ರಾಮನಗರ : ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿಕೆಯ ವಿಚಾರವಾಗಿ ಸಚಿವ ದಿನೇಶ್ ಗುಂಡೂರಾವ್, ರಾಜ್ಯದ ಬಹುತೇಕ ಉದ್ಯಮಗಳು ಗುಜರಾತ್ ರಾಜ್ಯಕ್ಕೆ ಹೋಗುತ್ತಿವೆ. ಹಲವು ಉದ್ಯಮಗಳು ನಮ್ಮ ಕರ್ನಾಟಕಕ್ಕೆ ಬರಲು ತಯಾರಿದ್ದವು. ಆದರೆ ಕೇಂದ್ರ ಸರ್ಕಾರ ಅಡ್ಡ ಬರುತಿದೆ. ಗುಜರಾತ್ ಗೆ ಹೋಗಲು ಒತ್ತಡ ಹಾಕುತ್ತಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಅದನ್ನು ತಡೆಯಲಿ. ಚುನಾವಣೆ ಗೆಲ್ಲುವುದಕ್ಕೆ ಮಾತ್ರ ಕಣ್ಣೀರು ಹಾಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಉಪಚುನಾವಣೆಯಲ್ಲಿ ಎಚ್ ಡಿ ದೇವೇಗೌಡ ಅಗ್ರಸಿವ್ ಆಗಿ ಮಾತನಾಡುತ್ತಿದ್ದಾರೆ. ಮುತ್ಸದ್ದಿ ವ್ಯಕ್ತಿಗಳು ಹೀಗೆ ಮಾತನಾಡಬಾರದು.ಎನ್ ಡಿ ಎ ನಾಯಕರಿಗೆ ಈಗ ಮೇಕೆದಾಟು ವಿಚಾರ ನೆನಪಾಗಿದೆ.ಪ್ರಧಾನಿ ಮೋದಿ ಬಳಿ ನೀವು ಹೋಗುವಾಗ ನಮ್ಮನ್ನು ಕರೆಯಬೇಕಿತ್ತು. ಅದನ್ನು ಬಿಟ್ಟು ಈಗ ದೇವೇಗೌಡರು ಉಪಚುನಾವಣೆಗೆ ಬಂದಿದ್ದಾರೆ.ಮಾಜಿ ಪ್ರಧಾನ ಮಂತ್ರಿ ದೇವೇಗೌಡರಿಗೆ ಈ ಗತಿ ಬರಬಾರದಿತ್ತು ಎಂದರು.
ಇವರದ್ದು ಸ್ವಾರ್ಥದ ಕಣ್ಣೀರು ಅನ್ಯಾಯ ಮಾಡಿದ್ದಾರೆ ಎಂದು ಹೇಳುತ್ತಾರೆ. ಇವರಿಗೆ ಯಾರು ಅನ್ಯಾಯ ಮಾಡಿದ್ದಾರೆ. ಇವರದ್ದು ಬರೀ ಡ್ರಾಮಾ. ಚನ್ನಪಟ್ಟಣ ಕ್ಷೇತ್ರದಲ್ಲಿ ಕೆರೆಗಳನ್ನು ಯಾರು ತುಂಬಿಸಿದ್ದು ಅಂತ ಕೇಳಿ. ದಾರಿಯಲ್ಲಿ ಹೋಗುವವನು ಕೂಡ ಯೋಗೇಶ್ವರ್ ಅಂತ ಹೇಳುತ್ತಾನೆ.ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದ ಮೈಲನಾಯಕನ ಹೊಸಹಳ್ಳಿಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದರು