING : ಚಿಕ್ಕಮಗಳೂರಲ್ಲಿ ಘೋರ ದುರಂತ : ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ದುರ್ಮರಣ!

By kannadanewsnow0519/04/2026 1:45 PM KARNATAKA 1 Min Read

ಚಿಕ್ಕಮಗಳೂರು : ಚಿಕ್ಕಮಂಗಳೂರಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಕೃಷಿಹೊಂಡದಲ್ಲಿ ಈಜಲು ಹೋಗಿ ನೀರಲ್ಲಿ ಮುಳುಗಿ ಇಬ್ಬರು ಕಾರ್ಮಿಕರ ಸಾವನ್ನಪ್ಪಿರುವ ಚಿಕ್ಕಮಗಳೂರು…

ರೈತರಿಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ.!

19/04/2026 1:40 PM

ಕೇಂದ್ರದಿಂದ ತರಾತುರಿಯಲ್ಲಿ ಸಂವಿಧಾನ ತಿದ್ದುಪಡಿ; ಇಂಡಿಯಾ ಒಕ್ಕೂಟಕ್ಕೆ ಜಯ: ಡಿಸಿಎಂ ಡಿ.ಕೆ.ಶಿವಕುಮಾರ್

19/04/2026 1:38 PM

BREAKING : ಮದ್ಯ ಪ್ರೀಯರಿಗೆ ಬಿಗ್ ಶಾಕ್ : ಹೊಸ ತೆರಿಗೆ ವ್ಯವಸ್ಥೆ ಜಾರಿಯಾದ್ರೆ ಹಲವು ಮದ್ಯಗಳ ಬೆಲೆ ಶೇ.20 ರಷ್ಟು ಹೆಚ್ಚಳ!

19/04/2026 1:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.