ಬೆಂಗಳೂರು : ಇತ್ತೀಚಿಗೆ ಜನರು ಕಷ್ಟಪಟ್ಟು ದುಡಿಯದೆ, ಅಡ್ಡ ದಾರಿಯಲ್ಲಿ ಬಹಳ ಬೇಗ ಶ್ರೀಮಂತರಾಗಲು ಬಯಸುತ್ತಿದ್ದಾರೆ. ಹಾಗಾಗಿ ಬಹಳಷ್ಟು ಜನರು ಆನ್ಲೈನ್ ಗೇಮ್ ಗೀಳಿಗೆ ಒಳಗಾಗಿ ಬೀದಿಗೆ ಬಂದದ್ದು ಅಲ್ಲದೆ, ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದೀಗ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರು ಆನ್ಲೈನ್ ರಮ್ಮಿ ಗೇಮ್ ಆಡಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅಡೆಪೇಟೆಯಲ್ಲಿ ಲಾರಿ ಮಾಲೀಕ ಚಂದ್ರಶೇಖರ್ (45) ನೇಣಿಗೆ ಶರಣಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅಡೆಪೇಟೆಯಲ್ಲಿ ಈ ಘಟನೆ ನಡೆದಿದೆ.ಮನೆಯಲ್ಲಿ ಪತ್ನಿ ಸೀರೆ ಬಳಸಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಚಂದ್ರಶೇಖರ್ ಅವರು ಆನ್ಲೈನ್ ಗೇಮ್ ಅಲ್ಲಿ 5 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದರು.ಘಟನೆ ಕುರಿತಂತೆ ಇದೀಗ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.