ಬೆಂಗಳೂರು : ಅಬಕಾರಿ ಸಚಿವ ಆರ್.ಬಿ ತಿಮ್ಮಪುರ ವಿರುದ್ಧ ಭ್ರಷ್ಟಾಚಾರದ ವಿಚಾರವಾಗಿ ಮದ್ಯ ಮಾರಾಟಗಾರರು ಆರೋಪ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಮಧ್ಯ ಮಾರಾಟಗಾರರ ಜೊತೆ ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್ ಸಭೆ ನಡೆಸಿದರು.
ಸಭೆಯ ಬಳಿಕ ಮದ್ಯಮಾರಾಟಗಾರರ ಅಧಕ್ಷ ಗುರುಸ್ವಾಮಿ ಹೇಳಿಕೆ ನೀಡಿದ್ದು, ನಾವು ಚರ್ಚೆ ಬಳಿಕ ಸಭೆ ಮಾಡಿದ್ದೇವೆ. ಚೀಫ್ ಸೆಕ್ರೆಟರಿ ಜೊತೆಗೆ ಸಭೆ ಮಾಡ್ತೇವೆ ಅಂದಿದ್ದಾರೆ. ಎಲ್ಲ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಭ್ರಷ್ಟಾಚಾರ ವಿಚಾರದ ಬಗ್ಗೆ ಚರ್ಚೆ ಆಗಿದೆ. ಸಿಎಂ ಜೊತೆಗೆ ಸಭೆ ಕೂಡ ಮಾಡುತ್ತೇವೆ.ಕೆಲವು ಬದಲಾವಣೆ ವಿಚಾರವಾಗಿಯೂ ಚರ್ಚೆ ಆಗಿದೆ. ನವೆಂಬರ್ 20ರಂದು ಮದ್ಯ ಮಾರಾಟ ಬಂದ್ ನಡೆಯುತ್ತದೆ. ಅದರ ಬಗ್ಗೆ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮದ್ಯ ಮಾರಾಟಗಾರರಲ್ಲೇ ‘ಭಿನ್ನರಾಗ’
ನವೆಂಬರ್ 20 ರಂದು ಬಂದ್ ಗೆ ಕೆಲವರ ವಿರೋಧ ವ್ಯಕ್ತವಾಗಿದೆ. ಮದ್ಯ ಮಾರಾಟಗಾರರಲ್ಲೇ ತೀರ್ವ ಇದೀಗ ವಿರೋಧದ ಕೂಗು ಕೇಳಿಬಂದಿದೆ. ಈ ಕುರಿತು ಪ್ರಧಾನ ಕಾರ್ಯದರ್ಶಿ ಹೊನ್ನಗಿರಿ ಗೌಡ ಹೇಳಿಕೆ ನೀಡಿದ್ದು, ನಾವು ಯಾವುದೇ ಕಾರಣಕ್ಕೆ ಬಂದ್ ಮಾಡಲ್ಲ. ಮೈಸೂರು ಭಾಗದ ಮಾರಾಟಗಾರರ ವಿರೋಧ ವ್ಯಕ್ತವಾಗಿದ್ದು, ಸಭೆಯಲ್ಲೂ ತೀರ್ವ ವಿರೋಧಿಸಿದ್ದಾರೆ. ಮಾರಾಟಕ್ಕೆ ಉತ್ತಮ ವಾತಾವರಣ ನಿರ್ಮಿಸಿಕೊಡಿ. ಒಳ್ಳೆಯ ಅಧಿಕಾರಿಗಳನ್ನ ಹಾಕಿ ಅದನ್ನ ಬಿಟ್ಟು ಬಂದ್ ಮಾಡೋಕೆ ಆಗಲ್ಲ ಎಂದು ಕೆಲವು ಮಾರಾಟಗಾರರು ಅಭಿಪ್ರಾಯ ತಿಳಿಸಿದ್ದಾರೆ.
ಗುರುಸ್ವಾಮಿ ಏಕಾಏಕಿ ನಿರ್ಧಾರ ಮಾಡಿದ್ಧಾರೆ ನ.20 ರಂದು ಬಂದ್ ಮಾಡ್ತೇವೆ ಅಂದಿದ್ದಾರೆ.ಚರ್ಚೆ ನಡೆಸದೆ ಮಾಧ್ಯಮ ಹೇಳಿಕೆ ನೀಡಿದ್ದಾರೆ. ನಮ್ಮ ಜೊತೆ ಯಾವುದೇ ಸಭೆ ನಡೆಸಿಲ್ಲ.ಜಿಲ್ಲಾ ಸಂಘಗಗಳನ್ನ ವಿಶ್ವಾಸಕ್ಕೆ ಪಡೆದಿಲ್ಲ. ಮದ್ಯದಂಗಡಿಗಳಬಂದ್‌ಗೆ ನಾವು ಸಹಕಾರ ನೀಡಲ್ಲ. ಎಂದು ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಹೊನ್ನಗಿರಿಗೌಡ ಹೇಳಿಕೆ ನೀಡಿದರು.