ಬೆಂಗಳೂರು: ಛತ್ ಪೂಜಾ ಆಚರಣೆಗಾಗಿ ಮನೆಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ಯಶವಂತಪುರ-ದಾನಾಪುರ-ಎಸ್ಎಂವಿಟಿ ಬೆಂಗಳೂರು ನಿಲ್ದಾಣಗಳ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು ಓಡಿಸಲಿದೆ. ವಿವರಗಳು ಈ ಕೆಳಗಿನಂತಿವೆ.
ರೈಲು ಸಂಖ್ಯೆ 06261 ಯಶವಂತಪುರ-ದಾನಾಪುರ ವಿಶೇಷ ಎಕ್ಸ್ ಪ್ರೆಸ್ ರೈಲು ನವೆಂಬರ್ 5, 2024 ರಂದು ಯಶವಂತಪುರದಿಂದ ಬೆಳಿಗ್ಗೆ 7:30 ಕ್ಕೆ ಹೊರಟು, ನವೆಂಬರ್ 7 ರಂದು ದಾನಾಪುರ ನಿಲ್ದಾಣವನ್ನು ಬೆಳಿಗ್ಗೆ 5:30 ಕ್ಕೆ ತಲುಪಲಿದೆ.
ರೈಲು ಸಂಖ್ಯೆ 06262 ದಾನಾಪುರ-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು ನವೆಂಬರ್ 9, 2024 ರಂದು ದಾನಾಪುರದಿಂದ ಸಂಜೆ 6:10 ಕ್ಕೆ ಹೊರಟು, ನವೆಂಬರ್ 11 ರಂದು ಎಸ್ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ಮಧ್ಯಾಹ್ನ 1:30 ಗಂಟೆಗೆ ಆಗಮಿಸಲಿದೆ.
ಈ ರೈಲು ಯಲಹಂಕ ಜಂ, ಧರ್ಮಾವರಂ ಜಂ, ಡೋನ್ ಜಂ, ಕಾಚಿಗುಡ, ಕಾಜಿಪೇಟ್ ಜಂ, ಬಲ್ಹಾರ್ಷಾ, ನಾಗ್ಪುರ ಜಂ, ಇಟಾರ್ಸಿ ಜಂ, ಜಬಲ್ಪುರ್, ಕಟ್ನಿ ಜಂ, ಸತ್ನಾ ಜಂ, ಪ್ರಯಾಗರಾಜ್ ಛೋಕಿ ಜಂಕ್ಷನ್, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಬಕ್ಸಾರ್ ಮತ್ತು ಅರಾ ಜಂಕ್ಷನ್ ನಲ್ಲಿ ನಿಲ್ಲಲಿದೆ. ಈ ವಿಶೇಷ ರೈಲು ಒಟ್ಟು 19 ಬೋಗಿಗಳನ್ನು ಒಳಗೊಂಡಿರುತ್ತದೆ.
ರೈಲುಗಳ ಆಗಮನ, ನಿರ್ಗಮನ ಕುರಿತು ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು www.enquiry.indianrail.gov.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದು, ಅಥವಾ NTES ಅಪ್ಲಿಕೇಶನ್ ಬಳಸಿ ಅಥವಾ ಸಹಾಯವಾಣಿ 139 ನಂಬರಗೆ ಡಯಲ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
ನೀವು ವರ್ಷಾಂತದ ‘ಡಿಸೆಂಬರ್’ನಲ್ಲಿ ಪ್ರವಾಸಕ್ಕೆ ಪ್ಲಾನ್ ಮಾಡಿದ್ದೀರಾ.? ಈ ‘ವೀಸಾ ಮುಕ್ತ’ ದೇಶಕ್ಕೆ ಭೇಟಿ ನೀಡಿ
GOOD NEWS: ಮಾಜಿ ಸೈನಿಕರ ಮಕ್ಕಳ ವಿದ್ಯಾಭ್ಯಾಸದ ಶಿಷ್ಯವೇತನ ಹಾಗೂ ಆರ್ಥಿಕ ಅನುದಾನಕ್ಕಾಗಿ ಅರ್ಜಿ ಆಹ್ವಾನ