Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : `UPI’ಯಿಂದ ತಪ್ಪಾದ ಖಾತೆಗೆ ಹಣ ಕಳಿಸಿದ್ರೆ 3 ಗಂಟೆಯೊಳಗೆ ತಪ್ಪದೇ ಈ ಕೆಲಸ ಮಾಡಿ : ಮರುಪಾವತಿಯಾಗಲಿದೆ ಹಣ.!

09/02/2026 12:43 PM

₹100 ಬೆಲೆಯ ಗೋಧಿ ಕಳ್ಳತನ: 50 ವರ್ಷಗಳ ಬಳಿಕ ಕಳ್ಳ ಅರೆಸ್ಟ್!

09/02/2026 12:42 PM

BREAKING: ವಾಟ್ಸಾಪ್ ಗೌಪ್ಯತಾ ನೀತಿ ಬಿಕ್ಕಟ್ಟು: ಸುಪ್ರೀಂ ಕೋರ್ಟ್ ವಿಚಾರಣೆ ಫೆಬ್ರವರಿ 23ಕ್ಕೆ ಮುಂದೂಡಿಕೆ!

09/02/2026 12:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ 2,300 ರೂ, ಬಿಳಿಜೋಳ 3,371 ರೂ. ದರದಲ್ಲಿ ನೇರ ಖರೀದಿ!
KARNATAKA

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ 2,300 ರೂ, ಬಿಳಿಜೋಳ 3,371 ರೂ. ದರದಲ್ಲಿ ನೇರ ಖರೀದಿ!

By kannadanewsnow5709/11/2024 5:56 AM

2024-25 ನೇ ಸಾಲಿನಲ್ಲಿ ಮುಂಗಾರು ಋತುವಿನಲ್ಲಿ ಬೆಳೆದ ಎಫ್.ಎ.ಕ್ಯೂ. ಗುಣಮಟ್ಟದ ಭತ್ತ ಹಾಗೂ ಬಿಳಜೋಳ ಉತ್ಪನ್ನವನ್ನು ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ನೇರ ಖರೀದಿಸಲು ಸರ್ಕಾರದ ಆದೇಶದಂತೆ ಜಿಲ್ಲಾ ಟಾಸ್ಕಪೆÇೀರ್ಸ ಸಮಿತಿ ನಿರ್ಧರಿಸಿದೆ ಎಂದು ಜಿಲ್ಲಾ ಟಾಸ್ಕಪೆÇೀರ್ಸ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಋತುವಿನಲ್ಲಿ ಬೆಳೆದ ಭತ್ತಕ್ಕೆ ರೂ.2,300 ಹಾಗೂ ಗ್ರೇಡ್-ಎ ಭತ್ತಕ್ಕೆ ರೂ.2,320 ನಿಗದಿಪಡಿಸಿದೆ. ಮತ್ತು ಎಫ್.ಎ.ಕ್ಯೂ. ಗುಣಮಟ್ಟದ ಬೀಳಿಜೋಳ ಹೈಬ್ರಿಡ್‍ಗೆ ರೂ.3,371, ಬಿಳಿಜೋಳ ಮಾಲ್ದಂಡಿಗೆ ರೂ.3,421 ನಿಗದಿಪಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಭತ್ತ ಖರೀದಿ: ಧಾರವಾಡ ಮತ್ತು ಕಲಘಟಗಿ ಭಾಗದಲ್ಲಿ 10,904 ಹೇಕ್ವೆರ್ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದ್ದು 1,09,040 ಕ್ವಿಂಟಲ್ ಭತ್ತದ ಇಳುವರಿಯನ್ನು ನೀರಿಕ್ಷಿಸಲಾಗಿದೆ. ಭತ್ತ ಖರೀದಿಗಾಗಿ ಧಾರವಾಡ ಮತ್ತು ಕಲಘಟಗಿ ಎ.ಪಿ.ಎಮ್.ಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಖರೀದಿ ಕೇಂದ್ರ ಸ್ಥಾಪಿಸಲು ನಿರ್ಧರಿಸಿ, ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಶಾಖಾ ವ್ಯವಸ್ಥಾಪಕರಿಗೆ, ರೈತರ ನೋಂದಣಿಯನ್ನು ಮಾಡಿಕೊಳ್ಳಲು ಹಾಗೂ ಖರೀದಿ ಕೇಂದ್ರಗಳಲ್ಲಿ ಎಲ್ಲ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಭತ್ತ ಖರೀದಿ ಕೇಂದ್ರಗಳ ವಿವರ: ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಖರೀದಿ ಏಜೆನ್ಸಿಯಿಂದ ಧಾರವಾಡ ಎ.ಪಿ.ಎಮ್.ಸಿ ಹಾಗೂ ಕಲಘಟಗಿ ಎ.ಪಿ.ಎಮ್.ಸಿ (ದೂ. ಸಂ:0836-2004419) ಖರೀದಿ ಕೇಂದ್ರಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

