ಮಂಡ್ಯ : ಸದ್ಯಕ್ಕೆ ರಾಜ್ಯದಲ್ಲಿ ವಕ್ಫ್ ವಿವಾದ ನಿಲ್ಲುವಂತೆ ಕಾಣುತ್ತಿಲ್ಲ. ಈಗಾಗಲೇ ಬಿಜೆಪಿ ಕೋಲಾರದಲ್ಲಿ ನಾಳೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಇನ್ನೊಂದೆಡೆ ಬಿಜೆಪಿ ಸಂಸದ ಇದೇ ವಿಚಾರವಾಗಿ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಸರ್ಕಾರಿ ಶಾಲೆಯ ಒಂದು ವಕ್ಫ್ ಆಸ್ತಿಗೆ ಸೇರಿದ್ದು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.
ಹೌದು ಸರ್ಕಾರಿ ಶಾಲೆಯ ಮೇಲು ವಕ್ಫ್ ಬೋರ್ಡ್ ಕಣ್ಣು ಹಾಕಿದೆ ಎಂಬ ಆರೋಪ ಕೇಳಿ ಬಂದಿದೆ. ಸರ್ಕಾರಿ ಶಾಲೆ ಜಾಗ ಕೂಡ ಇದೀಗ ವಕ್ಫ್ ಆಸ್ತಿ ಎಂದು ನಮೂದಗಿರುವುದು ಬೆಳಕಿಗೆ ಬಂದಿದೆ. ಶ್ರೀರಂಗಪಟ್ಟಣ ತಾಲೂಕಿನ ಚಂದಗಾಲು ಗ್ರಾಮದಲ್ಲಿ ಈ ಒಂದು ಘಟನೆ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗ್ರಾಮ ಸರ್ವೆ ನಂಬರ್ 215ರ 30ಗುಂಟೆ ಜಮೀನಿನಲ್ಲಿ ಈ ಒಂದು ಸರ್ಕಾರಿ ಶಾಲೆ ಇದೆ. ಶಾಲೆಯ ಜಾಗವನ್ನು ವಕ್ಫ್ ಆಸ್ತಿ ಎಂದು ಬದಲಾವಣೆ ಮಾಡಲಾಗಿದೆ. 2015 ರಲ್ಲಿ ಶಾಲೆ ಜಾಗ ವಕ್ಫ್ ಆಸ್ತಿ ಎಂದು ಬದಲಾವಣೆ ಮಾಡಲಾಗಿದೆ. ಶಾಲೆಯ ಜಾಗ ಕಬಳಿಕೆಗೆ ಮುಂದಾದ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದ ವಕ್ಫ್ ಮಂಡಳಿ ವಜಾಗೋಳಿಸಲು ಒತ್ತಾಯಿಸಿದ್ದಾರೆ.