ಬೆಂಗಳೂರು : ಸಾಮಾಜಿಕ ಜಾಲತಾಣವನ್ನು ಕೇವಲ ನಮಗೆ ಮನೋರಂಜನೆಗಾಗಿ ಹಾಗೂ ಒಳ್ಳೆಯ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು. ಆದರೆ ಇತ್ತೀಚಿಗೆ ಅದರ ತದ್ವಿರುದ್ಧವಾಗಿ ಯಾವ ಯಾವುದಕ್ಕೂ ಅನೈತಿಕ ಚಟುವಟಿಕೆಗಳಿಗೆ ಈ ಒಂದು ಸಾಮಾಜಿಕ ಜಾಲತಾಣ ದುರ್ಬಳಕೆ ಆಗುತ್ತಿದೆ. ಇದೀಗ ಬೆಂಗಳೂರಿನಲ್ಲಿ ವಿವಾಹಿತ ಮಹಿಳೆಯೊಬ್ಬರು ಇನ್ಸ್ಟಾಗ್ರಾಮ್ ಫ್ರೆಂಡ್ ಒಬ್ಬನನ್ನು ನಂಬಿ ನಗ್ನ ಚಿತ್ರ ಕಳುಹಿಸಿ ಚಿನ್ನ ಹಾಗೂ ನಗದು ಹಣವನ್ನು ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು ಬೆಂಗಳೂರಿನಲ್ಲಿ ವಿವಾಹಿತ ಮಹಿಳೆಗೆ ಕಳೆದ ಮೂರು ವರ್ಷಗಳ ಹಿಂದೆ ಅಭಿಷೇಕ್ ನಾಯಕ್ ಎನ್ನುವ ಯುವಕನ ಪರಿಚಯವಾಗಿದೆ ಈ ವೇಳೆ ಪರಿಚಯ ಪರಸ್ಪರ ಸ್ನೇಹಕ್ಕೆ ತಿರುಗಿ ತುಂಬಾ ಆತ್ಮೀಯವಾಗಿ ತಮ್ಮ ತಮ್ಮ ನಂಬರ್ ಗಳನ್ನು ಬದಲಾಯಿಸಿಕೊಂಡು ಕರೆ ಮಾಡುವುದು ಹಾಗೂ ವೀಡಿಯೋ ಕಾಲ್ ಮಾಡುವುದು ಮಾಡಿದ್ದಾರೆ ಈ ಸಂದರ್ಭದಲ್ಲಿ ಯುವಕ ಮಹಿಳೆಯ ಹಲವು ವಿಡಿಯೋಗಳನ್ನು ಇಟ್ಟುಕೊಂಡಿದ್ದ.
ಈ ವೇಳೆ ಮಹಿಳೆಯ ವೈವಾಹಿಕ ಜೀವನದ ಹಾಗೂ ಪರಿಸ್ಥಿತಿ ಲಾಭವನ್ನು ಪಡೆದುಕೊಂಡು ಸಹಾಯ ಮಾಡುವ ನೆಪದಲ್ಲಿ, ಆಕೆ ಜತೆಗೆ ಪದೇಪದೆ ವಿಡಿಯೊ ಕಾಲ್, ವಾಯ್ಸ್ ಮೆಸೇಜ್ ಮಾಡುತ್ತಿದ್ದ. ಹೀಗಾಗಿ ಯುವಕನನ್ನು ನಂಬಿದ ಮಹಿಳೆ, ನಗ್ನವಾಗಿ ವಿಡಿಯೊ ಕಾಲ್‌ಗಳನ್ನು ಮಾಡಿದ್ದಾರೆ. ನಗ್ನ ಫೋಟೋಗಳನ್ನೂ ಕಳುಹಿಸಿದ್ದಾರೆ. ಬಳಿಕ ಕೆಲವು ವರ್ಷಗಳ ನಂತರ ಇಬ್ಬರ ಮಧ್ಯೆ ಜಗಳ ಉಂಟಾಗಿದೆ.
ಈ ವೇಳೆ ಮಹಿಳೆಗೆ ವಿಡಿಯೋ ಕಾಲ್ ಮಾಡಿದ ಸಂದರ್ಭದಲ್ಲಿ ಆಕೆಕಯೊಟ್ಟಿಗೆ ಮಾತನಾಡಿದ ಹಲವು ವಿಡಿಯೋಗಳನ್ನು ಹಾಗೂ ನಗ್ನ ಚಿತ್ರಗಳನ್ನು ಇಟ್ಟುಕೊಂಡು ಮಹಿಳೆಗೆ ಬ್ಲಾಕ್ ಮೇಲ್ ಮಾಡಿದ್ದಾನೆ. ಬಳಿಕ ಆಕೆಯಿಂದ ತನಗೆ ಬೇಕಾದಾಗ ಚಿನ್ನಾಭರಣ ಹಾಗೂ ಅನೇಕ ಬಾರಿ ಹಣವನ್ನು ಪೀಕಿದ್ದಾನೆ. ನಂತರ ಅಭಿಷೇಕ್ ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ಮಹಿಳೆ ಆಗಲ್ಲ ಎದ್ದಿದ್ದಾಳೆ. ಆಗ ಕೋಪಗೊಂಡ ಅಭಿಷೇಕ್ ಮಹಿಳೆಯ ಮನೆಯವರಿಗೆ ವಿಡಿಯೋ ಕಾಲ್ ಮಾಡಿರುವ ವಿಡಿಯೋಗಳು ಹಾಗೂ ನಗ್ನ ಚಿತ್ರಗಳೆಲ್ಲ ಕಳುಹಿಸಿದ್ದಾನೆ.
ಪತ್ನಿಯ ಅಕ್ರಮ ಸಂಬಂಧ ಕಂಡು ಪತಿ ಸಿಟ್ಟಾಗಿ, ಆಕೆ ಹಾಗೂ ಮಗುವನ್ನು ಮನೆಯಿಂದ ಹೊರ ಹಾಕಿದ್ದಾನೆ. ಹೀಗಾಗಿ ಆಕೆ ತಂಗಿ ಮನೆಗೆ ಹೋಗಿದ್ದಾರೆ. ಇಷ್ಟಾದರೂ ಯುವಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಮಹಿಳೆಯ ದೂರಿನ ಅನ್ವಯ ಯುವಕನನ್ನು ಬಂಧಿಸಿದ್ದಾರೆ. ಮಹಿಳೆಯು 2012ರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಒಬ್ಬರನ್ನು ಮದುವೆಯಾಗಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ದಂಪತಿಗಳ ಮಧ್ಯ ವೈಮನಸ್ಸು ಇತ್ತು. ಈಗ ಅವರಿಗೆ 11 ವರ್ಷದ ಮಗಳಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.