ನೋಂದಣಿ ಹಾಗೂ ಖರೀದಿ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಭತ್ತದ ಉತ್ಪನ್ನವನ್ನು ಖರೀದಿಸಲು ರೈತರ ನೋಂದಣಿ ಹಾಗೂ ಉತ್ಪನ್ನ ಖರೀದಿಸಲು ನವೆಂಬರ 15, 2024 ರಿಂದ ಡಿಸೆಂಬರ 31, 2024 ರವರೆಗೆ ಅವಧಿಯನ್ನು ನಿಗದಿಗೊಳಿಸಲಾಗಿದೆ.

ಖರೀದಿಗೆ ಅವಶ್ಯವಿರುವ ತಂತ್ರಾಂಶವನ್ನು ಆಯುಕ್ತರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇವರು ಎನ್.ಐ.ಸಿ ಸಹಯೋಗದೊಂದಿಗೆ ಸಿದ್ದಪಡಿಸತಕ್ಕದ್ದು ಹಾಗೂ ಕೇಂದ್ರ ಸರ್ಕಾರದ ಪೆÇೀರ್ಟಲ್‍ನಲ್ಲಿ ಅಗತ್ಯ ದತ್ತಾಂಶವನ್ನು ದಾಖಲಿಸತಕ್ಕದ್ದು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಬೆಂಬಲ ಬೆಲೆ ಯೋಜನೆಯಡಿ ಬಿಳಿಜೋಳ ಉತ್ಪನ್ನ ಖರೀದಿ: 2024-25 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಮುಂಗಾರು ಋತುವಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಬೀಳಿಜೋಳ ಹೈಬ್ರಿಡ್ ಉತ್ಪನ್ನಕ್ಕೆ ರೂ.3,371 ಹಾಗೂ ಬಿಳಿಜೋಳ ಮಾಲ್ದಂಡಿ ಉತ್ಪನ್ನಕ್ಕೆ ರೂ.3,421 ದರದಲ್ಲಿ ರೈತರಿಂದ ನೇರವಾಗಿ ಖರೀದಿಸಲು ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಜಿಲ್ಲಾ ಟಾಸ್ಕಪೆÇೀರ್ಸ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ಬಿಳಿಜೋಳ ಖರೀದಿಗಾಗಿ ಧಾರವಾಡ ಮತ್ತು ಹುಬ್ಬಳ್ಳಿ ಎ.ಪಿ.ಎಮ್.ಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಖರೀದಿ ಕೇಂದ್ರ ಸ್ಥಾಪಿಸಲು ನಿರ್ಧರಿಸಿ, ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಶಾಖಾ ವ್ಯವಸ್ಥಾಪಕರಿಗೆ, ರೈತರ ನೋಂದಣಿಯನ್ನು ಡಿಸೆಂಬರ 1, 2024 ರಿಂದ ಹಾಗೂ ಜನೇವರಿ 1, 2025 ರಿಂದ ಮಾರ್ಚ 31, 2025 ರ ಅವಧಿಯವರೆಗೆ ಬಿಳಿಜೋಳ ಧಾನ್ಯಗಳ ಖರೀದಿ ಪ್ರಕ್ರಿಯೆ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಿಳಿಜೋಳ ಖರೀದಿ ಕೇಂದ್ರಗಳ ವಿವರ: ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಖರೀದಿ ಏಜೆನ್ಸಿಯಿಂದ ಧಾರವಾಡ ಎ.ಪಿ.ಎಮ್.ಸಿ ಹಾಗೂ ಹುಬ್ಬಳ್ಳಿ ಎ.ಪಿ.ಎಮ್.ಸಿ (ದೂ. ಸಂ:0836-2004419) ಖರೀದಿ ಕೇಂದ್ರಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

