ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಗೆ ಬೆನ್ನು ನೋವಿನ ಸಮಸ್ಯೆ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಕಳೆದ 6 ದಿನಗಳ ಹಿಂದೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿಂದೆ ಅವರಿಗೆ ಫಿಸಿಯೋಥೆರಫಿ ಮಾಡಬೇಕು ಎಂದು ವೈದ್ಯರು ತಿಳಿಸಿದ್ದರು. ಇದೀಗ ಈ ಒಂದು ವಿಷಯದಲ್ಲಿ ಬದಲಾಗಿದ್ದು, ಅವರಿಗೆ ಫಿಜಿಯೋಥೆರಫಿ ಬದಲು ಸರ್ಜರಿಯೆ ಬಹುತೇಕ ಫಿಕ್ಸ್ ಆಗಿದೆ
ಹೌದು ಈಗಾಗಲೇ ದರ್ಶನ್ ಗೆ ಹಲವು ರೀತಿಯ ತಪಾಸಣೆ ಮಾಡಲಾಗಿದೆ. ಎಂಆರ್ಐ ಸ್ಕ್ಯಾನಿಂಗ್, ಸಿಟಿ ಸ್ಕ್ಯಾನಿಂಗ್ ಬ್ಲಡ್ ಟೆಸ್ಟ್ ಸೇರಿದಂತೆ ಅನೇಕ ಪರೀಕ್ಷೆಗಳಿಗೆ ನಟ ದರ್ಶನ್ ಒಳಪಟ್ಟಿದ್ದಾರೆ. ಪರೀಕ್ಷೆಯ ವೇಳೆ ದರ್ಶನ್ ಗೆ ಭಾರಿ ಸಮಸ್ಯೆ ಪತ್ತೆಯಾಗಿತ್ತು. ಆರೋಗ್ಯದ ದೃಷ್ಟಿಯಿಂದ ಇದೀಗ ಸರ್ಜರಿ ಮಾಡಲು ನಿರ್ಧಾರ ಮಾಡಲಾಗಿದೆ.
ನಟ ದರ್ಶನ್ ಗೆ ಸರ್ಜಿರಿ ಬಹುತೇಕ ಫಿಕ್ಸ್ ಆದಂತೆ ಆಗಿದೆ. ಆಸ್ಪತ್ರೆಯಲ್ಲಿ ದರ್ಶನ್ ಚಿಕಿತ್ಸೆ ಪ್ಲ್ಯಾನ್ ಚೇಂಜ್ ಆಗಿದೆ. ಫಿಜಿಯೋಥೆರಪಿ ಬದಲಿಗೆ ಸರ್ಜರಿಗೆ ದರ್ಶನ್ ಮನಸ್ಸು ಮಾಡಿದ್ದಾರೆ. ಎರಡು ದಿನದಲ್ಲಿ ದರ್ಶನಗೆ ಸರ್ಜರಿ ಮಾಡಲಿದ್ದಾರೆ. ಬೆಂಗಳೂರಿನ ಕೆಂಗೇರಿ ಬಳಿ ಇರುವ ಬಿಜಿಎಸ್ ಆಸ್ಪತ್ರೆಯಲ್ಲಿ ಕಳೆದ 6 ದಿನಗಳಿಂದ ನಟ ದರ್ಶನ್ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ. ಇದೀಗ ನಟ ದರ್ಶನಿಗೆ ಫಿಸಿಯೋಥೆರಪಿ ಬದಲಾಗಿ ಸರ್ಜರಿಗೆ ಫಿಕ್ಸ್ ಆಗಿದೆ.