ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ BMRCL ಪ್ರಯಾಣದ ದರ ಹೆಚ್ಚಿಸುವ ಕುರಿತಂತೆ ಸಾರ್ವಜನಿಕರಿಂದ ಸಲಹೆ ಪಡೆಯಲು ಸಮಿತಿ ರಚಿಸಿತ್ತು. ಇದೀಗ ಬಿಎಂಆರ್‌ಸಿಎಲ್ ಮುಂದಿನ ವರ್ಷ ಜನವರಿ ತಿಂಗಳನಿಂದ ಮೆಟ್ರೋ ಪ್ರಯಾಣದ ಟಿಕೆಟ್ ದರದಲ್ಲಿ ಶೇ.20ರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೌದು ‘ದಿ ಫೇರ್ ಪಿಕ್ಸೇಷನ್ ಕಮಿಟಿ’ (ಎಫ್‌ಎಫ್‌ಸಿ) ಎಂಬ ಸಮಿತಿ ರಚಿಸಲಾಗಿತ್ತು. ಇದೊಂದು ಸ್ವತಂತ್ರ ಕಮಿಟಿಯಾಗಿದೆ. ಪ್ರಯಾಣಿಕರ ಸಲಹೆ ಪಡೆದು ಟಿಕೆಟ್ ದರ ಏರಿಕೆಗೆ ಕಮಿಟಿ ಮುಂದಾಗಿದೆ. ಅಕ್ಟೋಬರ್ 21ರೊಳಗೆ ಪ್ರಯಾಣಿಕರು ತಮ್ಮ ಅಭಿಪ್ರಾಯ ತಿಳಿಸಲು ಕಾಲಾವಕಾಶ ನೀಡಲಾಗಿತ್ತು.
ಬೆಳಕಿನ ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ ತಟ್ಟಲಿದೆ. ದರ ಪರಿಷ್ಕರಣೆ ಸಂಬಂಧ ಈಗಾಗಲೇ ಸಾರ್ವಜನಿಕರಿಂದ ಸಲಹೆ ಸ್ವೀಕಾರ ಮಾಡಲಾಗಿದೆ.ಈಗಾಗಲೇ ಹಲವು ಬಾರಿ ಮೆಟ್ರೋ ದರ ಏರಿಕೆ ಬಗ್ಗೆ ಬಿಎಂಆರ್ಸಿಎಲ್ ಪ್ರಸ್ತಾಪ ಮಾಡಿತ್ತು. ಆದರೆ ಕಳೆದ ಹಲವು ವರ್ಷಗಳಿಂದ ದರ ಏರಿಕೆಯನ್ನು ಮಾಡಿರಲಿಲ್ಲ. ಸದ್ಯ 20% ಟಿಕೆಟ್ ದರ ಏರಿಕೆ ಸಾಧ್ಯತೆ ಇದೆ.
ಕಳೆದ ಬಾರಿ 2017 ರಲ್ಲಿ ಬಿಎಂಆರ್ಸಿಲ್ ಮೆಟ್ರೋ ಟಿಕೆಟ್ ದರವನ್ನು ಪರಿಷ್ಕರಿಸಿತ್ತು. 2017ರ ಬಳಿಕ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ನೆಟ್‌ವರ್ಕ್ ವೇಗವಾಗಿ ಹೆಚ್ಚುತ್ತಿದೆ, ಅದರಲ್ಲೂ ಪರ್ಪಲ್ ಲೈನ್ ಐಟಿ ಉದ್ಯೋಗಿಗಳ ಜೀವನಾಡಿಯಾಗಿದ್ದು, ಟ್ರಾಫಿಕ್ ಪೀಕ್ ಅವರ್ ಗಳಲ್ಲಿ ಜನದಟ್ಟಣೆಯನ್ನು ಎದುರಿಸುತ್ತಿದೆ. ಪೀಕ್ ಅವರ್‌ನಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ರೈಲುಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂಬ ಬೇಡಿಕೆ ಇದೆ.