ಬಿಳಿಜೋಳ ಖರೀದಿಗೆ ಅವಶ್ಯವಿರುವ ತಂತ್ರಾಶವನ್ನು ಆಯುಕ್ತರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇವರು ಎನ್ ಐಸಿ ಸಹಯೋಗದೊಂದಿಗೆ ಸಿದ್ದಪಡಿಸತಕ್ಕದ್ದು ಹಾಗೂ ಕೇಂದ್ರ ಸರ್ಕಾರದ ಪೆÇೀರ್ಟಲ್‍ನಲ್ಲಿ ಅಗತ್ಯ ದತ್ತಾಂಶವನ್ನು ದಾಖಲಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಭತ್ತ ಮತ್ತು ಬಿಳಿಜೋಳ ಖರೀದಿಸಲು ಅನುಸರಿಸುವ ಕ್ರಮಗಳು: ರೈತರಿಂದ ಭತ್ತ ಮತ್ತು ಬಿಳಿಜೋಳ ಖರೀದಿಸಲು ತೆರೆಯಲಾಗಿರುವ ಪ್ರತಿ ಖರೀದಿ ಕೇಂದ್ರಕ್ಕೆ ಕೃಷಿ ಇಲಾಖೆಯಿಂದ ಗ್ರೇಡರಗಳನ್ನು ನೇಮಿಸಬೇಕು. ಸರ್ಕಾರದಿಂದ ನೇಮಿಸಲ್ಪಟ್ಟ ಸಂಗ್ರಹಣಾ ಏಜೇನ್ಸಿಗಳು ಕೇಂದ್ರ ಸರ್ಕಾರವು ನಿಗದಿಪಡಿಸಿದ ಮಾನದಂಡಗಳನ್ವಯ ಭತ್ತ ಮತ್ತು ಬಿಳಿಜೋಳ ಖರೀದಿ ಹಂತದಲ್ಲಿ ಎಫ್.ಎ.ಕ್ಯೂ ಗುಣಮಟ್ಟವನ್ನು ದೃಢಿಕರಿಸಲು ಕ್ರಮವಹಿಸಬೇಕು. ಖರೀದಿ ಏಜೇನ್ಸಿ ಅಧಿಕಾರಿಗಳು ತಮ್ಮ ಸಂಸ್ಥೆಗೆ ವಹಿಸಿರುವ ಜಿಲ್ಲೆಯಲ್ಲಿನ ಕಾರ್ಯಪ್ರಗತಿ ಬಗ್ಗೆ ಆಗ್ಗಿಂದಾಗೆ ಮೇಲುಸ್ತುವಾರಿ ತಪಾಸಣೆ ಕೈಗೊಳ್ಳಬೇಕು. ಭತ್ತವನ್ನು ಸರಬರಾಜು ಮಾಡಿದ ರೈತರಿಗೆ 15 ದಿನದೊಳಗೆ ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ನೇರ ನಗದು ವರ್ಗಾವಣೆ (ಆಃಖಿ) ಮುಖಾಂತರ ಮಾಡಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

Good news for farmers in the state: Under the minimum support price scheme paddy is priced at Rs 2300 and jowar at Rs 3371. Direct purchase at a price!
Share. Facebook Twitter LinkedIn WhatsApp Email

Related Posts

ALERT : `UPI’ಯಿಂದ ತಪ್ಪಾದ ಖಾತೆಗೆ ಹಣ ಕಳಿಸಿದ್ರೆ 3 ಗಂಟೆಯೊಳಗೆ ತಪ್ಪದೇ ಈ ಕೆಲಸ ಮಾಡಿ : ಮರುಪಾವತಿಯಾಗಲಿದೆ ಹಣ.!

09/02/2026 12:43 PM2 Mins Read

BREAKING : ಮಂಡ್ಯದಲ್ಲಿ ಘೋರ ಘಟನೆ : ಮದುವೆ ನಿಶ್ಚಯವಾಗಿದ್ದ ಮಗಳೊಂದಿಗೆ ತಾಯಿ ಆತ್ಮಹತ್ಯೆ.!

