ರಾಮನಗರ : ರಾಜ್ಯದಲ್ಲಿ 3 ಕ್ಷೇತ್ರಗಳಲ್ಲಿ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಬಿರುಸಾಗಿದ್ದು, ಉಭಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಇದೀಗ ಚನ್ನಪಟ್ಟಣ ಕ್ಷೇತ್ರದಲ್ಲಿ NDA ಅಭ್ಯರ್ಥಿ ಚುನಾವಣಾ ಪ್ರಚಾರ ಕೈಗೊಂಡಿದ್ದು ಯಾರು ಏನೇ ಕುತಂತ್ರ ಮಾಡಿದರು ಜನ ನನ್ನನ್ನು ಕೈ ಬಿಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಅಣಿಗೇರೆ ಗ್ರಾಮದಲ್ಲಿ ಮಾತನಾಡಿದ ಅವರು,ರೈತರ ಸಾಲ ಮನ್ನಾ ಮಾಡಿದ ಕೀರ್ತಿ ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ ಎಂದು ಚುನಾವಣಾ ಪ್ರಚಾರದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದರು. HD ಕುಮಾರಸ್ವಾಮಿ ಎರೆಡು ಬಾರಿ ಚನ್ನಪಟ್ಟಣ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕೆಲವರು 17 ಕೆರೆ ತುಂಬಿಸಿದ್ದೇವೆ ಅಂತ ಪ್ರಚಾರ ತೆಗೆದುಕೊಳ್ಳುತ್ತಾರೆ. ಆದರೆ ಡಿವಿ ಸದಾನಂದ ಗೌಡ ಅವರ ಕಾಲದಲ್ಲಿ ಆ ಕೆರೆಗಳನ್ನು ತುಂಬಿಸಿದ್ದು ಈ ಸೋಮಣ್ಣ ಅನುದಾನ ಕೊಟ್ಟು ಕೆರೆಗಳಿಗೆ ಮರುಜೀವ ನೀಡಿದರು.
ಕುಮಾರಸ್ವಾಮಿ ಕೂಡ 100ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಸಾರಾಯಿ, ಲಾಟರಿ ನಿಷೇಧ ಮಾಡಿದರು ಇತ್ತೀಚಿಗೆ ಆನ್ಲೈನ್ ಗೇಮ್ ಗಳಿಗೆ ಯುವಕರು ಬಲಿ ಆಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಬಿಜೆಪಿ ಜೆಡಿಎಸ್ ಮೈತ್ರಿ ಸರ್ಕಾರ ಬರಬೇಕು. ಚನ್ನಪಟ್ಟಣ ತಾಲೂಕಿನಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಆಗುತ್ತದೆ. ಕಾಂಗ್ರೆಸ್ ಸರ್ಕಾರ ರೈತರಿಗೆ ಸರಿಯಾದ ಬೆಂಬಲ ಬೆಲೆ ಕೊಡುತ್ತಿಲ್ಲ. ಹಾಗಾಗಿ ಈ ಬಾರಿ ಒಂದು ಅವಕಾಶ ಮಾಡಿಕೊಡಿ. ಬದಲಾದ ರಾಜಕೀಯ ಪರಿಸ್ಥಿತಿಯಿಂದ ನಾನು ಸ್ಪರ್ಧೆ ಮಾಡಿದ್ದೇನೆ. ಜನರ ಉತ್ಸಾಹ ನೋಡಿದರೆ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆ. ಜನ ಎಚ್ ಡಿ ಕೆ ದೇವೇಗೌಡರ ಕೆಲಸಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಚುನಾವಣಾ ಪ್ರಚಾರದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದರು.
ಕುಟುಂಬ ರಾಜಕಾರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು ನವೆಂಬರ್ 13ರಂದು ಜನರೇ ಎಲ್ಲದಕ್ಕೂ ಉತ್ತರವನ್ನು ಕೊಡುತ್ತಾರೆ. ತೀರ್ಪು, ತೀರ್ಮಾನ ಮಾಡೋದು ಕ್ಷೇತ್ರದ ಮತದಾರರು. ನಿಖಿಲ್ ಸೋಲಿಸಲು ಸರ್ಕಾರವೇ ಕ್ಷೇತ್ರಕ್ಕೆ ಬರುತ್ತಿರುವ ವಿಚಾರವಾಗಿ ಅವರ ಕೆಲಸ ಅವರು ಮಾಡಿಕೊಳ್ಳಲಿ ನಮ್ಮ ಕೆಲಸ ನಾವು ಮಾಡೋಣ. ನನ್ನ ವಿರುದ್ಧ ಅಭ್ಯರ್ಥಿಗಳನ್ನು ಇಳಿಸಿ ಚುನಾವಣೆ ಮಾಡುತ್ತಿದ್ದಾರೆ ಮಾಡಲಿ. ಏನೇ ಕುತಂತ್ರ ರಾಜಕಾರಣ ಮಾಡಿದರೂ ಜನತೆ ನನ್ನ ಕೈಬಿಡುವುದಿಲ್ಲ ಎಂದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಅಣಿಗೇರೆ ಗ್ರಾಮದಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದರು.