ಗದಗ : ತಂದೆಯೊಬ್ಬ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೇಸತ್ತು ತನ್ನ ಮೂರು ಮಕ್ಕಳೊಂಡಿಗೆ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿ ನಡೆದಿತ್ತು. ಈ ಒಂದು ಘಟನೆಗೆ ಸಂಬಂಧಿಸಿದಂತೆ ಇದೀಗ ಅಗ್ನಿಶಾಮಕದಳ ಸಿಬ್ಬಂದಿಗಳು ಓರ್ವ ಗಂಡು ಮಗುವಿನ ಶವವನ್ನು ಹೊರ ತೆಗೆದಿದ್ದಾರೆ.
ಹೌದು ಮುಂಡರಗಿ ತಾಲೂಕಿನ ಮಕ್ತುಪೂರ ಗ್ರಾಮದ ನಿವಾಸಿ ಮಂಜುನಾಥ ಅರಕೇರಿ ಮೊದಲು ಮೂವರು ಮಕ್ಕಳನ್ನು ನದಿಗೆ ಎಸೆದು ಬಳಿಕ ತಾನೂ ಸಹ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೇದಾಂತ (3) ಪವನ (4) ಹಾಗೂ ಧನ್ಯಾ (6) ನದಿ ಪಾಲಾದ ಮಕ್ಕಳು ಎಂದು ಗುರುತಿಸಲಾಗಿದೆ. ಇದೀಗ ಓರ್ವ ಗಂಡು ಮಗುವಿನ ಶವ ಪತ್ತೆ ಹಚ್ಚಿ ಸಿಬ್ಬಂದಿ ಹೊರಗಡೆ ತೆಗೆದಿದ್ದಾರೆ. ಮಗುವಿನ ಶವ ಪತ್ತೆ ಹಚ್ಚಿರುವ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಮೀನುಗಾರರು, ಮತ್ತೆ ಇಬ್ಬರು ಮಕ್ಕಳು ಹಾಗೂ ತಂದೆಯ ಶವಕ್ಕಾಗಿ ಶೋಧ ಕಾರ್ಯ ಇದೀಗ ಮುಂದುವರೆದಿದೆ.
ನಿನ್ನೆ ಮೂವರು ಮಕ್ಕಳ ಜೊತೆಗೆ ತಂದೆ ಮಂಜುನಾಥ ಅರಕೇರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವೇದಾಂತ್ ಪವನ್ ಹಾಗೂ ಧನ್ಯ ಎಂಬ ಮಕ್ಕಳ ಜೊತೆಗೆ ಮಂಜುನಾಥ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೋರ್ಲಹಳ್ಳಿ ಬಳಿ ನದಿಗೆ ಹಾರಿದ್ದರು. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ನಡೆದಿತ್ತು.