ಬೆಳಗಾವಿ : ವರ್ಗಾವಣೆಯಾಗಿದ್ದಕ್ಕೆ ಎಸ್ ಡಿ ಎ ನೌಕರರೊಬ್ಬರು ಬೆಳಗಾವಿಯ ತಹಶೀಲ್ದಾರ್ ಕಚೇರಿ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಎಸ್ಡಿಎ ನೌಕರರನ್ನು ರುದ್ರಣ್ಣ ಯಡವನ್ನವರ (32) ಎಂದು ತಿಳಿದುಬಂದಿದೆ. ಕಳೆದ 12 ವರ್ಷಗಳಿಂದ ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್ ಡಿ ಎ ನೌಕರರಾಗಿ ರುದ್ರಣ್ಣ ಕಾರ್ಯನಿರ್ವಹಿಸುತ್ತಿದ್ದರು. ನಿನ್ನೆಷ್ಟೇ ಅವರಿಗೆ ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲೂಕು ತಹಶೀಲಾರ್ ಕಚೇರಿಗೆ ವರ್ಗಾವಣೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಬೆಳಗಾವಿಯ ತಹಶೀಲ್ದಾರ್ ಕೊಠಡಿಯಲ್ಲಿ ಎಸ್ಡಿಎ ಸಿಬ್ಬಂದಿ ಆತ್ಮಹತ್ಯೆ ರುದ್ರಣ್ಣ ಯಡವನ್ನವರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಳಗಾವಿಯ ತಹಶೀಲ್ದಾರ್ ಆಗಿರುವಂತಹ ಬಸವರಾಜ್ ನಾಗರಾಳ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ.
ನಿನಯಷ್ಟೇ ಸೌದತ್ತಿ ತಹಸಿಲ್ದಾರ್ ಕಚೇರಿಗೆ ವರ್ಗಾವಣೆಯಾಗಿತ್ತು. ನಿನ್ನೆ ವರ್ಗಾವಣೆಗೊಂಡಿದ್ದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಂಕಿಸಲಾಗಿದೆ. ಆತ್ಮಹತ್ಯೆ ಕುಡಿದಂತೆ ರುದ್ರಣ್ಣ ಕುಟುಂಬಸ್ಥರಿಗೆ ಈಗಾಗಲೇ ತಿಳಿಸಲಾಗಿದ್ದು. ಕುಟುಂಬಸ್ಥರಿಂದ ರುದ್ರಣ್ಣ ಕುರಿತು ಪೊಲೀಸರು ಇನ್ನಷ್ಟು ಮಾಹಿತಿ ಕಲೆಹಾಕಲಿದ್ದಾರೆ.