09/02/2026 12:24 PM1 Min Read

BIG NEWS : ಟ್ರಾವೆಲ್ಸ್ ನಷ್ಟ ಆಗಿದ್ದಕ್ಕೆ ಕಳ್ಳತನಕ್ಕೆ ಇಳಿದಿದ್ದ ಖದೀಮ ಅರೆಸ್ಟ್ : 1.84 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ!

09/02/2026 12:13 PM1 Min Read
Recent News

ALERT : `UPI’ಯಿಂದ ತಪ್ಪಾದ ಖಾತೆಗೆ ಹಣ ಕಳಿಸಿದ್ರೆ 3 ಗಂಟೆಯೊಳಗೆ ತಪ್ಪದೇ ಈ ಕೆಲಸ ಮಾಡಿ : ಮರುಪಾವತಿಯಾಗಲಿದೆ ಹಣ.!

09/02/2026 12:43 PM

₹100 ಬೆಲೆಯ ಗೋಧಿ ಕಳ್ಳತನ: 50 ವರ್ಷಗಳ ಬಳಿಕ ಕಳ್ಳ ಅರೆಸ್ಟ್!

09/02/2026 12:42 PM

BREAKING: ವಾಟ್ಸಾಪ್ ಗೌಪ್ಯತಾ ನೀತಿ ಬಿಕ್ಕಟ್ಟು: ಸುಪ್ರೀಂ ಕೋರ್ಟ್ ವಿಚಾರಣೆ ಫೆಬ್ರವರಿ 23ಕ್ಕೆ ಮುಂದೂಡಿಕೆ!

09/02/2026 12:31 PM

ಸಂಸತ್ ಬಜೆಟ್ ಅಧಿವೇಶನ 2026: ವಿಪಕ್ಷಗಳ ಭಾರಿ ಗದ್ದಲ, ಮಧ್ಯಾಹ್ನದವರೆಗೆ ಲೋಕಸಭೆ ಕಲಾಪ ಮುಂದೂಡಿಕೆ!

09/02/2026 12:27 PM
State News
KARNATAKA

ALERT : `UPI’ಯಿಂದ ತಪ್ಪಾದ ಖಾತೆಗೆ ಹಣ ಕಳಿಸಿದ್ರೆ 3 ಗಂಟೆಯೊಳಗೆ ತಪ್ಪದೇ ಈ ಕೆಲಸ ಮಾಡಿ : ಮರುಪಾವತಿಯಾಗಲಿದೆ ಹಣ.!

By kannadanewsnow5709/02/2026 12:43 PM KARNATAKA 2 Mins Read

ಬೆಂಗಳೂರು : UPI ದೈನಂದಿನ ಜೀವನವನ್ನು ನಂಬಲಾಗದಷ್ಟು ಸುಲಭಗೊಳಿಸಿದೆ. ಈಗ, ಹಣವನ್ನು ಕೊಂಡೊಯ್ಯುವ ಅಗತ್ಯವಿಲ್ಲ. ನಿಮ್ಮ ಫೋನ್ ತೆಗೆದುಕೊಳ್ಳಿ, ಅಪ್ಲಿಕೇಶನ್…

BREAKING : ಮಂಡ್ಯದಲ್ಲಿ ಘೋರ ಘಟನೆ : ಮದುವೆ ನಿಶ್ಚಯವಾಗಿದ್ದ ಮಗಳೊಂದಿಗೆ ತಾಯಿ ಆತ್ಮಹತ್ಯೆ.!

09/02/2026 12:24 PM

BIG NEWS : ಟ್ರಾವೆಲ್ಸ್ ನಷ್ಟ ಆಗಿದ್ದಕ್ಕೆ ಕಳ್ಳತನಕ್ಕೆ ಇಳಿದಿದ್ದ ಖದೀಮ ಅರೆಸ್ಟ್ : 1.84 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ!

09/02/2026 12:13 PM

ಗಮನಿಸಿ : `ಕರೆಂಟ್ ಬಿಲ್’ ನಲ್ಲಿ ಹೆಸರು ಬದಲಾಯಿಸುವುದು ಹೇಗೆ? ಬೇಕಾಗುವ ದಾಖಲೆಗಳೇನು? ಇಲ್ಲಿದೆ ಮಾಹಿತಿ

09/02/2026 11:59 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.