ಗುಜರಾತ್ : ಸಾಮಾನ್ಯವಾಗಿ ಮನುಷ್ಯರು ಅಥವಾ ಪ್ರಾಣಿಗಳು ಸತ್ತರೆ ಅವುಗಳ ಆಂಟಿ ಸಂಸ್ಕಾರ ಮಾಡುವುದನ್ನು ನಾವು ನೋಡಿದ್ದೇವೆ ಕೇಳಿದ್ದೇವೆ. ಆದರೆ ಗುಜರಾತ್ ನಲ್ಲಿ 4 ಲಕ್ಷ ಖರ್ಚು ಮಾಡಿ ಒಂದು ಕಾರನ್ನೇ ಸಂಪೂರ್ಣವಾಗಿ ಹೂವಿನಿಂದ ಅಲಂಕಾರ ಮಾಡಿ 15 ಅಡಿ ಭೂಮಿಯೊಳಗೆ ಅಂತ್ಯ ಸಂಸ್ಕಾರ ಮಾಡಿರುವ ಘಟನೆ ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಲಾಠಿ ತಾಲೂಕಿನ ಪಾದರಶಿಂಗ ಗ್ರಾಮದಲ್ಲಿ ನಡೆದಿದೆ.
ಹೌದು ಉದ್ಯಮಿ ಸಂಜಯ ಪೋಲಾರ್ ಮತ್ತು ಕುಟುಂಬ ತಮ್ಮ ಬದುಕಿನಲ್ಲಿ ಅದೃಷ್ಟ ತಂದು ಕೊಟ್ಟ ಕಾರಿಗೆ ಅದ್ಧೂರಿ ಸಮಾಧಿ ಕಾರ್ಯಕ್ರಮವನ್ನು ನಡೆಸಿರುವ ವಿರುದ್ಧ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗುತ್ತಿದೆ.ವಿಡಿಯೋದಲ್ಲಿ 12 ವರ್ಷ ಹಳೆಯದಾದ ವ್ಯಾಗನ್ ಆರ್ ಕಾರನ್ನು ಜಮೀನಿನಲ್ಲಿ 15 ಅಡಿ ಆಳದ ಹೊಂಡವನ್ನು ಅಗೆದು ಧಾರ್ಮಿಕ ಕ್ರಿಯೆಗಳನ್ನು ನಡೆಸುವ ಸಮಾಧಿ ಮಾಡಿರುವುದನ್ನು ಕಾಣಬಹುದಾಗಿದೆ.
ವಾಹನಕ್ಕೆ ಹಸುರು ಬಟ್ಟೆಯನ್ನು ಹೊದಿಸಿ, ಪುರೋಹಿತರು ಮಂತ್ರ ಪಠಿಸುತ್ತಿದ್ದಂತೆ ಕುಟುಂಬಸ್ಥರು ಪೂಜೆ ಸಲ್ಲಿಸಿ ಗುಲಾಬಿ ದಳಗಳನ್ನು ಸುರಿಸುವುದರ ಮೂಲಕ ಕಾರನ್ನು ಸಮಾಧಿ ಹೊಂಡಕ್ಕೆ ಇಳಿಸಲಾಗಿದೆ.ಜೆಸಿಬಿ ಬಳಸಿ ಮಣ್ಣು ಸುರಿದು ಕಾರನ್ನು ಹೂಳಲಾಗಿದೆ.ಕಾರ್ಯಕ್ರಮದಲ್ಲಿ ಧರ್ಮಗುರುಗಳು, ಆಧ್ಯಾತ್ಮಿಕ ಮುಖಂಡರು ಸೇರಿದಂತೆ ಸುಮಾರು 1,500 ಜನರು ಭಾಗವಹಿಸಿದ್ದರು ಎನ್ನುವುದು ಮತ್ತೊಂದು ವಿಶೇಷತೆ
12 ವರ್ಷಗಳ ಹಿಂದೆ ಖರೀದಿಸಿದ್ದೆ. ಅದು ಕುಟುಂಬಕ್ಕೆ ಸಮೃದ್ಧಿಯನ್ನು ತಂದಿದೆ. ವ್ಯಾಪಾರದಲ್ಲಿ ಯಶಸ್ಸನ್ನು ಕಂಡಿದ್ದಲ್ಲದೆ, ನನ್ನ ಕುಟುಂಬವೂ ಗೌರವವನ್ನು ಗಳಿಸಿತು. ವಾಹನ ನನ್ನ ಕುಟುಂಬ ಮತ್ತು ನನಗೆ ಅದೃಷ್ಟವನ್ನು ಸಾಬೀತುಪಡಿಸಿತು. ಹಾಗಾಗಿ ಅದನ್ನು ಮಾರುವ ಬದಲು ನನ್ನ ಜಮೀನಿನಲ್ಲಿ ಸಮಾಧಿಯನ್ನು ಮಾಡಿದ್ದೇನೆ. ಸಮಾರಂಭಕ್ಕೆ 4 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ ಎಂದು ಸಂಜಯ್ ಇದೆ ವೇಳೆ ತಿಳಿಸಿದರು.
વ્હાલસોઈ નસીબદાર કારની સમાધિ !!!
અમરેલીમાં પરિવાર માટે લકી કારને વેચવાને બદલે ઘામધૂમથી જમણવાર યોજી સમાધિ અપાઈ, કારના સમાધિ સ્થળે વૃક્ષારોપણ કરાશે #Gujarat #Amreli pic.twitter.com/1c4hiogs7n
— Kamit Solanki (@KamitSolanki) November 8, 2024