ಮೈಸೂರು : ಮೈಸೂರಲ್ಲಿ ನಿನ್ನೆ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತೆ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರಿನ ವಿಜಯನಗರ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಹೌದು ಅತ್ಯಾಚಾರ ನಡೆದ ಬಳಿಕ ಸಂತ್ರಸ್ತೆ ಯುವತಿ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.ಇದೀಗ ಪೊಲೀಸರು, ಸಂತ್ರಸ್ತೆ ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು, ಶ್ರೇಯಸ್ ಹಾಗೂ ಶಶಾಂಕ್ ಎಂದು ತಿಳಿದುಬಂದಿದೆ. ಮೈಸೂರಿನ ಪಬ್ ಒಂದರಲ್ಲಿ ಯುವತಿ ಇವರು ಇಬ್ಬರಿಗೆ ಪರಿಚಯವಾಗಿದ್ದಾಳೆ.
ಈ ವೇಳೆ ಓರ್ವ ಆರೋಪಿ ರೂಂ ಬುಕ್ ಮಾಡಿ ಸಂತ್ರಸ್ತೆ ಯುವತಿಯನ್ನು ಕರೆದೋಯ್ದಿದ್ದಾನೆ. ಬಳಿಕ ಸ್ನೇಹಿತನನ್ನು ರೂಂಗೆ ಕರೆಸಿಕೊಂಡು ಇಬ್ಬರು ಅತ್ಯಾಚಾರ ಎಸಗಿದ್ದಾರೆ. ಬಳಿಕ ಅತ್ಯಾಚಾರದ ವಿಡಿಯೋ ಮಾಡಿಕೊಂಡಿದ್ದರು ಎನ್ನಲಾಗಿದೆ. ವಿಜಯನಗರ ಪೊಲೀಸ್ ಠಾಣೆಗೆ ಅತ್ಯಾಚಾರದ ಬಳಿಕ ಯುವತಿ ದೂರು ನೀಡಿದ್ದಳು. ಈಗ ಬಂಧಿತರಿಂದ ಪೊಲೀಸರು ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ.